ಬೆಂಗಳೂರು:ಅಬ್ಬರದ ಪ್ರಚಾರ, ಜನಶಕ್ತಿ ಪ್ರದರ್ಶನದ ಉದ್ದೇಶದಿಂದ ಆಡಳಿತ ಬಿಜೆಪಿ ಕೈಗೆತ್ತಿಕೊಳ್ಳಲಿರುವ ರಥಯಾತ್ರೆ ಮಾರ್ಗಪಥ ಸಿದ್ಧವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗ್ರೀನ್ ಸಿಗ್ನಲ್​ಗೆ ಪಕ್ಷದ ರಾಜ್ಯ ನಾಯಕರು ಕಾಯುತ್ತಿದ್ದಾರೆ. ಬೂತ್​ವುಟ್ಟದ ಅಭಿಯಾನ, ಎರಡನೇ ಹಂತದ ವಿಜಯಸಂಕಲ್ಪ ಕಾರ್ಯಕ್ರಮದ ಬಳಿಕ ವಿಜಯ ಸಂಕಲ್ಪ ರಥಯಾತ್ರೆಯನ್ನು ಮಾ.1ರಂದು ರಾಜ್ಯದ ನಾಲ್ಕು ಕಡೆಯಿಂದ ಏಕಕಾಲಕ್ಕೆ ಆರಂಭಿಸಲು ರೂಪರೇಷೆ ಸಿದ್ಧಪಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ಸಚಿವರು ತಲಾ ಒಂದು ತಂಡದ ನೇತೃತ್ವವಹಿಸಲಿದ್ದು, ಪ್ರಾದೇಶಿಕ ಅಸ್ಮಿತೆ ಜತೆಗೆ ವಿವಿಧ ಸಮುದಾಯಗಳ ಓಲೈಕೆಗೆ ಯಾತ್ರೆಗೆ ಹೆಸರುಗಳನ್ನು ಗುರುತಿಸಿದೆ.
ರಥಯಾತ್ರೆ ಮಾರ್ಗಪಥ, ಕಾರ್ಯಕ್ರಮದ ರೂಪರೇಷೆ, ಹೆಸರುಗಳಿಗೆ ನಡ್ಡಾ ಅಸ್ತು ಎಂದ ಮೇಲೆ ಅಧಿಕೃತವಾಗಿ ಪ್ರಕಟಿಸಲು ಪಕ್ಷದ ರಾಜ್ಯ ನಾಯಕರು ಯೋಚಿಸಿದ್ದಾರೆ. ರಾಜ್ಯ ಪ್ರವಾಸ ಮುಗಿಸಿಕೊಂಡು ನಡ್ಡಾ ಬೆಂಗಳೂರಿಗೆ ಬಂದು ದೆಹಲಿಗೆ ಮರಳಲಿದ್ದು, ಈ ಅವಕಾಶ ಬಳಸಿಕೊಂಡು ರಥಯಾತ್ರೆ ಬಗ್ಗೆ ರ್ಚಚಿಸಿ ಒಪ್ಪಿಗೆ ಪಡೆಯುವ ಚಿಂತನೆ ನಡೆಸಿದ್ದಾರೆ.
ನಾಲ್ಕು ಯಾತ್ರೆಗಳಿಗೆ ತಲಾ ಒಬ್ಬ ಕೇಂದ್ರ ನಾಯಕರಿಂದ ಚಾಲನೆ ಕೊಡಿಸಲು ಯೋಜಿಸಿರುವ ಕಾರಣ ಕಾಲಾವಕಾಶಕ್ಕೆ ಪಡೆಯಬೇಕಾಗುತ್ತದೆ. ನಡ್ಡಾ ಅಸ್ತು ಎಂದರೆ ಕೇಂದ್ರ ನಾಯಕರನ್ನು ಒಪ್ಪಿಸುವುದು ಹೆಚ್ಚು ಕಷ್ಟವಾಗದು ಎಂದು ಮೂಲಗಳು ತಿಳಿಸಿವೆ.
ಎರಡು ದಿನ ಪ್ರವಾಸ:ಎರಡು ದಿನ ಮೂರು ಜಿಲ್ಲೆಗಳ ಪ್ರವಾಸಕ್ಕಾಗಿ ನಡ್ಡಾವರು ಭಾನುವಾರ ರಾತ್ರಿಯೇ ಮಂಗಳೂರಿಗೆ ಬಂದಿಳಿದಿದ್ದು, ಫೆ.20ರಂದು ಉಡುಪಿಯಲ್ಲಿ ಬೂತ್​ವುಟ್ಟದ ಸಮಾವೇಶ, ಬೈಂದೂರಿನಲ್ಲಿ ಸಾರ್ವಜನಿಕ ಸಭೆ, ಸಂಜೆ ಕೊಪ್ಪದಲ್ಲಿ ಅಡಕೆ ಬೆಳೆಗಾರರ ಸಮಾವೇಶ, ಶೃಂಗೇರಿಯಲ್ಲಿ ಜನಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಳ್ಳುವರು.
ಫೆ.21ರ ಬೆಳಗ್ಗೆ ಚಿಕ್ಕಮಗಳೂರಿನಲ್ಲಿ ಪ್ರಬುದ್ಧರ ಸಭೆ, ಮಧ್ಯಾಹ್ನ ಹಾಸನ ಜಿಲ್ಲೆಯ ಬೇಲೂರಿನ ಸಾರ್ವಜನಿಕ ಸಭೆ, ಸಂಜೆ ಹಾಸನದ ಬೂತ್​ವುಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೂರು ಜಿಲ್ಲೆಗಳ 17 ವಿಧಾನಸಭೆ ಕ್ಷೇತ್ರಗಳ ಪೈಕಿ 10ರಲ್ಲಿ ಪಕ್ಷದ ಶಾಸಕರಿದ್ದು, ಎ ವರ್ಗವೆಂದು ವಿಂಗಡಿಸಲಾಗಿದೆ. ಉಡುಪಿ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವ ವಿಶ್ವಾಸದಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯ ಐದರಲ್ಲಿ ನಾಲ್ಕು ಗೆದ್ದಿದ್ದು, ಈ ಬಾರಿ ಬಿ ವರ್ಗದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಗೆದ್ದು, ಐದು ತನ್ನ ವಶಕ್ಕೆ ಪಡೆಯುವ ತಂತ್ರ ರೂಪಿಸಿದೆ. ಹಾಸನ ಜಿಲ್ಲೆಯ ಏಳರಲ್ಲಿ ಒಂದು ಕ್ಷೇತ್ರ ಮಾತ್ರ ಬಿಜೆಪಿ ಗೆದ್ದಿದ್ದು, ಈ ಬಾರಿ ಚುನಾವಣೆಗೆ ಆ ಕ್ಷೇತ್ರವನ್ನು ಎ ಎಂದು ಪರಿಗಣಿಸಿದೆ. ಉಳಿದ ಆರರಲ್ಲಿ ಎರಡು ಬಿ ವರ್ಗಕ್ಕೆ ಸೇರಿಸಿದ್ದು, ನಾಲ್ಕು ಸಿ ವರ್ಗದಲ್ಲಿವೆ. ಹಾಸನ ಜಿಲ್ಲೆಯಲ್ಲಿ ಕನಿಷ್ಠ ಮೂರರಲ್ಲಿ ಗೆಲ್ಲುವ ಗುರಿಯೊಂದಿಗೆ ನಡ್ಡಾ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಕಲ್ಯಾಣದತ್ತ ಷಾ ಚಿತ್ತ:ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಫೆ.23ರಂದು ಬರಲಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದತ್ತ ಚಿತ್ತ ನೆಟ್ಟಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪಕ್ಷದ ಮುಖಂಡರ ಸಭೆಯೊಂದನ್ನು ಬಳ್ಳಾರಿ ಜಿಲ್ಲೆಯಲ್ಲಿ ನಡೆಸಲಿದ್ದಾರೆ. ಕಲ್ಯಾಣ ಕರ್ನಾಟಕದ ರಾಜಕೀಯ ವಿದ್ಯಮಾನ, ವಿವಿಧ ಪಕ್ಷಗಳ ವಸ್ತುಸ್ಥಿತಿ ಜತೆಗೆ ಪಕ್ಷದ ಪರಿಸ್ಥಿತಿ, ಕಾರ್ಯಯೋಜನೆ ಅನುಷ್ಠಾನ ಮತ್ತು ಫಲಿತಾಂಶಗಳ ಮಾಹಿತಿ ಪಡೆದು, ನಿರ್ದಿಷ್ಟ ಜವಾಬ್ದಾರಿ ನಿಗದಿಪಡಿಸುವ ಸಾಧ್ಯತೆಗಳಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೆ.20 ಮತ್ತು 21ರಂದು ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು. ವಿವಿಧ ಸಭೆ, ಸಮಾವೇಶಗಳಲ್ಲಿ ಪಾಲ್ಗೊಂಡು ಫೆ.21ರ ರಾತ್ರಿ ಬೆಂಗಳೂರಿನಿಂದ ದೆಹಲಿಗೆ ಹಿಂತಿರುಗುವರು.
|ಎನ್. ರವಿಕುಮಾರ್ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.
ಹುಬ್ಬಳ್ಳಿ/ಶಿಗ್ಗಾಂವಿ:ಕಾಂಗ್ರೆಸ್ಸಿನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಅವರು ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ. ಆ ಮೇಲೆ ರಾಜ್ಯದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ನರಕ ಸೃಷ್ಟಿಯಾಗಿದೆ ಎಂಬ ಸುರ್ಜೆವಾಲಾ ಹೇಳಿಕೆಗೆ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಜನರು ಮನೆಗೆ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಜನರಿಗೆ ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳಿಂದ ಜನರ ಮೇಲೆ ಪ್ರಭಾವ ಬೀರಲು ಹೊರಟಿದ್ದಾರೆ. ಇದು ಸಾಧ್ಯವಿಲ್ಲ ಎಂದರು. ಅಸುರರು ಯಾರು, ದೇವತೆಗಳು ಯಾರು ಎಂದು ಜನರಿಗೆ ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್​ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆ ಎಂದರು.
ಕಾಂಗ್ರೆಸ್​ನವರು ಇಷ್ಟು ದಿನ ಜನರ ತಲೆ ಮೇಲೆ ಹೂ ಇಟ್ಟಿದ್ದರು. ಇನ್ನು ಶಾಶ್ವತವಾಗಿ ಅವರು ಹೂವು ಇಟ್ಟುಕೊಳ್ಳಲಿ. ಅವರಿಗೆ ಹೂ ಇಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್​ನವರು ತಮ್ಮ ಬಜೆಟ್​ನಲ್ಲಿ ಏನು ಹೇಳಿದ್ದರೋ ಅದನ್ನು ಮಾಡಿಲ್ಲ. ರಾಮನಗರದಲ್ಲಿ ಹೊಸ ರಾಮ ಮಂದಿರ ನಿರ್ವಿುಸಬೇಕೆಂಬುದು ಅಲ್ಲಿಯ ಜನರ ಇಚ್ಛೆಯಾಗಿದೆ. ಜನರ ಬೇಡಿಕೆಗೆ ಸ್ಪಂದಿಸಿ ಮಾಡುತ್ತಿದ್ದೇವೆ. ವಿರೋಧ ಮಾಡುವವರು ಮಾಡಲಿ, ನಮ್ಮದೇನೂ ತಕರಾರಿಲ್ಲ. ಆದರೆ, ಅಲ್ಲಿ ರಾಮ ಮಂದಿರ ಆಗಿಯೇ ಆಗುತ್ತದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + six =
Remember me
