| ಕೀರ್ತಿನಾರಾಯಣ ಸಿ. ಬೆಂಗಳೂರು
ಕರ್ತವ್ಯಲೋಪ ಎದುರಿಸುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧದ ಇಲಾಖಾ ವಿಚಾರಣೆಗೆ (ಡಿಇ) ರಾಜ್ಯ ಸರ್ಕಾರ ಹೊಸ ಪದ್ಧತಿ ಅನುಷ್ಠಾನಕ್ಕೆ ತಂದಿದೆ. ಪ್ರಕರಣದ ವಿಚಾರಣೆಗೆ ಆಯಾ ಘಟಕದ ಅಧಿಕಾರಿಯನ್ನೇ ವಿಚಾರಣಾಧಿಕಾರಿಯನ್ನಾಗಿ ನೇಮಿಸುವ ಬದಲು ಇನ್ನುಮುಂದೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದೆ. ಇದೇ ವೇಳೆ ಜಿಲ್ಲಾವಾರು ಸೇವೆ ಸಲ್ಲಿಸಲು ಇಚ್ಛಿಸುವ 119 ನಿವೃತ್ತ ನ್ಯಾಯಾಧೀಶರ ಹೆಸರುಗಳ ಸಮೇತ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ.
ಸದ್ಯ ಇಲಾಖಾ ವಿಚಾರಣೆಗಾಗಿ ಕರ್ತವ್ಯನಿರತ ಅಧಿಕಾರಿಗಳನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡುವ ಪದ್ಧತಿ ಜಾರಿಯಲ್ಲಿದೆ. ಆದರೆ, ಅಧಿಕಾರಿಯನ್ನು ನೇಮಕ ಮಾಡುವುದರಿಂದ ಅವರ ದಿನ ನಿತ್ಯದ ಕರ್ತವ್ಯದ ಜತೆಗೆ ಅಪರಾಧ, ಕಾನೂನು ಸುವ್ಯವಸ್ಥೆ, ತನಿಖೆ, ಮೇಲ್ವಿಚಾರಣೆ ಮತ್ತು ಇತರೆ ಕರ್ತವ್ಯಗಳ ಬಗ್ಗೆಯೂ ನಿಗಾವಹಿಸಬೇಕಿರುವುದರಿಂದ, ಆ ಕೆಲಸಗಳಿಗೂ ಅಡಚಣೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಹಲವು ತಿಂಗಳುಗಳಾದರು ಇಲಾಖಾ ವಿಚಾರಣೆಗಳು ವಿಲೇವಾರಿಯಾಗದೆ ವಿಳಂಬವಾಗಿದೆ. ಇದರಿಂದ ಆರೋಪ ಎದುರಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗೂ ಸಮಸ್ಯೆಯಾಗಿದೆ. ಇಲಾಖಾ ವಿಚಾರಣೆಗಳು ತ್ವರಿತವಾಗಿ ಪೂರ್ಣ ಗೊಳ್ಳಬೇಕೆಂಬ ಉದ್ದೇಶದಿಂದಲೇ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲು ಪೊಲೀಸ್ ಇಲಾಖೆಗೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆಯಾ ವಲಯ ಅಥವಾ ಜಿಲ್ಲೆಗೆ ಅನುಸಾರವಾಗಿ ಲಭ್ಯವಿರುವ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್​ಗಳ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಯಾಗಿ ನೇಮಕಗೊಳಿಸಿ, ಆದೇಶ ಹೊರಡಿಸ ಬಹುದು ಎಂದು ಪೊಲೀಸ್ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ. ಇದರನ್ವಯ ಹೊಸ ಪದ್ಧತಿ ಅನುಷ್ಠಾನಗೊಳಿಸುವಂತೆ ಇಲಾಖೆಯ ಎಲ್ಲ ಘಟಕಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಲಿಖಿತ ಆದೇಶ ಹೊರಡಿಸಿದ್ದಾರೆ.
ನೇಮಕಾತಿ ಹೇಗೆ?:ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡವಳಿಗಳು) ನಿಯಮಗಳು 1965 (89) ಮತ್ತು ತಿದ್ದುಪಡಿ ನಿಯಮ 2022ರ ನಿಯಮ 6(2) ಅನ್ವಯ ಶಿಸ್ತು ಪ್ರಾಧಿಕಾರ ಅಥವಾ ಅವರಿಂದ ಅಧಿಕೃತಗೊಳಿಸಲಾದ ಯಾವುದೇ ಪ್ರಾಧಿಕಾರ ನಿವೃತ್ತ ನ್ಯಾಯಾಧೀಶರನ್ನು ನೇಮಕಗೊಳಿಸಲು ಇಚ್ಛಿಸಿದಲ್ಲಿ, ಸೂಕ್ತ ಆದೇಶ ಹೊರಡಿಸಬೇಕು. ಇದರ ಜತೆಗೆ ನಿಯಮ 6 ಮತ್ತು 6 (8) ಅನ್ವಯ ವಿವಿಧ ಘಟಕಗಳಲ್ಲಿ ಆದೇಶಿಸಲಾದ ಇಲಾಖಾ ವಿಚಾರಣೆಗಳಲ್ಲಿ ಪ್ರಾರಂಭಿಕ ಹಂತದಿಂದ ಅಂತಿಮ ವರದಿವರೆಗೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಇಲಾಖೆಗೆ ಸೂಚಿಸಿದೆ.
* ಕರ್ತವ್ಯನಿರತ ಅಧಿಕಾರಿಯೇ ವಿಚಾರ ಣಾಧಿಕಾರಿಯಾದರೆ ವಿಚಾರಣೆ ವಿಳಂಬ
* ದಿನನಿತ್ಯದ ಕರ್ತವ್ಯಗಳ ಜತೆಗೆ ಹೆಚ್ಚುವರಿ ಕೆಲಸವಾಗಿ ವಿಚಾರಣೆ ನಡೆಸಬೇಕು
* ಇಲಾಖೆಯ ಅಧಿಕಾರಿ/ಸಿಬ್ಬಂದಿ ವಿರುದ್ಧವೇ ಆರೋಪವಿರುವ ಕಾರಣ ಪಾರದರ್ಶಕ ವಿಚಾರಣೆ ಅಸಾಧ್ಯ
* ವಿಚಾರಣೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆ ವಿಳಂಬದಿಂದ ಆರೋಪಿತ ಅಧಿಕಾರಿಗೂ ಸಮಸ್ಯೆ
* ಬಹುತೇಕ ಕೇಸ್​ಗಳಲ್ಲಿ ಡಿಇ ಆದೇಶವಾಗುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿ ಸಸ್ಪೆಂಡ್ ಮಾಡಲಾಗುತ್ತೆ
* ಅಂತಿಮ ವರದಿ ಸಲ್ಲಿಸುವವರೆಗೆ ಅಮಾನತುಗೊಂಡರೂ ಅರ್ಧ ವೇತನ ಕೊಡಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ
* ನಿವೃತ್ತ ನ್ಯಾಯಾಧೀಶರ ನೇಮಕದಿಂದ ಇಲಾಖಾ ವಿಚಾರಣೆ ತ್ವರಿತವಾಗಿ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆ
* ನಿಗದಿತ ಪ್ರಕರಣ ನೀಡುವುದರಿಂದ ವಿಚಾರಣೆ ಪೂರ್ಣಗೊಳ್ಳುವವರೆಗೂ ಜಡ್ಜ್ ಅದಕ್ಕಷ್ಟೇ ಸೀಮಿತವಾಗಿರುವುದರಿಂದ ಶೀಘ್ರ ವಿಲೇ
* ಇಲಾಖೆ ಮುಖ್ಯಸ್ಥರು ಇಲಾಖಾ ವಿಚಾರಣೆಗೆ ಆದೇಶಿಸುತ್ತಿ ದ್ದಂತೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ಆದೇಶಿಸಬಹುದು
ಯಾವ ಜಿಲ್ಲೆಗೆ ಎಷ್ಟು ಜಡ್ಜ್ ಲಭ್ಯ?:ಬೆಂಗಳೂರು ನಗರ – 48, ಬೆಂಗಳೂರು ಗ್ರಾಮಾಂತರ- 9, ಕೋಲಾರ- 1, ರಾಮನಗರ- 3, ಚಿಕ್ಕಬಳ್ಳಾಪುರ- 2, ಮೈಸೂರು- 6, ಹಾಸನ- 2, ಚಾಮರಾಜನಗರ- , ಮಂಡ್ಯ-2, ದಾವಣಗೆರೆ-2, ಹಾವೇರಿ-3, ಶಿವಮೊಗ್ಗ-2, ಚಿತ್ರದುರ್ಗ-1, ದಕ್ಷಿಣ ಕನ್ನಡ-4, ಉತ್ತರಕನ್ನಡ – 2, ಚಿಕ್ಕಮಗಳೂರು-1, ಉಡುಪಿ-1, ಬೆಳಗಾವಿ-9, ಗದಗ-3, ಧಾರವಾಡ-7, ಬಾಗಲಕೋಟೆ-2, ಕಲಬುರಗಿ-2, ಬಳ್ಳಾರಿ-2, ರಾಯಚೂರು-1, ಕೊಪ್ಪಳ-2.
ಯಾವಾಗ ಇಲಾಖಾ ವಿಚಾರಣೆ?:ಕರ್ತವ್ಯಲೋಪ, ಭ್ರಷ್ಟಾಚಾರ, ಶಿಷ್ಠಾಚಾರ ಉಲ್ಲಂಘನೆ, ಅಶಿಸ್ತು, ಮೇಲಧಿಕಾರಿಗಳ ಜತೆ ದುರ್ವರ್ತನೆ ಸೇರಿ ಇನ್ನಿತರ ಆರೋಪಗಳು
Paris Paralympics : ಜೂಡೋ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − 4 =
Remember me
