ಬೆಂಗಳೂರು:ಕರ್ನಾಟಕ ಅರಣ್ಯ ಇಲಾಖೆ (ಕೆಎಲ್​ಡಿ)ಯ ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರ ಅನ್ವಯ ಅರಣ್ಯ ವೀಕ್ಷಲ (ಫಾರೆಸ್ಟ್​ ವಾಚರ್​) ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನುಸಾರ ಅರ್ಜಿ ಸಲ್ಲಿಸಬಹುದು.
ಒಟ್ಟು 310 ಅರಣ್ಯ ವೀಕ ಹುದ್ದೆಗಳಿವೆ.
ಶೈಣಿಕ :ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್​ಎಸ್​ಎಲ್​ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.
ವಯೋಮಿತಿ:ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕಿದ್ದು, 35 ವರ್ಷದೊಳಗಿರುವ ಸಾಮಾನ್ಯ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. 2ಎ, 2ಬಿ, 3ಎ,3ಬಿ ಹಾಗೂ ಒಬಿಸಿಗಳಿಗೆ 3 ವರ್ಷ, ಎಸ್ಸಿ,ಎಸ್ಟಿಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ.
ಸಾಮಾನ್ಯ ಅಭ್ಯರ್ಥಿಯು 125 ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 45ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕಿಯ ಮತೆ ತಪಾಸಣೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ:ಅರಣ್ಯ ವೀಕ್ಷಕನಾಗಿ ಆಯ್ಕೆಯಾದವರಿಗೆ ಪ್ರತಿ ತಿಂಗಳು 21,400 ರೂ.ನಿಂದ 42,000 ರೂ. ವೇತನ ನೀಡಲಾಗುತ್ತದೆ.
ಅರಣ್ಯ ವೀಕ್ಷಕನು ಅರಣ್ಯದೊಳಗೆ ಅಕ್ರಮವಾಗಿ ನುಸುಳಿ ಬೇಟೆಯಾಡುವಿಕೆ ಕುರಿತು ನಿಗಾ ವಹಿಸಬೇಕಿದ್ದು, ಇದರೊಂದಿಗೆ ಮರದ ದಿಮ್ಮಿಗಳ ಹಾಗೂ ಪ್ರಾಣಿಗಳ ಸ್ಮಗ್ಲಿಂಗ್​ ನಡೆಯದಂತೆ ನಿಗಾವಹಿಸಬೇಕು. ಇದರೊಂದಿಗೆ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಅರಣ್ಯ ವೀಕ್ಷಕನ ಕಾರ್ಯ ಮಹತ್ತರವಾಗಿರುತ್ತದೆ.

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nine + one =
Remember me
