ಮಂಡ್ಯ: ಕುಡುಕನೊಬ್ಬ ಕಂಠಪೂರ್ತಿ ಕುಡಿದು ಜಯಪುರದ ದೇವರ ಬಸವನ ಪವಾಡ ಪರೀಕ್ಷಿಸಲು ಮುಂದಾಗಿ ಬಸವನ ಆಕ್ರೋಶಕ್ಕೆ ತುತ್ತಾದ ಘಟನೆ ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ವ್ಯಕ್ತಿಯೊಬ್ಬರು ಮದ್ಯ ಸೇವಿಸಿ ಬಸವನ ಮುಂದೆ ನಿಂತು ತನ್ನನ್ನು ಆರ್ಶೀವದಿಸುವಂತೆ ಕೋರಿದಾಗ ಬಸವ ಆತನನ್ನು ತಿವಿಯಲು ಅಟ್ಟಾಡಿಸಿಕೊಂಡು ಹೋಗಿತ್ತು. ಇದೆ ರೀತಿ ಗ್ರಾಮದಲ್ಲಿ ಪೊಲೀಸ್​ ಪೇದೆಯೊಬ್ಬರು ಸಮಸ್ಯೆ ಇಲ್ಲದಿದ್ದರೂ ಅದನ್ನು ನಿವಾರಿಸುವಂತೆ ಬಸವನನ್ನು ಕೋರಿದಾಗ ಅವರು ಕೂಡ ಬಸವನ ಕೋಪಕ್ಕೆ ತುತ್ತಾದರು.
ಏನಿದು ಪವಾಡ:ಜುಟ್ಟನಹಳ್ಳಿ ಗ್ರಾಮದ ರಮೇಶ್​ ಎಂಬುವವರು ತಮ್ಮ ಮನೆಯಲ್ಲಿ ಇರುವ ಸಮಸ್ಯೆ ನಿವಾರಣೆಗೆ ರಾಮನಗರ ಜಿಲ್ಲೆಯ ಜಯಪುರದ ಬಸವನನ್ನು ಕರೆಸಿ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಗೃಹ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬಂದು ಸಮಸ್ಯೆ ಇಲ್ಲದಿದ್ದರೂ ಸಮಸ್ಯೆ ನಿವಾರಿಸುವಂತೆ ಬಸವನನ್ನು ಕೋರಿ ಪಾದವನ್ನು ತನ್ನ ಹಸ್ತದ ಮೇಲೆ ಇಡುವಂತೆ ಕೈಯನ್ನು ಮುಂದೆ ಚಾಚಿದ. ಇದರಿಂದ ಆವೇಶಗೊಂಡ ಬಸವನ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ತಿವಿಯಲು ಮುಂದಾಯಿತು. ಕೂಡಲೇ ಆತ ಬಸವನನ್ನು ಕ್ಷಮೆ ಕೋರಿದ ನಂತರ ಆವೇಶಗೊಂಡಿದ್ದ ಬಸವ ಶಾಂತವಾಯಿತು ಎಂದು ತಿಳಿದು ಬಂದಿದೆ.
ಕುಡಿತದ ವ್ಯಸನ ಹೊಂದಿದ್ದ ವ್ಯಕ್ತಿಯೊಬ್ಬರು ಬಂದು ಬಸವನ ಮಂದೆ ತನ್ನ ಎರಡು ಕೈಚಾಚಿ ಪಾದ ಇಡುವಂತೆ ಕೋರಿದರು. ಬಸವ ಆ ವ್ಯಕ್ತಿಯ ಎರಡು ಹಸ್ತಗಳ ಮೇಲೆ ತನ್ನ ಮುಂದಿನ ಎರಡು ಕಾಲುಗಳನ್ನು ಇಟ್ಟು ನಿಂತಿತ್ತು.
ಹಲವು ನಿಮಿಷ ಕಳೆದರೂ ಬಸವ ಆತನ ಹಸ್ತದ ಮೇಲೆ ಇಟ್ಟಿದ್ದ ಕಾಲನ್ನು ಹಿಂದಕ್ಕೆ ತೆಗೆಯಲಿಲ್ಲ. ಆತ ಎಷ್ಟೇ ಕೋರಿದರು ಬಸವ ಜಗ್ಗಲಿಲ್ಲ. ಆತ ಅತ್ತು ಕರೆದರೂ ಬಸವ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಆತನ ಪತ್ನಿ ಬಂದು ಬಸವನ ಮುಂದೆ ತನ್ನ ಪತಿ ಕುಡಿಯುತ್ತಾನೆ ಎಂದು ಹೇಳಿದರು. ಬಸವ ಕೂಡಲೇ ಹಿಂದೆ ಸರಿದು ಆತನನ್ನು ಅಟ್ಟಾಡಿಸಿಕೊಂಡು ತಿವಿಯಲು ಮುಂದಾಯಿತು. ಈ ವೇಳೆ ಆತ ಇನ್ನು ಮುಂದೆ ಕುಡಿಯುವುದಿಲ್ಲ ಎಂದು ಹೇಳಿದ ನಂತರ ಬಸವ ಶಾಂತವಾಯಿತು. ನಂತರ ದಂಪತಿ ಬಸವನಿಗೆ ಪೂಜೆ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)
https://youtu.be/HBtQdajSPsA
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
