ಬೆಂಗಳೂರು:ಗಾಂಧಿನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಪರವಾಗಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಶುಕ್ರವಾರ ಕ್ಷೇತ್ರದ ವಿವಿಧೆಡೆ ಮಿಂಚಿನ ಪ್ರಚಾರ ನಡೆಸಿದರು.
ಸಂಸದ ಪಿ.ಸಿ. ಮೋಹನ್ ಹಾಗೂ ಸಪ್ತಗಿರಿಗೌಡ ಜತೆ ಕ್ಷೇತ್ರದ ಸುಜಾತಾ ಟಾಕೀಸ್​ನಿಂದ ಸನ್​ರೈಸ್ ವೃತ್ತದವರೆಗೆ ತೆರದ ವಾಹನದಲ್ಲಿ ಅಬ್ಬರದ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದರು. ಸಂಜೆ 4 ಗಂಟೆಗೆ ರೋಡ್ ಶೋ ಆರಂಭವಾಗುತ್ತಿದ್ದಂತೆ ನೂರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಹಾಗೂ ಸಪ್ತಗಿರಿಗೌಡ ಪರ ಘೊಷಣೆಗಳನ್ನು ಕೂಗಿ ಸಂಭ್ರಮಿಸಿದರು
ಇದನ್ನೂ ಓದಿ:ನಾನು-ಪತಿ ಡಬಲ್ ಇಂಜಿನ್​ನಂತೆ ಸೇವೆ ಸಲ್ಲಿಸುತ್ತೇವೆ: ಮಂಜುಳಾ ಅರವಿಂದ ಲಿಂಬಾವಳಿ ಭರ್ಜರಿ ಪ್ರಚಾರ
ಈ ವೇಳೆ ಮಾತನಾಡಿದ ಅಣ್ಣಾಮಲೈ, ಗಾಂಧಿನಗರದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಸಪ್ತಗಿರಿಗೌಡ ಗೆಲುವು ಖಚಿತ. ಜನೋಪಯೋಗಿ ಕಾರ್ಯಗಳೇ ಈ ಬಾರಿ ಚುನಾವಣೆಯಲ್ಲಿ ವರವಾಗಲಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ನಗರ ಪಾಲಿಕೆ ಶಾಲೆಗಳನ್ನು ಮೇಲ್ದರ್ಜೆಗೆರಿಸಲಾಗಿದೆ. ಶಾಲಾ ಮಕ್ಕಳಿಗೆ ಶೌಚಾಲಯದ ಸೌಲಭ್ಯ ಕಲ್ಪಿಸಲಾಗುತ್ತದೆ. ಡಬಲ್ ಇಂಜಿನ್ ಸರ್ಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಪಾಂಡಿಚೇರಿ ಗೃಹಸಚಿವ ಪ್ರಚಾರ: ಸಪ್ತಗಿರಿಗೌಡ ಪರವಾಗಿ ಪಾಂಡಿಚೇರಿ ಗೃಹ ಸಚಿವ ನಮ ಶಿವಾಯಂ ಕ್ಷೇತ್ರದ ದತ್ತಾತ್ರೇಯ ವಾರ್ಡ್ ಸೇರಿ ಹಲವೆಡೆ ಪ್ರಚಾರ ನಡೆಸಿದರು. ಶಾಸಕರಾದ ರಾಮಲಿಂಗಂ, ವೆಂಕಟೇಶ್, ಅಶೋಕ್​ಬಾಬು, ಶಿವಶಂಕರ್, ಅಂಗಾಲಂ ಸೇರಿ ಸ್ಥಳೀಯ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ಟಿ.ಎಸ್. ನಾಗರಾಜ್, ಟಿ. ಗೋಪಾಲಕೃಷ್ಣ, ಶಿವಪ್ರಕಾಶ್, ಮಂಡಲ ಅಧ್ಯಕ್ಷ ಸೈಪಾನ್ ಸಿಂಗ್, ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಂದೀಪ್ ಇತರರಿದ್ದರು.
ಉದ್ಯಮಗಳ ಸಮಸ್ಯೆ ನಿವಾರಣೆ; ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಭರವಸೆ

ಗಾಂಧಿನಗರದ ಕೊಳೆಗೇರಿಗಳ ಅಭಿವೃದ್ಧಿಗೆ ಆದ್ಯತೆ: ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಭರವಸೆ

ಮತದಾರರಿಗೆ ಹತ್ತಿರವಾಗುತ್ತಿರುವ ಸಪ್ತಗಿರಿಗೌಡ: ಗಾಂಧಿನಗರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ, ಜನರಿಂದ ಜಯಘೋಷ

ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಕಾರಣ: ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
