ಬೆಂಗಳೂರು:ಸ್ಯಾಂಡಲ್​ವುಡ್​ ನಟ ದಿ.ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ಪುತ್ರನಿಗೆ ಇಂದು(ಗುರುವಾರ) ಶುಭದಿನ.
ಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಜೂನಿಯರ್​ ಚಿರುಗೆ ತೊಟ್ಟಿಲು ಶಾಸ್ತ್ರ ನೇರವೇರಿದೆ. ಇದೇ ವೇಳೆ ಸಂತಸ ಹಂಚಿಕೊಂಡ ಮೇಘನಾ ತಂದೆ ಸುಂದರ್ ರಾಜ್, ತವರು ಮನೆಯ ಶಾಸ್ತ್ರವನ್ನು ಇದೀಗ ನೆರವೇರಿಸಿದ್ದೇವೆ. ಮೊಮ್ಮಗ ಹುಟ್ಟಿ ಇಂದಿಗೆ 22 ದಿನ ಎಂದರು.
ಅಂದಹಾಗೆ ಇಂದು ಜೂನಿಯರ್​ ಚಿರು ಮಲಗಿದ ತೊಟ್ಟಿಲನ್ನು ಗದಗ ದಿಂದ ತರಲಾಗಿದೆ. ಸಾಗುವಾನಿ ಮರದಿಂದ ಸಿದ್ಧಪಡಿಸಿರುವ ತೊಟ್ಟಿಲು ಸಂಪೂರ್ಣ ಹ್ಯಾಂಡ್ ಲೂಂನಿಂದಲೇ ತಯಾರಾಗಿದೆ. 150 ವರ್ಷ ಬಾಳಿಕೆ ಬರುವ ತೊಟ್ಟಿಲು ಇದಾಗಿದ್ದು, 50 ಕೆಜಿ ತೂಕ ಇದೆ ಎಂದು ಸುಂದರ್ ರಾಜ್ ಕುಟುಂಬದ ಆಪ್ತೆ ವನಿತಾ ಗುತ್ತಲ್ ಹೇಳಿದರು.
ತೊಟ್ಟಿಲ ಶಾಸ್ತ್ರ ಪ್ರಯುಕ್ತ ಮನೆಯಂಗಳವನ್ನು ಹೂವು, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 6 ಗಂಟೆಗೆ ತೊಟ್ಟಿಲಿಗೆ ಸುಂದರ್ ರಾಜ್ ಹಾಗೂ ಪ್ರಮೀಳಾ ಪೂಜೆ ಮಾಡಿದರು. ಪೂಜೆ ನಂತರ ತೊಟ್ಟಿಲಿಗೆ ರುಬ್ಬುವ ಕಲ್ಲು ಇಟ್ಟು ಶಾಸ್ತ್ರ ಆರಂಭಿಸಲಾಯಿತು. ಬಳಿಕ ತೊಟ್ಟಿಲಿಗೆ ಮಗುವನ್ನು ಹಾಕಿದ ಮೇಘನಾ ರಾಜ್ ಸಂಭ್ರಮಿಸಿದರು.
PHOTOS| ಜೂನಿಯರ್​ ಚಿರು ಎಕ್ಸ್​ಕ್ಲ್ಯೂಸೀವ್​ ಫೋಟೋಗಳು ಇಲ್ಲಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + two =
Remember me
