ಬಾಗಲಕೋಟೆ:ಭಾರತೀಯ ಪರಂಪರೆಯಲ್ಲಿ ಮಳೆ-ಬೆಳೆ ರಾಜಕೀಯದ ಕುರಿತಾಗಿ ಭವಿಷ್ಯವನ್ನು ನುಡಿಯುವ ಅನೇಕ ಕಾರ್ಣಿಕ ಸ್ಥಳ ಆಚರಣೆಗಳಿವೆ. ಅಂತಹ ವಿಶಿಷ್ಟ ಆಚರಣೆಗಳಲ್ಲಿ ಕಡುಬಿನ ಕಾಳಗವೂ ಒಂದು.
ಪ್ರತಿ ವರ್ಷ ಜಾತ್ರೆಯ ವೇಳೆ ಗಂಗಾಹೊಂಡದಿಂದ ಬಿಂದಿಗೆಗಳನ್ನು ತುಂಬಿಕೊಂಡು ಅವುಗಳಿಗೆ ಮಳೆಗಳ ಹೆಸರು ಬರೆದು ಪೂಜೆ ಸಲ್ಲಿಸುತ್ತಾರೆ. ಬಿಂದಿಗೆಗಳ ಬಸಿಯುವಿಕೆ ಆಧರಿಸಿ ಮಳೆ ಮಳೆ ಮುನ್ಸೂಚನೆ ಹೊರಬೀಳುತ್ತದೆ.
ಇದನ್ನು ಕೇಳಲು ಸುತ್ತಮುತ್ತಲಿನ ಸಾವಿರಾರು ರೈತರು ತಡರಾತ್ರಿವರೆಗೂ ಕಾದಿರುತ್ತಾರೆ.‌ ನಿನ್ನೆ ರಾತ್ರಿ ನಡೆದ ಕಡುಬಿನ ಕಾಳಗದಲ್ಲಿ ಶ್ರೀಮಠದ ಮಠಾಧೀಶರಾದ ಮೇಘರಾಜ ಸ್ವಾಮೀಜಿ, ಹುಚ್ಚಪ್ಪ ಶಿರೂರ್, ಮಳೆಯಪ್ಪ ಮಾಸ್ತರ್ ತೆಗ್ಗಿ, ರಾಮಣ್ಣ ಗಣಿ, ಅರ್ಚಕರಾದ ಸಂಜು ಪತ್ತಾರ್, ಗಂಗಾಧರ ಪತ್ತಾರ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
