ಬೆಂಗಳೂರು:ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ಮಹಾರಾಷ್ಟ್ರದಲ್ಲಿ ಎಲ್ಲವನ್ನು ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಯಾವುದಕ್ಕೂ ಹೆದರುವ ಜಾಯಮಾನ ನನ್ನದಲ್ಲ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಇದನ್ನೂ ಓದಿ:ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!
‘‘ಮಂಡ್ಯ ಜಿಲ್ಲೆಯ ಎಲ್ಲ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಬೇಕಿದ್ದರೆ ಮೊಬೈಲ್ ಕಾಲ್ ವಿವರ ತೋರಿಸಲು ಸಿದ್ಧ. ಅವರು ಏಕೆ ಮಾಧ್ಯಮಗಳ ಮುಂದೆ ನನ್ನನ್ನು ಬೈಯುತ್ತಾರೋ ಗೊತ್ತಿಲ್ಲ’’ ಎಂದರು.
‘ಪದ್ಮನಾಭನಗರ’ ಅಥವಾ ‘ಜೆಪಿ ನಗರ ಮನೆ’ಗಳ ಸೂಚನೆಯಂತೆ ಹೀಗೆ ಮಾತನಾಡುತ್ತಿರಬಹುದೇ ಎಂಬುದು ನನಗೆ ಗೊತ್ತಿಲ್ಲ. ವಿಷಯ ಗೊತ್ತಿಲ್ಲದೆ ದೊಡ್ಡವರ ಬಗ್ಗೆ ಮಾತನಾಡುವುದು ಸರಿಯಲ್ಲ’’ ಎಂದು ಎಚ್‌ಡಿ ದೇವೇಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿಯವರ ಕುರಿತು ತಮ್ಮ ನಿಲುವು ವ್ಯಕ್ತಪಡಿಸಿದರು.
ಇದನ್ನೂ ಓದಿ:ಕ್ವಾರಂಟೈನ್ ತಪ್ಪಿಸಲು ಹೊರಗಡೆಯಿಂದ ಬಂದವರ ಹೊಸ ಹೊಸ ತಂತ್ರ
‘‘ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿ.ಡಿ. ವಿಚಾರ ಏನೂ ಹೇಳಿಲ್ಲ. ಅವರ‌್ಯಾಕೆ ಹಾಗೆ ಮಾತಾಡಿದರೋ ನನಗೆ ಗೊತ್ತಿಲ್ಲ. ನನಗೆ ಕೆಲಸ ಮಾಡೋದಷ್ಟೆ ಗೊತ್ತು, ನನಗೆ ಯಾವುದೇ ಭಯ ಇಲ್ಲ’’ ಎಂದು ಹೇಳಿದರು.
‘‘ನಾನು ಶಾಸಕ ಸುರೇಶ್ ಗೌಡ ಅವರ ಸಿ.ಡಿ. ಬಿಡುಗಡೆ ಮಾಡುತ್ತೇನೆ, ಸಿಡಿ ಇದೆ ಎಂಬ ವಿಚಾರ ಹೇಳಿಯೇ ಇಲ್ಲ. ಸಿಡಿ ಮಾಡೋದು, ಮಾಡಿಸೋದು ನನ್ನ ಸ್ವಭಾವ ಅಲ್ಲ. ಯಾವತ್ತೂ ಅಂತ ಕೆಲಸ ಮಾಡೋದಿಲ್ಲ. ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದವರು. ಸ್ನೇಹಿತರು’’ ಎಂದರು.
ನಿಯೋಜಿತ ಶಿಕ್ಷಕರ ವರ್ಗಾವಣೆ ಸದ್ಯಕ್ಕಿಲ್ಲ: ಸುರೇಶ್‌ಕುಮಾರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen + six =
Remember me
