|ಕೇಶವಮೂರ್ತಿ ವಿ.ಬಿ.ಹಾವೇರಿ
ಗುಪ್ತ ಮತದಾನ ಮಾಡುತ್ತೇವೆ ಎಂದು ಗುಪ್ತವಲ್ಲದ ಮತದಾನವನ್ನು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರತಿ ಬಾರಿ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಮುಂದಿನ ಸಮ್ಮೇಳನದ ಸ್ಥಳ ಘೋಷಿಸಲಾಗುತ್ತಿತ್ತು. ಶನಿವಾರದ ಸಭೆ ಗದ್ದಲದಲ್ಲಿ ಮುಕ್ತಾಯಗೊಂಡ ಕಾರಣ, ಭಾನುವಾರಕ್ಕೆ ಸಭೆಯನ್ನು ಮುಂದೂಡಲಾಗಿತ್ತು. ಈ ಪ್ರಕಾರ, ಭಾನುವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮತದಾನ ಸರಿಯಾಗಿ ನಡೆದಿಲ್ಲ ಎಂಬ ಅಪಸ್ವರ ಕೇಳಿಬಂದಿದೆ.
ತಮ್ಮದೇ ಸೀಲು ಹಾಕಿದ ಹಾಳೆಯನ್ನು ಸದಸ್ಯರಿಗೆ ಕೊಟ್ಟು, ಇದರಲ್ಲಿ ನಿಮ್ಮ ಹೆಸರು ಬರೆದು, ಯಾವ ಜಿಲ್ಲೆಗೆ ನಿಮ್ಮ ಮತ ಎಂಬುದನ್ನು ಬರೆಯಿರಿ ಎಂದಿದ್ದರು. ಆದರೆ, ಗುಪ್ತ ಮತದಾನ ಎಂದರೆ ಹೆಸರು ಯಾಕೆ ಬರೆಯಬೇಕು ಎಂದು ಕೆಲವರು ಬರೆದಿರಲಿಲ್ಲ. ಹೆಸರು ಬರೆಯದ ಮತಗಳನ್ನು ಅಸಿಂಧು ಮಾಡಲಾಗುವುದು ಎಂದು ಮೊದಲೇ ತಿಳಿಸದೆ ಹೆಸರು ಬರೆಯದವರ ಮತವನ್ನು ಅಸಿಂಧುಗೊಳಿಸುವ ಮೂಲಕ ಪೈಪೋಟಿಯಲ್ಲಿದ್ದ ಇತರ ಜಿಲ್ಲೆಗಳಿಗೆ ಮೋಸ ಮಾಡಿದ್ದಾರೆ. ಸದಸ್ಯರ ಹಕ್ಕು ಕಿತ್ತುಕೊಂಡು ಮಂಡ್ಯ ಜಿಲ್ಲೆಗೆ ಕೊಡಿಸಿದ್ದಾರೆ. ಇದರಲ್ಲಿ ಒಳ ಒಪ್ಪಂದದ ವಾಸನೆ ಬರುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಕಸಾಪ ಸದಸ್ಯರೊಬ್ಬರು ‘ವಿಜಯವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.
ಆತಿಥ್ಯದ ಆಯ್ಕೆ ಪ್ರಕ್ರಿಯೆ:ಸಮ್ಮೇಳನ ಆಯೋಜಿಸಲು ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ, ರಾಮನಗರ, ಬಳ್ಳಾರಿ, ಬೆಳಗಾವಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗಳು ಮುಂದೆ ಬಂದಿದ್ದವು. ಬೇಡಿಕೆ ಹಿಂಪಡೆಯಲು ಅವಕಾಶ ನೀಡಿದಾಗ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಳಗಾವಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗಳು ಹಿಂಪಡೆದುಕೊಂಡವು. ಹೀಗಾಗಿ ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಬಳ್ಳಾರಿ ಸಮಿತಿಗಳಿಗಾಗಿ ಚುನಾವಣೆ ನಡೆಸಲಾಯಿತು. ಈ ಚುನಾವಣೆಯಲ್ಲಿ ಒಟ್ಟು 54 ಅರ್ಹ ಮತಗಳಿದ್ದವು. ಅದರಲ್ಲಿ 8 ಸದಸ್ಯರು ಗೈರಾಗಿದ್ದರು. ಹಾಜರಿದ್ದ 46 ಸದಸ್ಯರು ಮತ ಚಲಾಯಿಸಿದರು. ಇದರಲ್ಲಿ 17 ಮತಗಳನ್ನು ಪಡೆಯುವ ಮೂಲಕ ಮಂಡ್ಯ ಆತಿಥ್ಯಕ್ಕೆ ಅರ್ಹತೆ ಪಡೆಯಿತು ಎಂದು ಬಳ್ಳಾರಿ ಪರ 14, ಚಿಕ್ಕಮಗಳೂರು 5 ಮತ ಪಡೆದರೆ, ಉತ್ತರಕನ್ನಡಕ್ಕೆ ಒಂದೂ ಮತ ಲಭಿಸಲಿಲ್ಲ. ಇನ್ನುಳಿದ ಮತಗಳು ಅಸಿಂಧುಗೊಂಡಿವೆ ಎಂದು ಮಹೇಶ ವಿವರಿಸಿದರು.
ಜ್ಞಾನಯೋಗಿಯ ಬಳಿ ಪಾರಿವಾಳ; ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಬಿಟ್ಟು ಹೋಗದ ಪಕ್ಷಿ!

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
