ಚಿಕ್ಕಬಳ್ಳಾಪುರ:ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಕೇಶವರೆಡ್ಡಿ ಅವರಿಗೆ ಕರೊನಾ ಸೋಂಕು ಇರುವುದನ್ನು ಸ್ವತಃ ಸುಧಾಕರ್​ ಅವರೇ ನಿನ್ನೆ ಟ್ವಿಟರ್​ ಮೂಲಕ ನಿನ್ನೆ ತಿಳಿಸಿದ್ದರು. ಇದೀಗ ಕುಟುಂಬದ ಮತ್ತಿಬ್ಬರಿಗೆ ಕರೊನಾ ಸೋಂಕು ವಕ್ಕರಿಸಿರುವುದಾಗಿ ಟ್ವೀಟ್​ ಮಾಡಿದ್ದಾರೆ.
ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕರೊನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕರೊನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಇಂದು ಬೆಳಗ್ಗೆ ಟ್ವೀಟ್​ ಮಾಡಿದ್ದಾರೆ.ಇದನ್ನೂ ಓದಿ:ಪತ್ನಿ ಹತ್ಯೆಗೈದು ವಿಮಾನದಲ್ಲಿ ಕೋಲ್ಕತಗೆ ತೆರಳಿ ಅತ್ತೆಯನ್ನು ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
— Dr Sudhakar K (@mla_sudhakar)June 23, 2020

ಇನ್ನು ಸುಧಾಕರ್​ ಅವರ ತಂದೆ ಕೇಶವರೆಡ್ಡಿ ಅವರು ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯ್ತಿಯ ಹಾಲಿ ಸದಸ್ಯರು. ಕಳೆದ ಜೂನ್ 19ರಂದು ಜಿಲ್ಲಾಧಿಕಾರಿ ಆರ್. ಲತಾ ಅವರ ಹುಟ್ಟುಹಬ್ಬಕ್ಕೆ ಕೇಶವರೆಡ್ಡಿ ಅವರೇ ಸ್ವತಃ ಹೋಗಿ, ನೇರವಾಗಿ ಶುಭಾಶಯ ಕೋರಿದ್ದರು.
ಚಿಕ್ಕಬಳ್ಳಾಪುರದಲ್ಲಿನ ಸಚಿವರ ಕಚೇರಿಯಲ್ಲಿಯೂ ಕೇಶವರೆಡ್ಡಿ ಅವರು ಸ್ಥಳೀಯ ಮುಖಂಡರಗಳೊಂದಿಗೆ ಸಭೆ ನಡೆಸಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಇರುವ ತಮ್ಮ ನಿವಾಸದಲ್ಲಿ ಎರಡು ದಿನ ಇದ್ದು ಜನರೊಂದಿಗೆ ಬೆರೆತ್ತಿದ್ದರು.ಇದನ್ನೂ ಓದಿ:ವಿಚ್ಛೇದಿತ ಮಹಿಳೆಯನ್ನು ವೈವಾಹಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡ ವ್ಯಕ್ತಿ ಮಾಡಿದ್ದು ನಂಬಿಕೆ ದ್ರೋಹ
ಕೇಶವರೆಡ್ಡಿ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ ಕೋಚಿಮುಲ್ ಮಾಜಿ ನಿರ್ದೇಶಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರಲ್ಲಿಯೂ ಈಗ ಆತಂಕ ಶುರುವಾಗಿದೆ. ಕೇಶವರೆಡ್ಡಿಯವರ ಸಂಪರ್ಕಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಅಧಿಕಾರಿಗಳಿಗೆ ಕ್ವಾರಂಟೈನ್ ಭೀತಿಯೂ ಎದುರಾಗಿದೆ.
ಸಚಿವ ಸುಧಾಕರ್ ತಂದೆಗೆ ಕರೊನಾ: ಜಿಲ್ಲಾಧಿಕಾರಿ ಸೇರಿ ಹಲವರಿಗೆ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
