ನಾಗಮಂಗಲ:ಮೂರು ತಿಂಗಳ ಹಿಂದೆ ಜುಟ್ಟನಹಳ್ಳಿ ಮಾರಮ್ಮ ದೇಗುಲದಲ್ಲಿ ಹುಂಡಿಹಣ ಕದ್ದಿದ್ದ ಪೂಜಾರಿ ಇದೀಗ ತಪ್ಪೊಪ್ಪಿಕೊಂಡು ಆ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಹೀಗೆ ಹೇಳುವಂತೆ ಮಾಡಿದ್ದು ಬಸಪ್ಪನ ಪವಾಡ!
ತಾಲೂಕಿನ ಜುಟ್ಟನಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಹುಂಡಿ ಕಳವಾಗಿತ್ತು. ಗ್ರಾಮಸ್ಥರು ದೇವರ ಮೊರೆ ಹೋಗಿದ್ದರು. ಮೂರು ತಿಂಗಳಾದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಗ್ರಾಮಸ್ಥರೊಬ್ಬರು ವೈಯಕ್ತಿ ಸಮಸ್ಯೆ ಪರಿಹಾರಕ್ಕಾಗಿ ಮಂಡ್ಯದ ಚಾಮುಂಡೇಶ್ವರಿನಗರದ ಜಯನಗರ ಬಡಾವಣೆಯಿಂದ ಬಸಪ್ಪನನ್ನು ಕರೆಸಿದ್ದರು. ಈ ಸಂದರ್ಭದಲ್ಲಿ ಬಸಪ್ಪನಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ದೇವರ ಹಣ ಕದ್ದವರನ್ನು ಪತ್ತೆ ಮಾಡಿಕೊಡುವಂತೆ ಕೋರಿದರು. ಮುಂದೆ ನಡೆದದ್ದೆಲ್ಲವೂ ಬಸಪ್ಪನ ಪವಾಡ.
ಇದನ್ನೂ ಓದಿರಿದೇವಸ್ಥಾನದ ನಿಧಿ ದೋಚಲು ಬಂದವ ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಗಂಭೀರ
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಬಸಪ್ಪ, ನೇರವಾಗಿ ಪೂಜಾರಿ ರಾಜು ಎಂಬುವರ ಮನೆ ಬಾಗಿಲಿಗೆ ಹೋಗಿ ನಿಂತ ಕೂಡಲೇ ಗ್ರಾಮಸ್ಥರು ತಬ್ಬಿಬ್ಬಾದರು. ಮನೆಯಿಂದ ಹೊರ ಬಂದ ಪೂಜಾರಿಯನ್ನು ಕೊಂಬಿನಿಂದ ತಿವಿಯುತ್ತ ಅಟ್ಟಾಡಿಸಿತು. ದಿಕ್ಕು ತೋಚದ ಪೂಜಾರಿ ಬಸಪ್ಪನ ಕಾಲು ಹಿಡಿದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡರು. ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಂತರ ಬಸಪ್ಪನ ಕೋಪ ಶಾಂತವಾಯಿತು. ಗ್ರಾಮಸ್ಥರ ಮುಂದೆ ಹುಂಡಿ ಹಣ ಹಿಂದಿರುಗಿಸುವುದಾಗಿ ಪೂಜಾರಿ ಒಪ್ಪಿಕೊಂಡ. ಬಸಪ್ಪನ ಪವಾಡಕ್ಕೆ ಪೂಜಾರಿಯ ಅಸಲಿ ಮುಖ ಬಯಲಾಗುತ್ತಿದ್ದಂತೆ ಗ್ರಾಮಸ್ಥರು ಮಂತ್ರಮುಗ್ಧರಾದ ಘಟನೆ ಇತ್ತೀಚೆಗೆ ನಡೆದಿದೆ.
ಗೋಲ್ಡ್ ಲೋನ್ ಮಳಿಗೆಯಲ್ಲಿ ಕಳ್ಳತನಕ್ಕೆ ರಾತ್ರೋರಾತ್ರಿ ಎಂಟ್ರಿ, ಕೊನೇ ಕ್ಷಣದಲ್ಲಿ ಕೈಕೊಟ್ಟ ಪ್ಲ್ಯಾನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
