ಬೆಂಗಳೂರು:ಇಂದು (ಜುಲೈ 07) ನಡೆದ ನಗರದ ಪ್ರತಿಷ್ಠಿತ ʼಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರುʼ ಚುನಾವಣೆಯಲ್ಲಿ ಪತ್ರಕರ್ತರಾದ ಆರ್. ಶ್ರೀಧರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮೋಹನ್​ ಕುಮಾರ್​ ಅವರು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಕ್ಲಬ್​ನ ಅಧ್ಯಕ್ಷ ಸ್ಥಾನಕ್ಕಾಗಿ ಮೂವರು ಪತ್ರಕರ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಧ್ಯಾನ್‌ ಪೂಣಚ್ಚ, ಆರ್. ಶ್ರೀಧರ ಹಾಗೂ ಸುಭಾಷ್‌ ಹೂಗಾರ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಂತಿಮವಾಗಿ ಚುನಾವಣ ಫಲಿತಾಂಶದಲ್ಲಿ ಅತಿ ಹೆಚ್ಚು ಮತಗಳೊಂದಿಗೆ ಆರ್​. ಶ್ರೀಧರ್​ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ್‌ ಹೀರೇಮಠ್‌, ಬಿ.ಎನ್.ಮೋಹನ್‌ ಕುಮಾರ್‌ ಹಾಗೂ ವಿಶ್ವನಾಥ್‌ ಭಾಗವತ್‌ ಕಣದಲ್ಲಿದ್ದರು. ಅಂತಿಮವಾಗಿ ಮೋಹನ್​ ಕುಮಾರ್​ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದೊಡ್ಡ ಬೊಮ್ಮಯ್ಯ, ಟಿ. ಮಂಜುನಾಥ್‌, ಎಂ.ಡಿ ಶಿವಕುಮಾರ್‌ ಬೆಳ್ಳಿತಟ್ಟೆ, ಹಾಗೂ ವೈ.ಎಸ್.ಎಲ್.‌ ಸ್ವಾಮಿ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಶಿವಕುಮಾರ್​ ಬೆಳ್ಳಿತಟ್ಟೆಯವರು ಆಯ್ಕೆಯಾಗಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್​ನ 2024-25ನೇ ಸಾಲಿಗೆ ಚುನಾಯಿತರಾದವರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ…* ಆರ್. ಶ್ರೀಧರ್- ಅಧ್ಯಕ್ಷರು* ಮೋಹನ್ ಕುಮಾರ್- ಉಪಾಧ್ಯಕ್ಷರು* ಶಿವಕುಮಾರ್ ಬೆಳ್ಳಿ ತಟ್ಟೆ- ಪ್ರಧಾನ ಕಾರ್ಯದರ್ಶಿ* ಮಂಜುನಾಥ್ ಜಿ.ವೈ – ಕಾರ್ಯದರ್ಶಿ* ಧರಣೀಶ್ ಬಿ.ಎನ್ – ಜಂಟಿ ಕಾರ್ಯದರ್ಶಿ* ಗಣೇಶ್ ಜಿ – ಖಜಾಂಚಿ
ಕಾರ್ಯಕಾರಿ ಸಮಿತಿ* ಶಿವಣ್ಣ* ಯಾಸಿರ್ ಮುಸ್ತಾಕ್* ಶರಣಬಸಪ್ಪ ಎ.ಎಚ್.* ಮಮ್ತಾಜ್ ಅಲಿಮ್* ರೋಹಿಣಿ ವಿ. ಅಡಿಗ* ಸಿ.ಆರ್.ಮಂಜುನಾಥ್
ಮಹಿಳಾ ಮೀಸಲು ಕ್ಷೇತ್ರ* ಮಿನಿ ತೇಜಸ್ವಿನಿ
ಜಿಂಬಾಬ್ವೆ ವಿರುದ್ಧದ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ‘ಹಿಟ್​​ಮ್ಯಾನ್’​ ನೆನಪಿಸಿದ ಅಭಿಷೇಕ್​ ಶರ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
