ಬಾಗಲಕೋಟೆ:ಗೀತ ರಚನೆಕಾರ ಕೆ. ಕಲ್ಯಾಣ್​ರ ದಾಂಪತ್ಯದಲ್ಲಿ ಬಿರುಕುಂಟಾಗಿದ್ದು, ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ‘ನಮ್ಮ ಮನೆ ಕೆಲಸಕ್ಕೆಂದು ಬಂದಿದ್ದ ಗಂಗಾ ಕುಲಕರ್ಣಿ ಅಲಿಯಾಸ್​ ಜ್ಯೋತಿ ಕುಲಕರ್ಣಿ ಮತ್ತು ಈಕೆಯ ಆಪ್ತ ಶಿವಾನಂದ ವಾಲಿ ಅವರು ವಾಮಾಚಾರ ಮಾಡಿ ನನ್ನ ಪತ್ನಿಯ ತಲೆಕೆಡಿಸಿದ್ದಾರೆ. ಪತ್ನಿ ಮತ್ತು ಅತ್ತೆ-ಮಾವ ಅವರ ಹಣ-ಆಸ್ತಿಯನ್ನೂ ವಾಲಿ ಲಪಟಾಯಿಸಿದ್ದಾನೆ. ನನ್ನ ಪತ್ನಿ ನನ್ನನ್ನೇ ಅಪರಿಚಿತನಂತೆ ನೋಡುತ್ತಿದ್ದಾಳೆ’ ಎಂದು ಕಲ್ಯಾಣ್​ ಗಂಭೀರ ಆರೋಪ ಮಾಡಿದ್ದರು.
ಕಲ್ಯಾಣ್​ರ ದಾಂಪತ್ಯ ಬಿರುಕಿನ ಪ್ರಕರಣ ಸಂಬಂಧ ತನಿಖೆ ಕೈಗೊಳ್ಳುತ್ತಿದ್ದಂತೆ ಜ್ಯೋತಿ ಕುಲಕರ್ಣಿ ಮತ್ತು ಶಿವಾನಂದ ವಾಲಿ ಅವರ ಕೆಲಸವೇ ಮಾಟ-ಮಂತ್ರದ ಮೂಲಕ ಹಣ ಲಪಟಾಯಿಸುವುದು, ಶಿವಾನಂದ ವಾಲಿ ಊದಿನಕಡ್ಡಿ ಸ್ವಾಮಿಯೆಂದೇ ಫೇಮಸ್​ ಆದವನು ಎಂಬ ಸತ್ಯ ಬಹಿರಂಗವಾಗಿತ್ತು. ಭಾನುವಾರ ತಡರಾತ್ರಿ ಆರೋಪಿ ಶಿವಾನಂದ ವಾಲಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರ ಬೆನ್ನಲ್ಲೇ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ವಾಲಿಯ ಪತ್ನಿ ಭಾರತಿ ಮಾತನಾಡಿದ್ದಾಳೆ.
‘ನಮ್ಮ ಯಜಮಾನ್ರುದು ಏನೂ ತಪ್ಪಿಲ್ಲ. ನನ್ನ ಗಂಡನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಸುಮಾರು 15 ವರ್ಷಗಳಿಂದ ವಾಹನ ಉದ್ಯೋಗ ಮಾಡುತ್ತಿದ್ದಾರೆ. ನಮಗೊಬ್ಬ ಮಗನಿದ್ದಾನೆ. ನನ್ನ ಗಂಡನ ಮೇಲೆ ಬಂದಿರುವ ಆರೋಪ ಸುಳ್ಳು. ಅವರು ಅಂತಹ ಯಾವುದೇ ಕೆಲಸವನ್ನು ಮಾಡೋದಿಲ್ಲ’ ಎಂದು ಆರೋಪ ಅಲ್ಲಗಳೆದಿದ್ದಾಳೆ.
ನಿಧಾನವಾಗಿ ಪತ್ನಿಯ ವರ್ತನೆ ಬದಲಾಯಿತು, ನನ್ನನ್ನೇ ಅಪರಿಚಿತರಂತೆ ನೋಡುತ್ತಿದ್ದಳು: ಕೆ. ಕಲ್ಯಾಣ್​

ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
