ಕಾರವಾರ: ಇತ್ತೀಚಿನ ದಿನಗಳಲ್ಲಿ ವಯೋವೃದ್ಧರನ್ನು ಸರಿಯಾಗಿ ನೋಡಿಕೊಳ್ಳದೇ ದಾರಿಯಲ್ಲೋ ಅನಾಥಾಶ್ರಮದಲ್ಲೋ ಬಿಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇಲ್ಲೊಬ್ಬ ವೃದ್ಧೆಯನ್ನು ಅವರ ಕುಟುಂಬದವರು ಕನಿಷ್ಠವಾಗಿ ನೋಡಿಕೊಂಡ ಕಾರಣ ಅನ್ನ ಆಹಾರ ಇಲ್ಲದೇ ನರಳಾಡಿದ ಘಟನೆ ನಡೆದಿದೆ.
ಕಾರವಾರದಲ್ಲಿ ಕುಟುಂಬವೊಂದು ಕಮಲಾ ಪಾಂಡ್ರೆಕರ್ ಎನ್ನುವ ವೃದ್ಧೆಯನ್ನು ತೀರಾ ಕೆಟ್ಟದಾಗಿ ನಡೆಸಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಇದನ್ನು ಗಮನಿಸಿದ ನ್ಯಾಯಾಧೀಶರೊಬ್ಬರು ವೃದ್ಧೆಯನ್ನು ರಕ್ಷಿಸಿದ್ದಾರೆ. ಅನ್ನ ಆಹಾರ ಇಲ್ಲದೇ ನರಳಾಡುತ್ತಿದ್ದ ವೃದ್ದೆಯನ್ನು ರಕ್ಷಣೆ ಮಾಡಿದ ನ್ಯಾಯಾಧೀಶರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಿರಿಯ ನ್ಯಾಯಾಧೀಶೆ ರೇಣುಕಾ ರಾಯ್ಕರ್ ಅವರು ವೃದ್ಧೆಯನ್ನು ಪತ್ತೆ ಹಚ್ಚಿದ್ದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವೃದ್ಧೆಯ ರಕ್ಷಣೆ ಮಾಡಲಾಗಿದೆ. ಈ ವೃದ್ಧೆಯನ್ನು ಕೋಡಿಭಾಗ ಕಮಲಾ ಪಾಂಡ್ರೆಕರ್ (೬೫)ಎಂದು ಗುರುತಿಸಲಾಗಿದೆ. ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ ನ್ಯಾಯಾಧೀಶರು ಚಿಕಿತ್ಸೆ ಕೊಡಿಸಿದ್ದು. ವೃದ್ದೆ ಆರೈಕೆ ಮಾಡದೇ ಕನಿಷ್ಟವಾಗಿ ನೋಡಿದ ಕುಟುಂಬದರನ್ನು ತರಾಟೆಗೆ ತೆಗೆದುಕೊಂಡು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
