ಮೈಸೂರು:ತುರ್ತು ಸಂದರ್ಭಕ್ಕೆ ವಾಹನ ಬಿಡದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಪ್ರಾಣ ಬಿಟ್ಟಿದ್ದು, ಕಬಿನಿ ಇಂಜಿನಿಯರ್‌ಗಳು ಹಾಗೂ ಪೊಲೀಸರ ವಿರುದ್ಧ ಸ್ಥಳೀಯರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಬಿದರಳ್ಳಿ ಗ್ರಾಮದ ವೃದ್ಧೆ ಸೌಭಾಗ್ಯ(60) ಮೃತ ದುರ್ದೈವಿ. ಹೃದಾಯಘಾತವಾಗಿದ್ದ ವೃದ್ಧೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ, ಭಾರಿ ಮಳೆ ಹಿನ್ನೆಲೆಯಲ್ಲಿ ಕಬಿನಿ ಡ್ಯಾಂ‌ನಲ್ಲಿ ನೀರು ಬಿಟ್ಟ ಕಾರಣ ರಸ್ತೆ ನಡುವಿನ ಸೇತುವೆ ಬಂದ್ ಆಗಿತ್ತು. ಅಲ್ಲದೆ, ಕಬಿನಿ ಜಲಾಶಯದ ಸಮೀಪ 144 ಸೆಕ್ಷನ್ ಜಾರಿ ಇದೆ ಹೇಳಿ ಡ್ಯಾಂನ ಗೇಟ್ ಬೀಗ್​ ಬಂದ್​ ಮಾಡಲಾಗಿತ್ತು. ಈ ವೇಳೆ ವೃದ್ಧೆಯಿದ್ದ ವಾಹನ ಗೇಟ್​ ಬಳಿ ಬಂದರೂ ಸಹ ಸಿಬ್ಬಂದಿ ಅಲ್ಲಿಂದ ಕಳುಹಿಸಲು ನಿರಾಕರಿಸಿದರು.
ಈ ವೇಳೆ ವೃದ್ಧೆ ಸಂಬಂಧಿಕರು ಖುದ್ದು ಡಿಸಿಗೆ ಕರೆ ಮಾಡಿ ಪರಿಸ್ಥಿತಿ ತಿಳಿಸಿದದ್ದಾರೆ. ಫೋನ್ ಪಡೆದ ಭದ್ರತಾ ಸಿಬ್ಬಂದಿ ಬೀಗದಕೈ ನನ್ನ ಬಳಿ‌ ಇಲ್ಲ ಸರ್ ಎಂದಿದ್ದಾರೆ. ತುರ್ತು ಸಂದರ್ಭ ಕಳುಹಿಸಿಕೊಡಿ ಎಂದು ಡಿಸಿ ಆದೇಶಿಸಿದ್ದಾರೆ. ಆದರೆ, ಆದರೆ‌ ಗೇಟ್ ಬೀಗ ಹಾಕಿಕೊಂಡು ಹೋಗಿದ್ದ ಪೊಲೀಸ್ ಸಿಬ್ಬಂದಿ ಎರಡು ಗಂಟೆಯಾದರೂ ಅತ್ತ ಸುಳಿಯಲೇ ಇಲ್ಲ. ಹೀಗಾಗಿ 2 ಗಂಟೆಗೂ ಹೆಚ್ಚು ಕಾಲ ಕಾರಿನಲ್ಲೇ ನರಳಿದ ವೃದ್ಧೆ. ಆಸ್ಪತ್ರೆ ಸೇರುವ ಮುನ್ನವೇ ಮೃತಪಟ್ಟಿದ್ದಾರೆ.
ಪೊಲೀಸರು ಹಾಗೂ ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿಗಳೇ ತಿಳಿಸಿದ್ರೂ ಗೇಟ್ ಬೀಗ ತೆಗೆಯಲು ಬಾರದ ಪೊಲೀಸ್ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಧಿಕ್ಕಾರ ಕೂಗಿದರು.(ದಿಗ್ವಿಜಯ ನ್ಯೂಸ್​)
ಅಳಿಯನ ಕಿರುಕುಳ ತಾಳದ ತಂದೆ ನೇಣಿಗೆ ಕೊರಳೊಡ್ಡಿದ… ತಂದೆಯ ಸಾವನ್ನು ಅರಗಿಸಿಕೊಳ್ಳದ ಮಕ್ಕಳು ರೈಲಿಗೆ ತಲೆಯೊಡ್ಡಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
