ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಹಾಡಹಗಲೇ ಜೋಡಿ ಕೊಲೆಯಾಗಿದ್ದು, ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆದರೆ ಕೊಲೆ ಆರೋಪಿ ಜೋಕರ್ ಫೆಲಿಕ್ಸ್ ಮಾತ್ರ ಘಟನೆಯ ಸುದ್ದಿಯನ್ನು ಸ್ಟೇಟಸ್​ಗೆ ಕೆಜಿಎಫ್​ ಮ್ಯೂಸಿಕ್ ಜತೆ ಅಪ್ಲೋಡ್ ಮಾಡಿದ್ದಾನೆ!
ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಇಒ ವಿನು ಕುಮಾರ್ ಕೊಲೆಯಾದವರು. ಈ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!
ಏರೋನಿಕ್ಸ್ ಇಂಟರ್​ನೆಟ್​ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ, ಸಿಎಒ ವಿನು ಕುಮಾರ್ 2022ರಲ್ಲಿ ತಾವೇ ಒಂದು ಕಂಪನಿಯನ್ನು ಶುರು ಮಾಡಿದ್ದರು. ಈ ಕಂಪನಿ ಅಮೃತಹಳ್ಳಿ ಬಳಿಯ ಪಂಪ ಲೇಔಟ್​ನಲ್ಲಿದ್ದು ಕೇವಲ ಏಳು ಎಂಟು ತಿಂಗಳಲ್ಲಿ ಸಾಕಷ್ಟು ಲಾಭ ಕಂಡಿದ್ದರು. ಈ ಕೊಲೆ ಆರೋಪಿ ಜೋಕರ್ ಫೆಲಿಕ್ಸ್​ನನ್ನು ಆಗ ಫಣೀಂದ್ರ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಡಬಲ್ ಮರ್ಡರ್ ಬೆನ್ನಿಗೇ ನಗರದಲ್ಲಿ ಮತ್ತೊಬ್ಬ ಉದ್ಯಮಿಯ ಬರ್ಬರ ಕೊಲೆ!
ಇದೀಗ ಈತ ಕೊಲೆ ಮಾಡಿ ತಲೆಮರೆಸಿಕೊಂಡಿದ್ದು ಇನ್​ಸ್ಟಾಗ್ರಾಂ ಖಾತೆಯಲ್ಲಿ ನಿನ್ನೆಯೇ ಸ್ಟೇಟಸ್​ ಹಾಕಿಕೊಂಡಿದ್ದಾನೆ.ಈ ಕುರಿತಾಗಿ ಅನೇಕರು ಆತಂಕ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸ್ಟೇಟಸ್​ ಹಾಕಿಕೊಳ್ಳುವ ಸುಮಾರು 10 ಗಂಟೆಗಳ ಮುನ್ನ ಈತ, ನಾನು ಕೇವಲ ಕೆಟ್ಟವರನ್ನು ಮಾತ್ರ ನೋಯಿಸುತ್ತೇನೆ ಎಂದೂ ಬರೆದು ಹಾಕಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 18 =
Remember me
