ಬಾಗಲಕೋಟೆ:ರಾಷ್ಟ್ರಮಟ್ಟಕ್ಕೆ ತಲುಪಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ದಿನದಿಂದ ದಿನಕ್ಕೆ ಹಲವು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಈ ವಿಷಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕರು ಸರಣಿ ಆರೋಪಗಳನ್ನು ಎಸಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರಕ್ಕೆ ಸ್ಪಂದಿಸಿದ ಕೆ.ಅಣ್ಣಾಮಲೈ, ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈ ರೀತಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ, ಐಷಾರಾಮಿ ಜೀವನವನ್ನು ಬಿಟ್ಟು 11 ವರ್ಷದ ಮಗನೊಂದಿಗೆ ಸನ್ಯಾಸಿಯಾದ ಬೆಂಗಳೂರು ಉದ್ಯಮಿ ಪತ್ನಿ
ಇಂದು ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, “ಅಮಿತ್ ಷಾ ಅವರು ಈ ಬಗ್ಗೆ ಬಹಳ‌ ಕ್ಲಿಯರ್ ಆಗಿ ಹೇಳಿದ್ದಾರೆ. ಎಸ್ಐಟಿ ತನಿಖೆ ಕೈಗೊಂಡಿದೆ. ಯಾವ ಕ್ರಮ ಬೇಕಾದರೂ ಕೈಗೊಳ್ಳಲ್ಲಿ ಅಂತ ಹೇಳಿದ್ದಾರೆ, ಕಂಪ್ಲೆಂಟ್ ಕೊಡ್ತಾರೆ ಕ್ರಮ ತೆಗೆದುಕೊಳ್ಳಲಿ” ಎಂದು ಹೇಳಿದರು.
“ಇದರಲ್ಲಿ ತಡೆ ಮಾಡೋದಕ್ಕೆ, ತನಿಖೆ ಮುಚ್ಚಿ ಹಾಕೋದಕ್ಕೆ ಬಿಜೆಪಿ ಏನಾದರೂ ಮುಂದಾಗಿದೆಯಾ? ಇಲ್ಲ. ತನಿಖೆ ಏನಾಗುತ್ತದೆಯೋ ಅದು ಆಗುತ್ತದೆ. ಕ್ಲಿಯರ್ ಆಗಿ ಇನ್ವೆಸ್ಟಿಗೇಷನ್ ಮಾಡಿ ಕ್ರಮ ಕೈಗೊಳ್ಳಬೇಕು. ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಡಿಕೆಶಿ ಕೈವಾಡದ ಬಗ್ಗೆ ಕೇಳಿಬಂದ ಆರೋಪ ಕುರಿತು ನಾನು ಏನು ಹೇಳೋದಿಲ್ಲ. ತನಿಖೆ ನಡೆಯುತ್ತಿದೆ, ಆ ಮೂಲಕ ಎಲ್ಲ ಹೊರಬರಲಿದೆ” ಎಂದು ಖಡಕ್ ಆಗಿ ಹೇಳಿದ್ದಾರೆ.
ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × five =
Remember me
