ಬಾಗಲಕೋಟೆ:ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಜೀವನಕ್ಕೆ ಹುಳಿ ಹಿಂಡಿದವರು ಎನ್ನಲಾದ ಶಿವಾನಂದ ಬಾಗಲಕೋಟೆ ಜಿಲ್ಲೆಯವರು. ಪತ್ನಿಯ ತವರೂರು ಎನ್ನಲಾದ ಬೀಳಗಿ ತಾಲೂಕಿನ ಬೂದಿಹಾಳ ಎಸ್.ಜಿ. ಗ್ರಾಮದಲ್ಲಿ ಶಿವಾನಂದ ನೆಲೆಸಿದ್ದ. ಕೆಲವು ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿದ್ದ ಇವರು, ಮಾಟ-ಮಂತ್ರ, ವಶೀಕರಣ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಗುರೂಜಿ ಎಂದು ಸುಳ್ಳು ಹೇಳಿಕೊಳ್ಳುವ ಶಿವಾನಂದ ಈ ಹಿಂದೆಯೂ ಇದೇ ರೀತಿ ಹಲವರನ್ನು ವಂಚಿಸಿದ್ದು, ಜನರನ್ನು ಯಾಮಾರಿಸಲು ಒಂದು ತಂಡವೇ ಅವರೊಂದಿಗೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಮೋಸಕ್ಕೆ ಒಳಗಾಗಿ ದುಡ್ಡು ಕಳೆದುಕೊಂಡ ಅನೇಕ ನೊಂದವರು ಊರಿಗೆ ಬಂದು ವಾಗ್ವಾದ ಮಾಡಿದ್ದಾರೆ ಎಂದು ಗ್ರಾಮದ ಕೆಲವರು ಮೆಲ್ಲಗೆ ಉಸರಿಸುತ್ತಾರೆ.
ಬೂದಿಹಾಳ ಗ್ರಾಮದಲ್ಲಿ ಎರಡು ಅಂತಸ್ತಿನ ಮನೆ ಇದ್ದು, ಕ್ರೂಷರ್ ಬಾಡಿಗೆ ಹೊಡೆಯುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿ ಕೆಲವು ನಗರ ಪ್ರದೇಶಗಳಲ್ಲಿ ಕ್ಯಾಬ್​ಗಳನ್ನು ಸಹ ಬಾಡಿಗೆಗೆ ಬಿಟ್ಟಿದ್ದಾರೆ. ಅವು ಸ್ವಂತದ್ದಾ? ಬಾಡಿಗೆ ಪಡೆದಿದ್ದಾ ಎನ್ನುವುದು ಸ್ಪಷ್ಟವಾಗಿಲ್ಲ.
ಇನ್ನು ಬೂದಿಹಾಳ ಗ್ರಾಮದಲ್ಲಿ ಶಿವಾನಂದ ಹಾಗೂ ಅವರ ಚಟುವಟಿಕೆ ಬಗ್ಗೆ ಯಾರೊಬ್ಬರೂ ತುಟಿಪಿಟಿಕ್ ಎನ್ನಲ್ಲ. ಒತ್ತಾಯ ಮಾಡಿದರೆ, ಜಾಗ ಖಾಲಿ ಮಾಡುತ್ತಾರೆ. ಅವರಿಗೂ ಮಾಟ, ಮಂತ್ರದ ಭಯ? ‘ಅವರ ಬಗ್ಗೆ ಕೇಳಲೇಬೇಡಿ. ಅವರು ಮದುವೆಯಾದ ಮೇಲೆ ಇಲ್ಲಿಗೆ ಬಂದಿದ್ದಾರೆ. ದಮ್ಮಯ್ಯ ನಮ್ಮನ್ನು ಬಿಟ್ಟುಬಿಡಿ, ಮೊದಲೇ ಪೊಲೀಸ್ ಕೇಸು, ಇಲ್ಲದ ಉಸಾಬರಿ ನಮಗೇಕೆ? ಮಂತ್ರವಾದಿಯೋ, ಗುರುಜೀನೋ ಗೊತ್ತಿಲ್ಲ ಎಂದು ಜಾಗ ಖಾಲಿ ಮಾಡುತ್ತಾರೆ.
ಶಿವಾನಂದ ಮೂಲತಃ ಮುಧೋಳ ನಗರದವರು ಎನ್ನಲಾಗಿದ್ದರಿಂದ ಪೊಲೀಸರು ಅಲ್ಲಿಯೂ ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 6 =
Remember me
