ಹುಬ್ಬಳ್ಳಿ:ಕೇಂದ್ರ ಸರ್ಕಾರದಿಂದ ಹಣಕಾಸು ಹಂಚಿಕೆಯಲ್ಲಿ ಮೋದಿ ಸರ್ಕಾರ ಬಂದ ನಂತರ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಪಾದಿಸಿದರು.
ಇದನ್ನೂ ಓದಿ:ಕುಸಿದ ಕಾನೂನು ಸುವ್ಯವಸ್ಥೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆರ್ ಅಶೋಕ್ ಆಗ್ರಹ
ನಗರದ ಡೆನ್ನಿಸನ್ಸ್ ಹೋಟೆಲ್​ನಲ್ಲಿ ಭಾನುವಾರ ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳಿಗೆ ಅನುದಾನ ನೀಡಿಕೆಯಲ್ಲಿಯೂ ಮೂರು ಪಟ್ಟು ಹೆಚ್ಚಳವಾಗಿದೆ.‌ ಇದ್ಯಾವುದನ್ನೂ ಸರಿಯಾಗಿ ಗಮನಿಸದ ಕಾಂಗ್ರೆಸ್ ನವರು ತಿಳಿದುಕೊಳ್ಳದೆ ಜಾಹೀರಾತು ಮೂಲಕ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

10 ವರ್ಷಗಳಿಂದ ದೇಶದಲ್ಲಿ ಸಾಕಷ್ಟು ಬದಲಾವಣೆ:ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವೋಟ್ ಬ್ಯಾಂಕ್, ಜಾತಿ ಆಧಾರಿತ ಸರ್ಕಾರಗಳು ತೊಲಗಿ, ಅಭಿವೃದ್ಧಿ ಪರ ಸರ್ಕಾರ ಬಂದಿದೆ. ಮೋದಿ ಸರ್ಕಾರ ಬಡವರು, ಯುವಕರು, ಅನ್ನದಾತರು, ನಾರಿಯರು ಹೀಗೆ ಎಲ್ಲ ಸಮುದಾಯದವರನ್ನು ಜೋಡಿಸುವ ಕೆಲಸ ಮಾಡುತ್ತದೆ. ಆದರೆ ರಾಹುಲ್ ಗಾಂಧಿ ಅವರು ಅರವತ್ತು ವರ್ಷ ತಮ್ಮದೇ ಸರ್ಕಾರ ಮಾಡದೇ ಇರುವ ಬಡತನ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ನೇರಪ್ರಸಾರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ@JPNaddaಅವರೊಂದಿಗೆ ಸಾರ್ವಜನಿಕಸಭೆ,ಹುಬ್ಬಳ್ಳಿhttps://t.co/uU6yvYgUOo
— Pralhad Joshi (@JoshiPralhad)April 21, 2024

ಈಗಷ್ಟೇ ಬೆಳಕಿನ ದಿನಗಳು ಕಾಣುತ್ತಿವೆ:ಎಂಬತ್ತು ಕೋಟಿ ಭಾರತೀಯರಿಗೆ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಭದ್ರತೆ ನೀಡಲಾಗಿದೆ. ಅದರಲ್ಲಿ ಕರ್ನಾಟಕದ ನಾಲ್ಕು ಕೋಟಿ ಜನರೂ ಇದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಇಪ್ಪತ್ತೈದು ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇದು ಮೋದಿ ಸರ್ಕಾರದ ಸಾಧನೆ ಎಂದ ನಡ್ಡಾ, ಯುಪಿಎ ಸರ್ಕಾರದಲ್ಲಿ ಕತ್ತಲ ದಿನಗಳನ್ನು ನೋಡಿದ್ದ ನಮಗೆ ಈಗಷ್ಟೇ ಬೆಳಕಿನ ದಿನಗಳು ಕಾಣುತ್ತಿವೆ. ವಿಕಸಿತ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರಕ್ಕೆ ಮತ್ತೆ ಅಧಿಕಾರ ನೀಡಬೇಕಿದೆ.‌ ಇದು ಜೋಶಿ ಅವರ ಚುನಾವಣೆ ಅಲ್ಲ, ಇದು ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಚುನಾವಣೆ ಎಂದರು.

ಇಂಡಿಯಾ ಎಂಬುದು ಘಮಂಡಿಯಾ ಅಲೈಯನ್ಸ್ ಎಂದು ಜರಿದ ನಡ್ಡಾ, ಇದರಲ್ಲಿ ಇರುವವರು ಎಲ್ಲರೂ ಪರಿವಾರದ ಪಾರ್ಟಿಗಳಿಂದ ಬಂದವರು. ಈ ಪಕ್ಷಗಳ ಅರ್ಧ ನಾಯಕರು ಬೇಲ್ ಮೇಲೆ ಇನ್ನರ್ಧ ನಾಯಕರು ಜೈಲಿನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ಮೋದಿ ಸರ್ಕಾರ ಬಂದ ನಂತರ 25 ಸಾವಿರ ಕೋಟಿ ರೂ. ಅಭಿವೃದ್ಧಿ ಕೆಲಸಗಳು ಧಾರವಾಡದಲ್ಲಿ ಆಗಿವೆ. ಧಾರವಾಡ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಮಹಾತ್ಮ ಗಾಂಧಿ ಒಬ್ಬರೇ ಎಲ್ಲ ಜಾತಿ, ಜನಾಂಗ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿದ್ದರು. ಅವರ ನಂತರ ಮೋದಿ ಮಾತ್ರ ಆ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಮನ ಮುಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
IPL 2024: ಕೆಕೆಆರ್ ವಿರುದ್ಧ ಆರ್​ಸಿಬಿಗೆ ವೀರೋಚಿತ ಸೋಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + 8 =
Remember me
