ಬೆಳಗಾವಿ:ಕನ್ನಡ ಚಲನಚಿತ್ರ ರಂಗದ ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ್ ಅವರ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದಂತೆ ಒಂದೊಂದೇ ವಿಷಯಗಳು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರುತ್ತಿವೆ.
ಕಲ್ಯಾಣ್ ಅವರ ಪತ್ನಿ, ಅತ್ತೆ ಮತ್ತು ಮಾವನ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎಂಬುದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾ ಕುಲಕರ್ಣಿಗೆ ಮತ್ತು ಮಂತ್ರವಾದಿ ಶಿವಾನಂದ ವಾಲಿಗೆ ಮೊದಲೇ ಗೊತ್ತಿತ್ತು. ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಅವರಿಬ್ಬರೂ ಸಂಚು ರೂಪಿಸಿದ್ದರು.
ಇದನ್ನೂ ಓದಿ:ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ
ಅದರ ಮೊದಲ ಹಂತವಾಗಿಯೇ ಕೆ. ಕಲ್ಯಾಣ್ ಅವರ ಮನೆಗೆ ಗಂಗಾ ಕುಲಕರ್ಣಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಕ್ರಮೇಣ ಕುಟುಂಬದಲ್ಲಿ ಕಲಹ ಉಂಟಾಗುವಂತೆ ಹುನ್ನಾರ ಮಾಡಿದ್ದಳು. ಈ ವೇಳೆ ಹೋಮ, ಹವನ, ಮಾಟ, ಮಂತ್ರದ ಹೆಸರಿನಲ್ಲಿ ವಾಲಿಯನ್ನು ಕಲ್ಯಾಣ್ ಅವರ ಪತ್ನಿ, ಅತ್ತೆ ಮತ್ತು ಮಾವನಿಗೆ ಪರಿಚಯಿಸಿದ್ದಳು. ಈ ವೇಳೆ ಕಲ್ಯಾಣ್ ಕುಟುಂಬದ ಬ್ಯಾಂಕ್ ಖಾತೆಗಳಿಂದ ಪ್ರತಿ ಪೂಜೆಗೆ 2.5 ರಿಂದ 3 ಲಕ್ಷ ರೂ. ಹಣವನ್ನು ಇಬ್ಬರೂ ಸೇರಿ ಪೀಕಿದ್ದರು. ಮಂತ್ರವಾದಿ ವಾಲಿ ತನ್ನ ಬ್ಯಾಂಕ್ ಖಾತೆಗೆ ಆ ಹಣವನ್ನು ವರ್ಗಾಯಿಸಿಕೊಂಡಿದ್ದ. ಇದನ್ನು ಆತನೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:ಕೆ.ಕಲ್ಯಾಣ್​ ಕುಟುಂಬಸ್ಥರಿಂದ ಆಸ್ತಿ ಕಬಳಿಕೆ: ವಾಲಿಯ ಆರು ಕೋಟಿ ರೂ ಆಸ್ತಿ ಜಪ್ತಿ
ಬಂಧಿತ ಶಿವಾನಂದ ವಾಲಿ ಮಾಟ, ಮಂತ್ರದಿಂದ ಕಲ್ಯಾಣ್ ಅವರ ಪತ್ನಿ, ಅತ್ತೆ ಮತ್ತು ಮಾವನನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ನಿಮ್ಮ ಹೆಸರಲ್ಲಿ ಆಸ್ತಿ ಇದ್ದರೆ ನಿಮ್ಮ ಜೀವಕ್ಕೆ ಅಪಾಯ ಇದೆ ಎಂದು ಹೆದರಿಸಿದ್ದ. ಅದನ್ನೇ ನಂಬಿಸಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿದ್ದ ಮನೆ, ಖಾಲಿ ನಿವೇಶನಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ. ಜತೆಗೆ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ಮಾಂಗಲ್ಯ ಸೇರಿ ಎಲ್ಲ ಚಿನ್ನ ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾ ಕುಲಕರ್ಣಿ ಬಂಧನಕ್ಕೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.
VIDEO | ಬೆಂಗಳೂರಿನ ನಡುರಸ್ತೆಯಲ್ಲಿ ಹಾಡಹಗಲೇ ಕೊಲೆ: ವಿಡಿಯೋ ವೈರಲ್

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:20 − sixteen =
Remember me
