ಸುಭಾಸ ಧೂಪದಹೊಂಡ ಕಾರವಾರ
ಐತಿಹಾಸಿಕ ಮಹತ್ವವುಳ್ಳ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಈಗಾಗಲೇ ಪ್ರದಾನ ಮಾಡಲಾಗಿದ್ದು, ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಆಯೋಜನೆಯಾಗುವ ಕದಂಬೋತ್ಸವ ಮಹತ್ವ ಕಳೆದುಕೊಂಡಂತಾಗಿದೆ.
2023-24ನೇ ಸಾಲಿನ ಪಂಪ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಗರದ ನಾ.ಡಿಸೋಜಾ ಅವರಿಗೆ ಜ.25ರಂದು ಘೋಷಿಸಿತ್ತು. ಜ.31ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಇತರ ಹಲವು ಪ್ರಶಸ್ತಿಗಳ ಜತೆ ಪಂಪ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿದೆ. ಪಂಪನ ಕರ್ಮಭೂಮಿಯಾಗಿರುವ ಬನವಾಸಿಯಲ್ಲಿ ಅದ್ದೂರಿ ಕದಂಬೋತ್ಸವ ನಡೆಸಿ, ಕಳೆದ 28 ವರ್ಷಗಳಿಂದ ನೀಡುತ್ತಿದ್ದ ಪದ್ಧತಿಯನ್ನು ಮುರಿದು ಬೆಂಗಳೂರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವುದು ಬನವಾಸಿ ಹಾಗೂ ಸುತ್ತಲಿನ ಭಾಗದ ಕನ್ನಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿಷ್ಠಿತ ಪ್ರಶಸ್ತಿ:ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಮತ್ತು ಅನನ್ಯ ಕೊಡುಗೆ ನೀಡಿದವರನ್ನು ಗುರುತಿಸಿ ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ1987ರಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ -ಠಿ;5 ಲಕ್ಷ ನಗದು ಹಾಗೂ ಫಲಕವನ್ನು ಹೊಂದಿದೆ. ಮೊದಲು ಡಾ.ಕುವೆಂಪು ನಂತರ ಡಾ.ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಕನ್ನಡ ಸಾರಸ್ವತ ಲೋಕದ ದಿಗ್ಗಜರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2023ರ ಜನವರಿ ಯಲ್ಲಿ 36ನೇ ವರ್ಷದ ಪಂಪ ಪ್ರಶಸ್ತಿಯನ್ನು ಡಾ.ಎಸ್.ಆರ್. ರಾಮಸ್ವಾಮಿ ಅವರಿಗೆ ಕದಂಬೋತ್ಸವ ದಲ್ಲಿ ಪ್ರದಾನ ಮಾಡಲಾಗಿತ್ತು.
ಕರ್ಮಭೂಮಿ:ಬನವಾಸಿಯಲ್ಲಿ 1996ರಿಂದ ಪಂಪ ಪ್ರಶಸ್ತಿ ಪ್ರದಾನ ಮಾಡುವುದನ್ನು ಸರ್ಕಾರ ರೂಢಿಸಿಕೊಂಡಿತ್ತು. ಮೊದಲು ಖಾಸಗಿ ಕಾರ್ಯಕ್ರಮವಾಗಿದ್ದ ಕದಂಬೋತ್ಸವ 1996ರಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿ ಬದಲಾಗಿತ್ತು. ವಿವಿಧ ಕಾರಣಗಳಿಂದ ಕದಂಬೋತ್ಸವ ನಡೆಯದಿದ್ದರೆ ಪಂಪ ಪ್ರಶಸ್ತಿಯನ್ನು ನೀಡದ ಉದಾಹರಣೆ ಇದೆ. ಅನಾರೋಗ್ಯದ ಕಾರಣ ಪುರಸ್ಕೃತರು ಬರಲಾಗದಿದ್ದರೆ ಅವರ ಮನೆಗೇ ಹೋಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆಯೇ ಹೊರತು ಬೇರೆಡೆ ನೀಡಿಲ್ಲ. ಇನ್ನು ಪಂಪ ಪ್ರಶಸ್ತಿಯನ್ನು ಪಂಪನ ಹುಟ್ಟೂರಿನಲ್ಲಿ ನೀಡಬೇಕು ಎಂಬ ಕೂಗು ಕೆಲವು ಬಾರಿ ಕೇಳಿ ಬಂದಿದ್ದರೂ ಸರ್ಕಾರ ಅದಕ್ಕೆ ಮಹತ್ವ ನೀಡದೇ ಬನವಾಸಿಯಲ್ಲೇ ಪಂಪ ಪ್ರಶಸ್ತಿ ನೀಡಿ, ಕದಂಬೋತ್ಸವದ ಮಹತ್ವ ಹೆಚ್ಚಿಸಿತ್ತು.
ಕದಂಬೋತ್ಸವ ನಿರ್ಲಕ್ಷ್ಯ:ಫೆ.24 ಹಾಗೂ 25ರಂದು ಕದಂಬೋತ್ಸವಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ, ಮಾ.4, 5ಕ್ಕೆ ಮುಂದೂಡಿಕೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ವರ್ಷ 2.5 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳಿಸಿದ್ದು, ಇದುವರೆಗೂ ಮಂಜೂರಾಗಿಲ್ಲ.
ಈ ಬಾರಿ ಪಂಪ ಪ್ರಶಸ್ತಿ ಘೋಷಿ ಸಿದ್ದು, ಗೊತ್ತಿದೆ. ಬೆಂಗಳೂರಿನಲ್ಲಿ ಪ್ರದಾನ ಮಾಡಿದ್ದಾರೆ ಎಂಬುದೇ ತಿಳಿದಿಲ್ಲ. ಇದಕ್ಕೆ ನನ್ನ ತೀವ್ರ ಖಂಡನೆ ಇದೆ.
| ಗಣೇಶ ಸಣ್ಣಲಿಂಗಣ್ಣನವರ, ಬನವಾಸಿ ಗ್ರಾಪಂ ಮಾಜಿ ಅಧ್ಯಕ್ಷ
ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವವನ್ನು ಅನಿವಾರ್ಯ ಕಾರಣಗಳಿಂದ ಮಾರ್ಚ್ 4 ಮತ್ತು 5ಕ್ಕೆ ಮುಂದೂಡಲಾಗಿದೆ.
| ಗಂಗೂಬಾಯಿ ಮಾನಕರ್, ಉತ್ತರ ಕನ್ನಡ ಜಿಲ್ಲಾಧಿಕಾರಿ
ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

ಚುನಾವಣೆ ಸಮೀಸುತ್ತಿದ್ದಂತೆ ಕಾಂಗ್ರೆಸ್​ಗೆ ಶಾಕ್! ​ಸಿಧು ಜೊತೆ 3 ‘ಕೈ’ ಶಾಸಕರು ಬಿಜೆಪಿ ಸೇರ್ಪಡೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
