ಬೆಂಗಳೂರು:ಲಯನ್ಸ್ ಜಿಲ್ಲಾ 317ಎ್. ನಿಂದ ಕೆ.ಸಿ. ಜನರಲ್ ಆಸ್ಪತ್ರೆಗೆ ವರ್ಷಪೂರ್ತಿ ಉಚಿತ ಊಟ ವಿತರಣೆ ಸೇರಿ 40 ಕ್ಕೂ ಅಧಿಕ ಸೇವಾ ಯೋಜನೆಗಳಿಗೆ ಚಾಲನೆ ದೊರೆಯಿತು.
ಬೆಂಗಳೂರು ನಿಮಾನ್ಸ್ ಕನ್ವೇನ್‌ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ 2024-25 ನೇ ಸಾಲಿನ ಕ್ಯಾಬಿನೆಟ್ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭದಲ್ಲಿ ಈ ನಿರ್ಧಾರ ಕೈಗೋಳ್ಳಲಾಗಿದೆ.
ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ. ಹಸಿವು ನಿವಾರಣೆ ಕಾರ್ಯಕ್ರಮದ ಅಂಗವಾಗಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಒಂದು ವರ್ಷ ಉಚಿತ ಊಟದ ವ್ಯವಸ್ಥೆ, 51,108 ರೈನ್ ಕೋಟ್ ವಿತರಣೆ, ಪರಿಸರ ಸಂರಕ್ಷಣೆ, ಬಾಲಾವಸ್ಥೆ ಕ್ಯಾನ್ಸರ್ ತಡೆಗಟ್ಟಲು ನೆರವು, ದೃಷ್ಟಿ ದೋಷ ನಿವಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮ ಸಂಯೋಜಕ ಲಯನ್ ಸಿಂಹ ಶಾಸ್ತ್ರಿ ತಿಳಿಸಿದ್ದಾರೆ.ಇದೇ ವೇಳೆ ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ಮಾಜಿ ನಿರ್ದೇಶಕ ವಿ .ವಿಜಯಕುಮಾರ್ ರಾಜು, ಉಪರಾಜ್ಯಪಾಲ ಆಕಾಶ್ ವಿ ಸುವರ್ಣ, ರಾಜು ಚಂದ್ರಶೇಖರ್ ಪ್ರಮಾಣವಚನ ಬೋಧಿಸಿದರು. ಅಂತರಾಷ್ಟ್ರೀಯ ಮಾಜಿ ನಿರ್ದೇಶಕ ಕೆ ವಂಶಿಧರ್ ಬಾಬು, ವಿ. ವಿ ಕೃಷ್ಣಾರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ 317ರ ಡಾ: ಎಸ್ ಕೃಷ್ಣಗೌಡ, ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + nineteen =
Remember me
