ಬೆಂಗಳೂರು:ಹಿಂದುಳಿದ ವರ್ಗಗಳಲ್ಲಿರುವ ಜಾತಿಗಳನ್ನು ಜೋಡಿಸಿ ಉನ್ನತಿಗೆ ಶ್ರಮಿಸುವುದರಿಂದ ದೇಶ ಬಲಿಷ್ಠವಾಗುವ ಜತೆಗೆ ಪಕ್ಷದ ಸಂಘಟನೆ ಸದೃಢಗೊಳಿಸಲು ಅನುಕೂಲವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಿವಿಮಾತು ಹೇಳಿದರು. ಯಲಹಂಕದ ಖಾಸಗಿ ರೆಸಾರ್ಟ್​ನಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷದ ಒಬಿಸಿ (ಇತರೆ ಹಿಂದುಳಿದ ವರ್ಗಗಳು) ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಾತಿಗಳ ಮಧ್ಯೆ ದ್ವೇಷ ಸರಿಯಲ್ಲ. ಪರಸ್ಪರ ಪ್ರೀತಿ, ಪಕ್ಷದಲ್ಲಿರುವ ವಿವಿಧ ಜಾತಿಗಳ ಮುಖಂಡರು ಆಯಾ ಸಮುದಾಯದ ಜತೆಗೆ ನಿಕಟ ಬಾಂಧವ್ಯ ಸಾಧಿಸಿ ಪ್ರಭಾವಿ ನಾಯಕರಾಗಲು ಸಾಧ್ಯವಿದೆ ಎಂದರು. ಪ್ರತಿಯೊಬ್ಬ ಕಾರ್ಯಕರ್ತನ ಬಗ್ಗೆ ಪಕ್ಷದ ಬಳಿ ಮಾಹಿತಿಯಿರುತ್ತದೆ. ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಸ್ಥಾನಮಾನ ಪಡೆಯುವ ಅವಕಾಶವಿದೆ. ಬಿಜೆಪಿಯ ವಿಶೇಷತೆಯಿದಾಗಿದ್ದು, ಪಕ್ಷದ ಒಬಿಸಿ ಮುಖಂಡರು ಅಂತಹದ್ದೇ ವೈಶಿಷ್ಟ್ಯ ಬೆಳೆಸಿಕೊಳ್ಳಬೇಕು ಎಂದರು. ಆಯಾ ಸಮುದಾಯದ ಪ್ರತಿಯೊಂದು ಸಮಸ್ಯೆಗಳನ್ನು ಗುರುತಿಸಿ ಸಂಬಂಧಿಸಿದವರ ಗಮನಕ್ಕೆ ತಂದು ಬಗೆಹರಿಸಿದರೆ ಸಮುದಾಯದ ವಿಶ್ವಾಸಕ್ಕೆ ಪಾತ್ರರಾಗಿರುವಿರಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ನೀಡಿ ಬಳಕೆಗೆ ನೆರವಾಗುವುದು, ಒಬಿಸಿ ಸಮುದಾಯಗಳ ಉನ್ನತಿಗೆ ಬೇಕಾದ ಯೋಜನೆ ರೂಪಿಸಲು ಹಿಮ್ಮಾಹಿತಿ ನೀಡಬೇಕು ಎಂದು ನಡ್ಡಾ ತಿಳಿಹೇಳಿದರು.
ಮೋದಿ ಸಾಧನೆ:ಪ್ರಧಾನಿ ನರೇಂದ್ರ ಮೋದಿ ಸಮಾಜದ ಕಟ್ಟಕಡೆಯ ವ್ಯಕ್ತಿ ಉದ್ಧಾರಕ್ಕೆ ಶ್ರಮಿಸುತ್ತಿದ್ದು, ಪ್ರತಿ ಸಣ್ಣ ವಿಷಯವನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ಸ್ಪಂದಿಸುತ್ತಾರೆ. ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ವಿಪಕ್ಷಗಳ ಬಗ್ಗೆ ಮಾಹಿತಿ ಅರಿತಿರಬೇಕಾದ ಕುತೂಹಲ ಪ್ರವೃತ್ತಿ, ಜವಾಬ್ದಾರಿ ಇರಲೇಬೇಕು. ಪ್ರತಿಯೊಬ್ಬ ಕಾರ್ಯಕರ್ತನಿಗೆ ತರಬೇತಿ ನೀಡುವ ಪಕ್ಷದ ಸಂಘಟನೆಗೆ ದುಡಿಯವ, ವೈಯಕ್ತಿಕ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ನಡ್ಡಾ ಹೇಳಿದರು.
ವಸತಿ ಶಾಲೆ, ಹಾಸ್ಟೆಲ್​ಗಳಿಗೆ ಸಲಹೆ:ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದು, ಅವರೊಬ್ಬ ಜಾಗೃತ ನಾಯಕರು ಎಂಬುದು ಎತ್ತಿ ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ ಎಂದು ಜೆ.ಪಿ.ನಡ್ಡಾ ಪ್ರಶಂಸಿಸಿದರು. ಅಲ್ಲದೆ, ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಹಾಸ್ಟೆಲ್​ಗಳು, ವಸತಿ ಶಾಲೆಗಳನ್ನು ಪ್ರಾರಂಭಿಸಬೇಕು. ಜತೆಗೆ ಉದ್ಯೋಗ ನೀಡುವಂತಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಇದ್ದರು.
ಮನೆ ಮನೆಗೆ ಪ್ರಚಾರ:ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದಲ್ಲಿ ಪಕ್ಷದ ತತ್ವ-ಸಿದ್ಧಾಂತ, ನೀತಿಗಳು, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎಂಟು ವರ್ಷಗಳ ಸಾಧನೆ ಬಗ್ಗೆ ರ್ಚಚಿಸಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ ನಂತರ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಮಂತ್ರಿ ಮಂಡಲದಲ್ಲಿ ಒಬಿಸಿಗೆ ಹೆಚ್ಚು ಪ್ರಾತಿನಿಧ್ಯ, ಹಿಂದುಳಿದ ವರ್ಗಗಳ ಆಯೋಗಕ್ಕೆ ಶಾಸನಾತ್ಮಕ ಸ್ಥಾನಹಿಂದುಳಿದ ವರ್ಗಗಳಿಗೆ ಶೇ.27 ಮೀಸಲು ಕಲ್ಪಿಸಿರುವುದು ಇತ್ಯಾದಿಗಳ ಕುರಿತು ಜನರಿಗೆ ಮಾಹಿತಿ ನೀಡಲೆಂದು ಮನೆ ಮನೆಗೆ ಪ್ರಚಾರ ಮಾಡಲಿದ್ದೇವೆ ಎಂದರು. ಈ ಪ್ರಶಿಕ್ಷಣ ವರ್ಗದಲ್ಲಿ ಪ್ರತಿನಿಧಿಗಳಿಗೆ ಕೇಂದ್ರ ಸಚಿವರು ಮಾರ್ಗದರ್ಶನ ನೀಡಿದರು.
ಬೇಡುವುದಲ್ಲ, ಕೊಡುವ ಕೈ:ಯುವ ಜನರು ಉದ್ಯೋಗ ಬೇಡುವುದಲ್ಲ, ನಾಲ್ಕು ಜನರಿಗೆ ಉದ್ಯೋಗ ಅವಕಾಶಗಳನ್ನು ಕೊಡುವ ಕೈಯಾಗಿ ಸಾಮರ್ಥ್ಯ ಹೊಂದಬೇಕು ಎನ್ನುವುದು ಬಿಜೆಪಿ ಆಶಯವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ಅಂತಾರಾಷ್ಟ್ರೀಯ-ರಾಷ್ಟ್ರೀಯ ವಿಚಾರಗಳ ಬಗ್ಗೆ ಉತ್ತರಿಸುತ್ತಲೇ ಮೂರು ದಿನಗಳ ಪ್ರಶಿಕ್ಷಣ ವರ್ಗದಲ್ಲಿ ಪಡೆದ ತರಬೇತಿ, ಮಾಡಿಕೊಂಡ ಟಿಪ್ಪಣಿ ಬಗ್ಗೆ ಕೇಳಿ ತಿಳಿದುಕೊಂಡರು. ಉದ್ಯಮ-ವ್ಯವಹಾರ ನಡೆಸು ವುದು ಸರ್ಕಾರದ ಕೆಲಸವಲ್ಲ. ಜನತೆಯ ಕಲ್ಯಾಣಕ್ಕಾಗಿ ಶ್ರಮಿಸುವುದು ಆದ್ಯ ಕರ್ತವ್ಯವಾಗಿದ್ದು, ಸೇವಾ ಮನೋ ಭಾವದ ಅಗತ್ಯತೆಯತ್ತ ಗಮನಸೆಳೆದರು ಎನ್ನಲಾಗಿದೆ.
ತಲೆಗೆ ಹುಳ:ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡಿನಲ್ಲಿ ಪಕ್ಷ ಗೆಲುವುದಿಲ್ಲ. ಅಧಿಕಾರಕ್ಕೆ ಬರುವುದೇ ಇಲ್ಲವೆಂದು ತಲೆಗೆ ಬಿಟ್ಟುಕೊಂಡಿರುವ ಹುಳ ತೆಗೆದು ಹಾಕಿ. ಸಾಧನೆ ಎಂಬುದು ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಆಗುವುದಲ್ಲ. ಮೂರು ರಾಜ್ಯಗಳಲ್ಲಿ ಮತಗಳ ಗಳಿಕೆ ಪ್ರಮಾಣ ಪಕ್ಷದ ಬೆಳವಣಿಗೆ ಎತ್ತಿ ತೋರಿಸುತ್ತದೆ ಎಂದು ಬಿ.ಎಲ್.ಸಂತೋಷ್ ಹುರಿದುಂಬಿಸಿದರು ಎನ್ನಲಾಗಿದೆ.
ಮೈಸೂರು:ನಗರದ ಅರಮನೆ ಆವರಣದಲ್ಲಿ ಜೂ.21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೈಸೂರು ರಾಜಮನೆತನದ ಸದಸ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ, ಯೋಗ ಕಾರ್ಯಕ್ರಮ ನಂತರ ಮೋದಿ ರಾಜಮನೆತನದ ಆತಿಥ್ಯ ಸ್ವೀಕರಿಸಲಿದ್ದಾರೆ. ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ನಡೆಯುತ್ತಿದ್ದರೂ ವೇದಿಕೆಗೆ ಮೈಸೂರು ರಾಜಮನೆತನದವರಿಗೆ ಆಹ್ವಾನ ನೀಡದೆ ಇರುವುದಕ್ಕೆ ಮೈಸೂರಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಜಮನೆತದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡಲಾಗಿದೆ.
ಯುದ್ಧೋಪಾದಿ ಸಿದ್ಧತೆ:ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಸಾರ್ವಜನಿಕ ಸಮಾರಂಭಕ್ಕೆ ಕೊಮ್ಮಘಟ್ಟದ ಬಳಿ ಯುದ್ಧೋಪಾದಿ ಸಿದ್ಧತೆಗಳಾಗುತ್ತಿವೆ. ಮೂರು ವಿಭಾಗಗಳಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ವಿಂಗಡಿಸಲಾಗಿದೆ. ಎಂಟು ಅಡಿ ಎತ್ತರ, 140/140 ಅಡಿ ವಿಸ್ತಾರದ ವಿಶಾಲ ವೇದಿಕೆ, 700/400 ಅಡಿ ಬೃಹತ್ ಸಭಾಮಂಟಪ ನಿರ್ವಿುಸಲಾಗಿದ್ದು, ಒಟ್ಟು 10 ಎಕರೆ ಪ್ರದೇಶವನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಜಾಗೃತ ವರ್ಗ:ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದರೆ ದೇಶ ಮತ್ತು ಪಕ್ಷವೂ ಸಶಕ್ತವಾಗಲಿದೆ. ಮೋದಿಯವರು ಈ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಹಿಂದಿನಿಂದಲೂ ನೀಡಿರುವ ಕಾರಣ ಜಾಗೃತ ವರ್ಗವಾಗಿದೆ ಎಂದು ಹೇಳಿದರು. ಒಟ್ಟು ಜನಸಂಖ್ಯೆಯಲ್ಲಿ ಶೇ.33ರಷ್ಟು ಹೆಚ್ಚಿನ ಪ್ರಾಬಲ್ಯ ಹೊಂದಿರುವ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ, ಪ್ರಬಲಗೊಳಿಸುವ ಕೆಲಸ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಹಿಂದುಳಿದ ವರ್ಗಗಳ ಸಶಕ್ತೀಕರಣ ಸಂಕಲ್ಪ:ಹಿಂದುಳಿದ ವರ್ಗಗಳನ್ನು ಸಶಕ್ತಗೊಳಿಸುವ ಮೂಲಕ ಭಾರತವನ್ನು ಸಶಕ್ತಗೊಳಿಸುವ ಸಂಕಲ್ಪ ಮಾಡಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳ ಶ್ರೇಯೋಭಿವೃದ್ಧಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಶಯದ ಪ್ರಕಾರ ಎಲ್ಲರನ್ನು ಒಳಗೊಂಡ ಎಲ್ಲರ ವಿಕಾಸಕ್ಕೆ ಈ ಬಾರಿ ಬಜೆಟ್​ನಲ್ಲಿ ಒತ್ತು ನೀಡಿರುವೆ. ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ಸಮಾನತೆ ಸಾಧಿಸುವುದು ಸರ್ಕಾರದ ಇಚ್ಛೆಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
