ಬೆಂಗಳೂರು:ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಪರವಾಗಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಬುಧವಾರ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದರು.
ಕಾಟನ್​ಪೇಟೆಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಸಪ್ತಗಿರಿಗೌಡ, ಮುನಿರತ್ನ, ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್. ನಾಗರಾಜ್ ಪುತ್ರ ಅಭಿನವ್ ನಾಗರಾಜ್ ಸೇರಿ ಪಕ್ಷದ ಪ್ರಮುಖರು ರೋಡ್ ಶೋ ನಡೆಸಿ ಪಕ್ಷದ ಪರ ಅಲೆ ಸೃಷ್ಟಿಸಿದರು.
ಇದನ್ನೂ ಓದಿ:ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ
ರಾತ್ರಿ 7.30ಕ್ಕೆ ರೋಡ್ ಶೋ ಆರಂಭಿಸುತ್ತಿದ್ದಂತೆ ಕಾರ್ಯಕರ್ತ ರಲ್ಲಿ ವಿದ್ಯುತ್​ಸಂಚಾರ ಉಂಟಾಯಿತು. ಅಣ್ಣಾಮಲೈ ಮಾತನಾಡಿ, ಕ್ಷೇತ್ರದ ಬಗ್ಗೆ ಸಪ್ತಗಿರಿಗೌಡ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಮತದಾರರ ಉತ್ಸಾಹ ನೋಡಿದರೆ, ಈ ಬಾರಿ ಗಾಂಧಿನಗರದಲ್ಲಿ ಬದಲಾವಣೆಯಾಗಿ ಬಿಜೆಪಿಯ ಕಮಲ ಆರಳುವುದು ಬಹುತೇಕ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿನಗರ ಕ್ಷೇತ್ರದ ಶಾಸಕರು ಅಭಿವೃದ್ಧಿ ವಿಚಾರ ದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಅನುಷ್ಠಾನ ಮಾಡದೆ, ಕ್ಷೇತ್ರ ವನ್ನು ನಿರ್ಲಕ್ಷಿಸಿದ್ದಾರೆ. ಇವರನ್ನು ಮೂಲೆಗೆ ತಳ್ಳಿ, ಅಭಿವೃದ್ಧಿ ಪರವಾಗಿ ಇರುವ ಬಿಜೆಪಿಯನ್ನು ಬೆಂಬಲಿಸಬೇಕು.
| ಕೆ.ಅಣ್ಣಾಮಲೈ ಬಿಜೆಪಿ ಚುನಾವಣಾ ಸಹ ಉಸ್ತುವಾರಿ
ಮಳೆಯನ್ನೂ ಲೆಕ್ಕಿಸದೆ ಮತಯಾಚಿಸಿದ ಸಪ್ತಗಿರಿಗೌಡ

ಸಪ್ತಗಿರಿಗೌಡ ಪರವಾಗಿ ಅಣ್ಣಾಮಲೈ ರೋಡ್ ಶೋ: ಗಾಂಧಿನಗರದಲ್ಲಿ ಮತಯಾಚನೆ

ಗಾಂಧಿನಗರದ ಕೊಳೆಗೇರಿಗಳ ಅಭಿವೃದ್ಧಿಗೆ ಆದ್ಯತೆ: ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಭರವಸೆ

ಮತದಾರರಿಗೆ ಹತ್ತಿರವಾಗುತ್ತಿರುವ ಸಪ್ತಗಿರಿಗೌಡ: ಗಾಂಧಿನಗರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ, ಜನರಿಂದ ಜಯಘೋಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
