ಬೆಂಗಳೂರು:ನನ್ನ ಮಾತಿನಿಂದ ಸ್ಪೀಕರ್ ಪೀಠಕ್ಕೆ ಅಗೌರವ ಆಗಿದ್ದಲ್ಲಿ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸಲು ಸಿದ್ಧ. ನಾನು ಆ ಪೀಠದಲ್ಲಿದ್ದ ರಮೇಶ್ ಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ್ದೆ. ಪೀಠಕ್ಕೆ ಅಗೌರವ ತರುವ ಉದ್ದೇಶ ನನಗೆ ಇರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡಿಸಿರುವ ಹಕ್ಕುಚ್ಯುತಿ ಪ್ರಸ್ತಾವನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಸಮಜಾಯಿಷಿ ನೀಡಿದ ಸಚಿವರು, ನಾನು ಈ ವಿಚಾರವಾಗಿ ಮೊನ್ನೆಯೇ ಮಾತನಾಡಿದ್ದರೆ ಹಕ್ಕುಚ್ಯುತಿ ಪ್ರಸ್ತಾಪವೇ ಬರುತ್ತಿರಲಿಲ್ಲ. ಆದರೆ ನನಗೆ ಮಾತನಾಡಲು ಅಂದು ಅವಕಾಶ ಸಿಗದ ಹಿನ್ನೆಲೆ ಇಂದು ಅಂದಿನ ವಿಚಾರಕ್ಕೆ ಸ್ಪಷ್ಟಣೆ ನೀಡುತ್ತೇನೆ ಎಂದು ಮಾತು ಆರಂಭಿಸಿದರು.
ಆರ್ಟಿಕಲ್ 191-192 ರ ಅಡಿ ಪ್ರತಿಪಕ್ಷ ನಾಯಕರು ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ. ಸಂವಿಧಾನ ಮೇಲಿನ ಚರ್ಚೆಯನ್ನು ಮೊನ್ನೆ ಸಂಜೆ ಆರಂಭಿಸಿದೆ. ಸಂವಿಧಾನದ ಮೇಲೆ ಆರೋಪ, ಪ್ರತ್ಯಾರೋಪ ಕೇಳಿ ಬಂದವು. ಸದನದಲ್ಲಿ ನನಗೆ ಅವಕಾಶ ಸಿಕ್ಕು ಐತಿಹಾಸಿಕ ವಿಚಾರ ಪ್ರಸ್ತಾಪಿಸಿದಾಗ ಅವಕಾಶ ಸಿಗಲಿಲ್ಲ ಎಂದರೆ ಹೇಗೆ? ನನ್ನ ಮಾತಿನಲ್ಲಿ 10 ಶೆಡ್ಯೂಲ್ ವಿಚಾರ ಬಂತು. ಪೀಠಕ್ಕೆ ಗೌರವ ಕೊಟ್ಟಿದ್ದೇನೆ. ಸ್ಪೀಕರ್ ಸ್ಥಾನದ ಮೇಲೆ ನಮಗೆ ಗೌರವ ಇದೆ. ಆ ಸ್ಥಾನದಲ್ಲಿದ್ದಾಗ ರಮೇಶ್ ಕುಮಾರ್ ನೀಡಿದ ತೀರ್ಪು ನಮ್ಮನ್ನು ಅತಂತ್ರವಾಗಿಸಿತ್ತು. ಈ ಸಂದರ್ಭ ಆರೇಳು ತಿಂಗಳು ಅತಂತ್ರವಾಗಿ ಉಳಿದೆವು. ಸುಪ್ರೀಂ ಕೋರ್ಟ್​ಗೆ
ಹೋದಾಗ ಅಲ್ಲಿ ಬಂದ ತೀರ್ಪಲ್ಲಿ ಆರೇಳು ಪುಟ ಸ್ಪೀಕರ್ ನಡವಳಿಕೆ ಹೇಗಿರಬೇಕೆಂದು ವಿವರಿಸಿದ್ದರು. ಅದನ್ನೇ ನಾನು ಓದಿದ್ದೆ. ಅದು ಗದ್ದಲಕ್ಕೆ ಕಾರಣವಾಯಿತು. ಈಗಲೂ ನಾನು ಸ್ಪಷ್ಟವಾಗಿ ಹೇಳುವುದು ಇಷ್ಟೇ ನಾನು ಯಾವುದೇ ಕಾರಣಕ್ಕೂ ಪೀಠಕ್ಕೆ ಅಗೌರವ ಸೂಚಿಸಿಲ್ಲ, ಸೂಚಿಸುವುದೂ ಇಲ್ಲ. ಅಂತಹ ಕಾರ್ಯ ನನ್ನಿಂದ ಅಗಿಲ್ಲ, ಆಗುವುದೂ ಇಲ್ಲ ಎಂದರು.
ಶಾಸಕ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದರೆ ಸ್ಪೀಕರ್​ಗೆ ಇದನ್ನು ಒಪ್ಪುವುದಕ್ಕಿಂತ ಬೇರೆ ಆಯ್ಕೆ ಇರುವುದಿಲ್ಲ ಎಂದು ಸುಪ್ರೀಂ ತಿಳಿಸಿದೆ ಎಂದು ಹೇಳಿದ ಸುಧಾಕರ್, ಸುಪ್ರೀಂ ಕೋರ್ಟ್ ತಿಳಿಸಿದ ವಿಷಯವನ್ನು, ಸ್ಪೀಕರ್ ಕೈಗೊಂಡ ತೀರ್ವನಕ್ಕೆ ನೀಡಿದ ಕೊಟೇಶನ್​ಗಳನ್ನು ಇಂಚಿಂಚಾಗಿ ವಿವರಿಸಿದರು. ತಮಗಿರುವ ಅವಕಾಶ ಹಾಗೂ ಸ್ಪೀಕರ್​ಗೆ ಇರುವ ಮಿತಿಯನ್ನು ವಿಸ್ತಾರವಾಗಿ ವಿವರಿಸಿದರು. ರಮೇಶ್ ಕುಮಾರ್ ಅವರಿಂದಲೇ ಇಂದು ನಾನು ಮಂತ್ರಿ ಆಗಿದ್ದೇನೆ. ಸುಪ್ರೀಂ ಕೋರ್ಟ್ ನೀಡಿದ ಪ್ರತಿ ಅಂಶವನ್ನು ವಿವರಿಸಿ ಇದರ ಅಡಿಯಲ್ಲೇ ನಾವು ಗೆದ್ದಿದ್ದೇವೆ ಎಂದಾಗ, ಸಿದ್ದರಾಮಯ್ಯ ಮಾತಿಗೆ ಮುಂದಾಗಿ ನಿನಗೆ ಹೆಲ್ಪ್ ಮಾಡುತ್ತೇನೆ ಇರಪ್ಪಾ ಅಂದರು, ಈ ವೇಳೆ ಸುಧಾಕರ್, ನೀವು ಮಾಡಿದ ಅನುಕೂಲ ಸಾಕು, ಮಾತಾಡೋಕೆ ಬಿಡಿ ಸಾರ್ ಅಂದರು. ಒತ್ತಡದಲ್ಲಿ ಶಾಸಕರು ರಾಜೀನಾಮೆ ನೀಡಿದಾಗ ಕೂಲಂಕಷವಾಗಿ ವಿಚಾರಣೆ ನಡೆಸುವ ಅವಕಾಶ ಇದೆ ಎಂದಾಗ ನಾನು ಎಲ್ಲೂ ಹೋಗಿರಲಿಲ್ಲ, ನನ್ನೇಕೆ ಅನರ್ಹ ಗೊಳಿಸಿದಿರಿ ಎಂದು ಸುಧಾಕರ್ ಪ್ರಶ್ನಿಸಿದರು. ಸ್ಪೀಕರ್ ನಡವಳಿಕೆ ಇಡೀ ದೇಶದಲ್ಲಿ ಮುಂದುವರಿಯಲಿದೆ. ಬೆಳೆಯುತ್ತಿರುವ ಟ್ರೆಂಡ್ ಆಗಲಿದೆ ಎಂದು ಸುಪ್ರೀಂ ತಿಳಿಸಿದೆ. ಐದೈದು ನಿಮಿಷಕ್ಕೆ ಪ್ರತಿಪಕ್ಷ ತಡೆ ಒಡ್ಡುತ್ತಿದೆ. ನಾನು ತಪ್ಪು ಮಾಡುತ್ತಿಲ್ಲ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಸ್ತಾಪಿಸಬಾರದು ಎಂದಾದರೆ ರೂಲಿಂಗ್ ಕೊಡಿ ಎಂದರು.
ನ್ಯಾ. ನಾರಿಮನ್ ಅವರೇ ಹೇಳಿದಂತೆ ಈ ವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ನಂಬಿಕೆ ಇಲ್ಲದಂತೆ ಆಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ತಲೆ ತಗ್ಗಿಸಬೇಕು. 10 ಶೆಡ್ಯೂಲ್ ಅಧಿಕಾರವನ್ನು ಸುಪ್ರೀಂ ಸುಪರ್ದಿಗೆ ನೀಡಬೇಕಾದ ಅನಿವಾರ್ಯತೆಯನ್ನು ಇಂತಹ ಹಲವು ತೀರ್ಪಿನಿಂದ ತಂದುಕೊಳ್ಳುತ್ತಿದ್ದೇವೆ. ತಲೆ ತಗ್ಗಿಸುವ ಸ್ಥಿತಿ ನಿರ್ವಣವಾಗಿದೆ ಎಂದಾಗ ಆಡಳಿತ-ಪ್ರತಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಖುದ್ದು ರಮೇಶ್ ಕುಮಾರ್ ಸೇರಿ ಎಲ್ಲರೂ ಸ್ಪೀಕರ್ ಆಗಿದ್ದಾಗ ಮಾತನಾಡಿದ ಕಡತ ತರಿಸಿ ಎಂದು ಒತ್ತಾಯಿಸಿದರು. ಸುಧಾಕರ್ ಮುಂದುವರಿದು ಮಾತನಾಡಿ, ರಮೇಶ್ ಕುಮಾರ್ ಸ್ಪೀಕರ್ ಆಗಿದ್ದಾಗ ಆಡಿದ ಮಾತಿನ ದಾಖಲೆ ಪ್ರಸ್ತಾಪಿಸಿ ಓದಿದರು.
ಸ್ಪೀಕರ್ ಸ್ಥಾನಕ್ಕಿರುವ ಗೌರವ ತಿಳಿಸಲು ನಾನು ಪ್ರಸ್ತಾಪಿಸಿದ್ದೇನೆ. ಇವರ ಆಶೀರ್ವಾದದಿಂದಲೇ ಮೂರನೇ ಸಾರಿ ಇಲ್ಲಿ ಕೂತಿದ್ದೇನೆ. ಇಲ್ಲವಾದರೆ ಎರಡನೇ ಸಾರಿ ಕುಳಿತಿರುತ್ತಿದ್ದೆ ಎಂದರು.
ಸ್ಪೀಕರ್ ಸ್ಥಾನದಲ್ಲಿ ಹಲವರು ಬಂದು ಹೋಗಿದ್ದಾರೆ. ಇವರ ಮೇಲಿನ ಗೌರವಕ್ಕೆ ಸಾರ್ ಅಂತಿರಲಿಲ್ಲ, ಸ್ವಾಮಿ ಅನ್ನುತ್ತಿದ್ದೆ. ನಾವು 17 ಜನ ತಂದೆ ತಾಯಿ ಹೆಸರಿನ ಮೇಲೆ ಬೆಳೆದು ಬಂದಿಲ್ಲ. ಸ್ವಂತ ಪರಿಶ್ರಮದಿಂದ ಬಂದಿದ್ದೇವೆ. ನಮ್ಮನ್ನು ಅನರ್ಹ ಎಂದು ಹೇಳಿ ತೀರ್ಪು ಕೊಟ್ಟ ರಮೇಶ್ ಕುಮಾರ್, ಸ್ಥಾನದಿಂದ ಇಳಿದು ನಮ್ಮ ವಿರುದ್ಧ ಪ್ರಚಾರ ನಡೆಸಿದರು. ಹೇಗೆ ಸಾಧ್ಯ. ಇವರು ತೀರ್ಪು ನೀಡುವಾಗ ಪೂರ್ವಾಗ್ರಹ ಪೀಡಿತರಾಗಿದ್ದರು ಎಂಬುದು ಇದರಿಂದ ಸಾಬೀತಾಗುತ್ತದೆ ಎಂದರು. ಅನರ್ಹರನ್ನು ವಾಪಸ್ ಪಡೆಯಲ್ಲ ಅಂತ ಸಿದ್ದರಾಮಯ್ಯ ಹೇಳಿದಾಗ ಶಭಾಶ್ ಶಭಾಶ್ ಎಂದಿದ್ದರು. ಇದು ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸಿದರು.
ನಾನು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿಸಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಪೀಠದ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಪೀಠದ ಗೌರವ ನನಗಿದೆ. ನಾನು ರಮೇಶ್ ಕುಮಾರ್ ವಿಚಾರವಾಗಿ ಮಾತನಾಡಿದ್ದು, ಪೀಠಕ್ಕೆ ಅಗೌರವ ತೋರಿಸಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ತುಂಬಾ ಹಿರಿಯ ಸದಸ್ಯರು ರಮೇಶ್ ಕುಮಾರ್ ಅವರು ಸದನದಲ್ಲಿ ಆಡಿದ ಮಾತು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅವರಾಡಿದ ಮಾತನ್ನು ಒಪ್ಪಿ ಮಾತು ಹಿಂಪಡೆದರೆ ಗೌರವ ಹೆಚ್ಚಾಗುತ್ತದೆ. ನುಸುಳುಗಳಲ್ಲಿ ಇದು 101 ಆಗುತ್ತದೆ. ಅವರ ಅಂತಃಕರಣಕ್ಕೆ ಗೊತ್ತಾಗಲಿದೆ ಎಂದರು.
‘ನಾನೇನೂ ಕದ್ದುಮುಚ್ಚಿ ಮಾಡಲಿಲ್ಲ..ಎಲ್ಲವನ್ನೂ ಬಹಿರಂಗವಾಗಿಯೇ ಮಾಡಿದ್ದೇನೆ..’ : ಆಗೊಮ್ಮೆ ಸೈಲೆಂಟ್​ ಆಗಿ ಬಿಜೆಪಿ ಬೆಂಬಲಿಸಿದ್ದ ಅಜಿತ್ ಪವಾರ್​ಗೆ ಈಗೇನಾಯ್ತು?

ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
