ಬೆಂಗಳೂರು:225 ಶಾಸಕರ ವಿವಾಹೇತರ ಸಂಬಂಧದ ಬಗ್ಗೆ ತನಿಖೆಯಾಗಲಿ ಎಂಬ ಓಪನ್ ಚಾಲೆಂಜ್ ಹಾಕಿದ್ದ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ವಿರುದ್ಧ ಮಹಿಳಾ ಕಾಂಗ್ರೆಸ್ ದನಿ ಎತ್ತಿದೆ.
ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ ಎಂದು ಟೀಕಿಸಿದ್ದು, ಅವರ ಹೇಳಿಕೆಯನ್ನು ಪ್ರಧಾನಿಯವರಿಗೂ ಕಳಿಸಿ ಗಮನ ಸೆಳೆಯುವುದಾಗಿ ಹೇಳಿದೆ.
ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಅವರನ್ನು ಅನಾರೋಗ್ಯ ಸಚಿವ ಎಂದು ಜರಿಯಲಾಯಿತು.
ಇದನ್ನೂ ಓದಿರಿ:ಎರಡು ತಿಂಗಳು ಎಚ್ಚರ… ಎಚ್ಚರ : ನಿಯಮ ಉಲ್ಲಂಘಿಸಿದರೆ 10 ಸಾವಿರ ರೂವರೆಗೂ ದಂಡ
ರಾಮನ ಪಕ್ಷ, ಬಾಯಿ ಬಿಟ್ಟರೆ ರಾಮನ ಜಪ‌ಮಾಡುವ ಪಕ್ಷದಲ್ಲಿದ್ದು ಇಂತ ಹೇಳಿಕೆ ಕೊಡಲು ಬಿಜೆಪಿಯವರು ಸುಧಾಕರ್‌ ಅವರಿಗೆ ಹೇಗೆ ಬಿಟ್ಟರು, ಆ ಪಕ್ಷದ ಮಹಿಳಾ ನಾಯಕರು ಏಕೆ ಸುಮ್ಮನಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಹಿಂದು ಸಂಸ್ಕೃತಿ ವಿರುದ್ಧವಾಗಿ ಸಚಿವ ಸುಧಾಕರ್ ಮಾತನಾಡಿದ್ದಾರೆ. ಇದು ಮಹಿಳಾ ಶಾಸಕಿಯರಿಗೆ ಮಾಡಿದ ಅಪಮಾನ ಎಂದ ಅವರು ಸಚಿವರಾಗಿ ಸಾಮೂಹಿಕವಾಗಿ ಬೊಟ್ಟು‌ಮಾಡಿದ್ದಾರೆ, ಯಾರ ವಿರುದ್ಧವಾದರೂ ದಾಖಲೆ ಇದ್ದರೆ ಅದನ್ನು ಕೋರ್ಟಿಗೆ ಹಾಜರು ಮಾಡಲಿ ಎಂದು ಸವಾಲೆಸೆದರು.
ಪುಷ್ಪಾ ಅಮರನಾಥ್ ಮಾತನಾಡಿ, ಆರೋಗ್ಯ ಸಚಿವರು ಸ್ಪೀಕರ್, ಮುಖ್ಯಮಂತ್ರಿ ಅವರನ್ನೊಳಗೊಂಡಂತೆ ಹಿರಿಯ ನಾಯಕರಿಗೆ ಅಪಮಾನ‌ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಇದು ಶಾಸನ ಸಭೆಗೂ ಮಾಡಿದ ಅವಮಾನ ಎಂದು ಟೀಕಿಸಿದರು.
ಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ

ಏಕಪತ್ನಿವ್ರತಸ್ಥ ಸಾಬೀತಿಗೆ ಸವಾಲ್​: ಬಿಜೆಪಿ ಶಾಸಕರಿಗೆ 2 ಆಯ್ಕೆ ಕೊಟ್ಟ ಸಿದ್ದರಾಮಯ್ಯ

ಅಕ್ರಮ ಸಂಬಂಧಕ್ಕೆ ತಿರುಗಿದ ಮದುವೆ ಸಮಾರಂಭದಲ್ಲಿನ ಪರಿಚಯ: ಎರಡೇ ವರ್ಷದಲ್ಲಿ ನಡೆಯಿತು ಹೀನ ಕೃತ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 15 =
Remember me
