ಕೋಲಾರ:ಉಚಿತ ಕಾನೂನು ಸೇವೆಗಾಗಿ ಮನವಿ ಸಲ್ಲಿಸಿದ್ದ ಅಂಧನೋರ್ವನ ಹಿಂಬರಕ್ಕೆ ಹಠ ಮಾಡುತ್ತಿದ್ದ ವಿಷಯ ತಿಳಿದ ನ್ಯಾಯಾಧೀಶರೇ ಕೋರ್ಟ್ ಹೊರಗಡೆ ರಸ್ತೆ ಬದಿ ಕುಳಿತಿದ್ದ ಅರ್ಜಿದಾರನ ಬಳಿ ಬಂದು ಸಮಸ್ಯೆ ಆಲಿಸಿದ ಪ್ರಸಂಗ ಮುಳಬಾಗಿಲಿನಲ್ಲಿ ನಡೆದಿದೆ.ಕರೊನಾ ಹಿನ್ನೆಲೆಯಲ್ಲಿ ನ್ಯಾಯಾಯಕ್ಕೆ ಹಾಗೂ ಕಕ್ಷಿದಾರರಿಗೆ ಪ್ರವೇಶ ನಿಬರ್ಂಧಿಸಲಾಗಿದೆ. ಉಚ್ಛ ನ್ಯಾಯಾಲಯ ಕರೊನಾ ಹಿನ್ನೆಲೆಯಲ್ಲಿ ಹೊರಡಿಸಿರುವ ಎಸ್‍ಒಪಿ ಮಾರ್ಗದರ್ಶನದ ಪ್ರಕಾರ ಯಾವುದೇ ಲಿಖಿತ ಮನವಿಯನ್ನು ನ್ಯಾಯಾಲಯದಲ್ಲಿ ಇಡಲಾದ ಕ್ವಾರಂಟೈನ್ ಬಾಕ್ಸ್‍ನಲ್ಲಿ ಇಟ್ಟ 24 ಗಂಟೆ ನಂತರ ಅದನ್ನು ಸಂಬಂಧಿಸಿದ ಸಿಬ್ಬಂದಿಗೆ ಕಳುಹಿಸಿ ಪರಿಶೀಲನೆ ಮತ್ತು ವಿಚಾರಣೆ ಮಾಡಬೇಕು ಎಂದಿದೆ.ಮುಳಬಾಗಿಲು ನಗರದ ತಾತಿಪಾಳ್ಯದ ಅಂಧ ದೇವರಾಜಾಚಾರಿ ಉಚಿತ ಕಾನೂನು ಸೇವೆಗೆ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ತನ್ನ ಮನವಿ ಏನಾದೀತು ಎಂಬ ಆತಂಕದಲ್ಲಿದ್ದ ದೇವರಾಜಾಚಾರಿ ಹಿಂಬರಹ ನೀಡುವಂತೆ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಹಠಕ್ಕೆ ಬಿದ್ದಿದ್ದರು.ಈ ಕುರಿತು ಸಿಬ್ಬಂದಿಗಳು ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರೂ ಆಗಿರುವ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಜಿ ಹುಸೇನ ಸಾಬ ಯಾದವಾಡ ಅವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ನ್ಯಾಯಾಧೀಶರು ನ್ಯಾಯಾಲಯದ ಮುಖ್ಯದ್ವಾರಕ್ಕೆ ಬಂದು ಹೊರಗಡೆ ಕೂತಿದ್ದ ದೇವರಾಜಾಚಾರಿ ಪಕ್ಕದಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಕುಳಿತರಲ್ಲದೆ ಸಮಸ್ಯೆ ಆಲಿಸಿದ್ದು ನೆರೆದಿದ್ದ ಕಕ್ಷಿದಾರರಲ್ಲಿ ಕುತೂಹಲ ಕೆರಳಿಸಿತ್ತು. ನ್ಯಾಯಾಧೀಶರ ಮಾನವೀಯತೆ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
