|ಹರೀಶ್ ಬೇಲೂರುಬೆಂಗಳೂರು
ಹೆಸರಿಗೆ ಟೆಂಡರ್…! ಆದರೆ ಖರೀದಿಯೇ ಆಗಲ್ಲ. ರೈತರಿಗೆ ಹಣ ಪಾವತಿಯಾಗೋದು ಲೆಕ್ಕದಲ್ಲಷ್ಟೇ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಭ್ರಷ್ಟಾಚಾರದ ಪರಿಯಿದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ. ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ.
ಗೋಣಿಚೀಲ ಖರೀದಿ ಹಗರಣವನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 7 ನಿರ್ದೇಶಕರೇ ಬೆಳಕಿಗೆ ತಂದಿದ್ದಾರೆ. ಲಕ್ಷಾಂತರ ರೈತರ ಹೆಸರಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಕರು ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ. ಆದರೆ, ಸರ್ಕಾರ ಇದುವರೆಗೆ ಕ್ರಮ ಕೈಗೊಳ್ಳುವ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೊದಲಿಗೆ ಟೆಂಡರ್​ನಲ್ಲಿ ಎಲ್1 (ಪ್ರಥಮ ಕಂಪನಿ) ಪಡೆದ ಕಂಪನಿಯಿಂದ ಕೇವಲ ಶೇ.2 ಗೋಣಿಚೀಲಗಳನ್ನಷ್ಟೇ ಸರಬರಾಜು ಮಾಡುವಂತೆ ನಿಗಮ ಕೋರಿತ್ತು. ರೈತರು ಕೇಳಿದರೆ ಮಾತ್ರ ಅವರಿಗೆ 22 ರೂ.ನಂತೆ ಹಣ ನೀಡುವಂತೆ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಚೀಲ ಖರೀದಿಸದಿದ್ದರೂ ಸರಬರಾಜುದಾರರಿಂದ ಒಂದು ಚೀಲಕ್ಕೆ ತಲಾ 5 ರೂ.ನಂತೆ 3 ಕೋಟಿ ರೂ. ಲಂಚ ಅಧಿಕಾರಿಗಳಿಗೆ ಹೋಗಿದೆ ಎಂಬ ಆರೋಪವಿದೆ. ಎಲ್ಲ ಸರಬರಾಜುದಾರರು ನಕಲಿ ದಾಖಲಾತಿಗಳನ್ನು ಸಲ್ಲಿಸಿ, ಟೆಂಡರ್ ಪಡೆದುಕೊಂಡಿದ್ದಾರೆ.
ಗೋಣಿಚೀಲ ಪೂರೈಸುವುದಾಗಿ ಟೆಂಡರ್ ಪಡೆದುಕೊಂಡ ಕಂಪನಿಗಳು ಗೋಣಿಚೀಲಗಳನ್ನು ಸರಬರಾಜು ಮಾಡಿಲ್ಲ. ಕೆಲ ಜಿಲ್ಲೆಗಳಲ್ಲಿ ಖರೀದಿ ಮುಗಿದ ನಂತರವೂ ಗೋಣಿಚೀಲಗಳು ಸರಬರಾಜು ಆಗಿಲ್ಲ. ರೈತರಿಗೆ ಹಣವಾಗಲಿ ಅಥವಾ ಚೀಲವಾಗಲಿ ತಲುಪಿಲ್ಲ. ಜಿಎಸ್​ಟಿ ಕಾಯ್ದೆ ಅನ್ವಯ ಯಾವುದೇ ಸರಕು 50 ಸಾವಿರ ರೂ. ಮೇಲ್ಪಟ್ಟರೆ ಕಡ್ಡಾಯವಾಗಿ ಇ-ವೇ ಬಿಲ್ ಮುಖೇನ ಸರಬರಾಜು ಮಾಡಬೇಕು. ಆದರೆ, ಟೆಂಡರ್​ನಲ್ಲಿ ಭಾಗವಹಿಸಿದ ಎಲ್ಲ ಸರಬರಾಜುದಾರರು ಇ-ವೇ ಬಿಲ್ ಸಲ್ಲಿಸಿಲ್ಲ. ಸರಬರಾಜುದಾರರು ಕೇವಲ ಒಂದು ಬಿಳಿ ಹಾಳೆಯ ಮೇಲೆ ಕೋಟ್ಯಂತರ ರೂ. ಬಿಲ್ ನೀಡಿದ್ದಾರೆ. ನಿಗಮದ ಮುಖ್ಯಸ್ಥರು, ಸಮಿತಿ ರಚಿಸದೆ ಖುದ್ದು ಹಣ ಬಿಡುಗಡೆ ಮಾಡಿದ್ದಾರೆ ಎಂದು ನಿಗಮದ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗೋಣಿಚೀಲ ಪಡೆಯಿರಿ:ಯೋಜನೆಯಡಿ ಕೇಂದ್ರ ಸರ್ಕಾರ ಉಚಿತವಾಗಿ ಗೋಣಿಚೀಲವನ್ನು ರೈತರಿಗೆ ನೀಡುತ್ತಿದೆ. ಇದಕ್ಕಾಗಿ ನಿಗಮಕ್ಕೆ ಕೋಟ್ಯಂತರ ರೂಪಾಯಿ ಹಣ ಕೊಡುತ್ತಿದೆ. ಇದರ ಬಗ್ಗೆ ರಾಜ್ಯದ ಲಕ್ಷಾಂತರ ರೈತರಿಗೆ ಮಾಹಿತಿ ಇಲ್ಲ. ರಾಗಿ, ಭತ್ತ ಮತ್ತು ಜೋಳ ಮಾರಾಟ ಮಾಡುವ ರೈತರು, ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಣಿಚೀಲ ಅಥವಾ ಅದಕ್ಕೆ ಬದಲಾಗಿ ಹಣ ಪಡೆಯಬಹುದು. ಒಂದು ವೇಳೆ ಅಧಿಕಾರಿಗಳು ನೀಡದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು.
ಏನೇನು ಖರೀದಿ?:ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲು 2021-22ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯಾದ್ಯಂತ ರೈತರಿಂದ 5.24 ಲಕ್ಷ ಮೆಟ್ರಿಕ್ ಟನ್ ರಾಗಿ, 5 ಲಕ್ಷ ಮೆಟ್ರಿಕ್ ಟನ್ ಭತ್ತ ಹಾಗೂ 1.25 ಲಕ್ಷ ಕ್ವಿಂಟಾಲ್ ಜೋಳವನ್ನು ನಿಗಮ ಖರೀದಿಸಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರ ಸರಬರಾಜು ಮಾಡಲು ಸಾವಿರಾರು ಕ್ವಿಂಟಾಲ್ ತೊಗರಿ ಬೇಳೆ ಸೇರಿ ಇತರೆ ದವಸ ಧಾನ್ಯಗಳನ್ನು ಖರೀದಿಸಿದೆ.
ಗೋಣಿಚೀಲ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
|ಶಿವಾನಂದ ಕಾಪಸಿನಿಗಮದ ವ್ಯವಸ್ಥಾಪಕ ನಿರ್ದೇಶಕ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಇದುವರೆಗೆ ಗೋಣಿಚೀಲ ಅಥವಾ ಹಣ ಕೊಟ್ಟಿಲ್ಲ. ನಮ್ಮ ಹೆಸರಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ.
|ಕುರುಬೂರು ಶಾಂತಕುಮಾರ್ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ
ಆಹಾರ ಇಲಾಖೆ ಅಧೀನಕ್ಕೆ ಬರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 1973ರಲ್ಲಿ ಸ್ಥಾಪನೆಯಾಗಿದೆ. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ಆಹಾರ ಸರಬರಾಜು ಹಾಗೂ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ, ಭತ್ತ ಮತ್ತು ಮೆಕ್ಕೆಜೋಳ ಸೇರಿ ವಿವಿಧ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುವ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಲಾಗಿದೆ. ಈ ಉದ್ದೇಶಕ್ಕಾಗಿ ಖರೀದಿ ಜತೆಗೆ, ರೈತರಿಗೆ ಪ್ರತಿ ಗೋಣಿಚೀಲಕ್ಕೆ 22 ರೂ.ನಂತೆ ನಿಗದಿಪಡಿಸಿ ಕೋಟ್ಯಂತರ ರೂಪಾಯಿಯನ್ನು ನಿಗಮಕ್ಕೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷವೂ ಈ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನಿಗಮಕ್ಕೆ ವಹಿಸಿಕೊಟ್ಟಿದೆ.
https://www.vijayavani.net/father-got-his-job-back-because-of-his-daughter/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
