ಬೆಂಗಳೂರು:ಹುದ್ದೆಯ ಘನತೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.
ರೇಸ್​ಕೋರ್ಸ್​ ರಸ್ತೆಯ ಶ್ರೀ ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಉಪ ಲೋಕಾಯುಕ್ತ ಹುದ್ದೆ ಸ್ವೀಕರಿಸಿದ ಬಳಿಕ ನನ್ನ ಮೇಲೆ ಇರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ವಿಶ್ವಾಸವಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಏಳೂವರೆ ಕೋಟಿ ಕನ್ನಡಿಗರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಭ್ರಷ್ಟಾಚಾರ ನಿಮೂರ್ಲನೆಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ವಕೀಲರು ಸುಳ್ಳು ದೂರು ನೀಡಬಾರದು. ಒಂದು ವೇಳೆ ಸುಳ್ಳು ಕೇಸ್​ ನೀಡಿದರೆ ಅಂತಹವರ ವಿರುದ್ಧವೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಡೆವಲಪರ್​ ಎಸ್​. ಯೋಗೇಶ್​ ಬೆಸ್ತರ್​ ಸ್ಕಾಲರಲಿ ಅಭಿವೃದ್ಧಿಪಡಿಸಿರುವ ಹಳೆಯ ವಿದ್ಯಾರ್ಥಿ ಸಂದ ವೆಬ್​ಪೋರ್ಟಲ್​ ಅನಾವರಣ ಮಾಡಲಾಯಿತು. ಪೋರ್ಟಲ್​ನಲ್ಲಿ ಉದ್ಯೋಗದ ಮಾಹಿತಿ, ಹಳೆಯ ವಿದ್ಯಾರ್ಥಿಗಳ ನೋಂದಣಿ ಸೇರಿ ಹಲವು ಸೌಲಭ್ಯಗಳಿವೆ. ಹಿರಿಯ ವಕೀಲರಾದ ಪ್ರೊ. ನಾಗಭೂಷಣ್​, ಎಂ.ಟಿ. ನಾಣಯ್ಯ, ಉದಯ್​ ಹೊಳ್ಳ, ಬೆಂಗಳೂರು ವಕೀಲರ ಸಂದ ಅಧ್ಯಕ್ಷ ವಿವೇಕ್​ ಸುಬ್ಬಾರೆಡ್ಡಿ, ಎಸ್​ಜೆಆರ್​ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಲ್ಮಠ ಮತ್ತಿತರರಿದ್ದರು.
ಪೊಲೀಸ್​ ಅಧಿಕಾರಿ ಆಗ್ಬೇಕಿತ್ತು…ನಾನು ಪೋಲಿಸ್​ ಅಧಿಕಾರಿ ಆಗಬೇಕೆಂಬುದು ತಂದೆಯ ಆಸೆಯಾಗಿತ್ತು. ಪೊಲೀಸ್​ ಹುದ್ದೆಗೆ ಆಯ್ಕೆಯಾಗಿ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದೆ. ಆದರೆ ಈ ಕೆಲಸ ಕೊಡಿಸಲು ಮಂತ್ರಿಯೊಬ್ಬ 70 ಸಾವಿರ ರೂ. ಲಂಚ ಕೇಳಿದ್ದ. ಅಂಥ ಕೆಲಸಕ್ಕೆ ನಾನು ಹೋಗಲ್ಲ ಅಂತ ಅಪ್ಪನಿಗೆ ಹೇಳಿದೆ. ಜಮೀನು ಮಾರಾಟ ಮಾಡಿ ಹಣ ಕೊಡುತ್ತಿದ್ದೆ. ಏಕೆ ಕೆಲಸ ಬೇಡ ಅನ್ನುತ್ತಿಯಾ ಎಂದು ಅಪ್ಪ ಬೈದಿದ್ದರು ಎಂದು ನ್ಯಾ. ಬಿ. ವೀರಪ್ಪ ಹಳೇ ಘಟನೆಯನ್ನು ಮೆಲುಕು ಹಾಕಿದರು. ಪದವಿ ಮುಗಿದ ಬಳಿಕ ಸ್ನಾತಕೋತ್ತರ ಪದವಿ ಓದಲು ಹಲವು ಕಾಲೇಜುಗಳಲ್ಲಿ ಪ್ರಯತ್ನಿಸಿದ್ದೆ. ಒಂದು ಕಾಲೇಜಿನಲ್ಲಿ ಕ್ರೀಡಾ ಕೋಟದಲ್ಲಿ ಪ್ರವೇಶ ಪಡೆಯಲು ಅವಕಾಶ ಸಿಕ್ಕಿತ್ತು. ಶುಲ್ಕ ಕಟ್ಟಲು ಹಣ ಇಲ್ಲದೆ ತಡವಾಗಿತ್ತು. ಅಷ್ಟೊತ್ತಿಗೆ ಆ ಕೋಟಾದಡಿ ಇನ್ನೊಬ್ಬರಿಗೆ ಪ್ರವೇಶ ನೀಡಲಾಗಿತ್ತು. ಅಂತಿಮವಾಗಿ ಶ್ರೀ ರೇಣುಕಾಚಾರ್ಯ ಕಾನೂನು ಮಹಾವಿದ್ಯಾಲಯದಲ್ಲಿ ಕ್ರೀಡಾ ಕೋಟಾದಲ್ಲಿ ಎಲ್​ಎಲ್​ಬಿ ಕೋರ್ಸ್​ಗೆ ಪ್ರವೇಶ ಪಡೆದೆ. ನಾನೊಬ್ಬ ಉತ್ತಮ ಕುಸ್ತಿಪಟು ಆಗಿದ್ದೆ. ಹಲವು ಟೂರ್ನಿಮೆಂಟ್​ಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದಿದೆ. ಕಾಲೇಜು ದಿನಗಳಲ್ಲಿ ಸಾಕಷ್ಟೂ ಸವಿ ನೆನಪುಗಳಿದ್ದವು. ಈ ಕಾಲೇಜು ನನ್ನನ್ನು ಉನ್ನತ ಹುದ್ದೆಯಲ್ಲಿ ಕೆಲಸ ಮಾಡಲು ಕೊಡುಗೆ ಕೊಟ್ಟಿದೆ. ಇದಕ್ಕೆ ಕಾಲೇಜಿಗೆ, ನನ್ನ ಎಲ್ಲ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
‘ಕಾಲ್ಪನಿಕ ದೃಶ್ಯ ಕಾವ್ಯ’ ಅನಂತ್ ಅಂಬಾನಿ – ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು!
ಕೋಟ್​​:ಸಮಾಜದಲ್ಲಿ ಪ್ರಾಮಾಣಿಕತೆ ಎಂಬುದು ಕಣ್ಮರೆಯಾಗುತ್ತಿರುವ ನಡುವೆಯೂ ಉಪ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ನೇಮಿಸಿರುವುದು ಸಂತಸ ತಂದಿದೆ. ನ್ಯಾಯಮೂರ್ತಿಯಾಗಿ ಒಳ್ಳೆಯ ಕೆಲಸ ಮಾಡಿರುವ ಇವರು ಪ್ರಾಮಾಣಿಕೆತೆಗೆ ಮತ್ತೊಂದು ಹೆಸರು. ಇವರ ಜೀವನಧಾರೆಯನ್ನು ಯುವ ವಕೀಲರು ಅಳವಡಿಸಿಕೊಳ್ಳಬೇಕು. ಭ್ರಷ್ಟ್ರಾಚಾರ ತಡೆಯುವ ಕಾನೂನು ಶಕ್ತಿ ವೀರಪ್ಪಗೆ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಂಡು, ಇನ್ನಷ್ಟು ಹೆಸರು ಗಳಿಸುವಂತಾಗಲಿ.>ಎ.ಎಸ್​.ಪೊನ್ನಣ್ಣ. ಸಿಎಂ ಕಾನೂನು ಸಲಹೆಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
