| ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಇದೀಗ ರಂಗೇರಿದೆ. ನಾಲ್ಕು ಬಾರಿ ಗೆದ್ದು ಐದನೇ ಬಾರಿಯೂ ಜಯದ ನಗೆ ಬೀರುವ ಹುಮ್ಮಸ್ಸಿನಿಂದ ಕೇಂದ್ರ ಸಚಿವರೂ ಆದ ಸಂಸದ ಪ್ರಲ್ಹಾದ ಜೋಶಿ ಬಿಜೆಪಿಯಿಂದ ಕಣಕ್ಕಿಳಿದಿದ್ದರೆ, ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಹೊಸ ಮುಖ ವಿನೋದ ಅಸೂಟಿ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಧಾರವಾಡ ಕ್ಷೇತ್ರ ಬಿಜೆಪಿಯ ಗಟ್ಟಿ ನೆಲ. 1996ರಲ್ಲಿ ಡಾ. ವಿಜಯ ಸಂಕೇಶ್ವರ ಅವರು ಈ ಕ್ಷೇತ್ರದಿಂದ ಗೆಲ್ಲುವ ಮೂಲಕ ಬಿಜೆಪಿಗೆ ಭದ್ರ ಬುನಾದಿ ಹಾಕಿದರು. ಅಂದಿನಿಂದ ಸತತ ಏಳು ಬಾರಿ ಗೆದ್ದಿರುವ ಬಿಜೆಪಿ ಇದೀಗ ಎಂಟನೇ ಬಾರಿಯೂ ಜಯಿಸುವ ಜೋಷ್​ನಲ್ಲಿದೆ. ಹಿಂದುತ್ವ, ರಾಣಿ ಚನ್ನಮ್ಮ ಮೈದಾನ (ಈದ್ಗಾ) ಹೋರಾಟ, ಪ್ರಧಾನಿ ನರೇಂದ್ರ ಮೋದಿ ಹವಾ ಹಾಗೂ ತಮ್ಮ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡು ಜೋಶಿ ಮತಯಾಚಿಸುತ್ತಿದ್ದಾರೆ.
ಕಾಂಗ್ರೆಸ್​ನ ವಿನೋದ ಅಸೂಟಿ ಗ್ರಾಮೀಣ ಭಾಗದವರಾಗಿದ್ದು ನಗರ ಪ್ರದೇಶದ ರಾಜಕಾರಣದಿಂದ ದೂರವಿದ್ದವರು. ಜನರಿಗೂ ಚಿರಪರಿಚಿತರಲ್ಲ ಎನ್ನುವುದು ಬಿಜೆಪಿಗೆ ಲಾಭ ತಂದುಕೊಟ್ಟಿದೆ. ಆದರೆ, ಕಾಂಗ್ರೆಸ್ ಆಡಳಿತ, ಗ್ಯಾರಂಟಿ ಯೋಜನೆಗಳು, ಅಹಿಂದ ಮತಗಳು ಕೈಹಿಡಿಯಲಿವೆ ಎಂಬ ವಿಶ್ವಾಸ ಕಾಂಗ್ರೆಸ್ಸಿಗರದ್ದು.
ಜೋಷ್​ನಲ್ಲಿ ಜೋಶಿ ಪಡೆ:ಕ್ಷೇತ್ರದಲ್ಲಿ ಗೆಲುವಿಗೆ ಜಾತಿ ಕಾರಣವಾಗಿರುವ ಉದಾಹರಣೆ ಇಲ್ಲ. ಹಿಂದುತ್ವ ಹಾಗೂ ಬಿಜೆಪಿಯ ಬಲವೇ ಜೋಶಿ ಅವರನ್ನು ಗೆಲ್ಲಿಸಿಕೊಂಡು ಬಂದಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ ಎಂದೆನಿಸಿದರೂ 2019ರ ಚುನಾವಣೆಯಲ್ಲಿ ಲಿಂಗಾಯತ ಸಮಾಜದ ವಿನಯ ಕುಲಕರ್ಣಿ ಮುಗ್ಗರಿಸಿದ್ದರು. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಅಖಾಡಕ್ಕೆ ಇಳಿದರೂ ದೊಡ್ಡ ಪೆಟ್ಟೇನೂ ಬೀಳದು ಎನ್ನುವ ಲೆಕ್ಕಾಚಾರ ಬಿಜೆಪಿಗರದ್ದು.
ಅಹಿಂದ ಮತಬೇಟೆಯ ಗುರಿ:ಹಿಂದೆ ಲಿಂಗಾಯತ ಅಭ್ಯರ್ಥಿ ಪ್ರಯೋಗ ಮಾಡಿದ್ದರೂ ಸೋಲು ಕಂಡಿದ್ದರಿಂದ ಅಹಿಂದ ಮತ ಗುರಿಯಾಗಿಸಿ ಕುರುಬ ಸಮಾಜದ ವಿನೋದ ಅಸೂಟಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲಾಗಿದೆ. ಹಿಂದೆ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ ಡಿ.ಕೆ.ನಾಯ್ಕರ್ ಕುರುಬ ಸಮುದಾಯದವರೇ ಆಗಿದ್ದರು. ಕುರುಬ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಮತ ಸಿಕ್ಕರೆ ಅನುಕೂಲವಾಗಲಿದೆ ಎನ್ನುವುದು ಲೆಕ್ಕಾಚಾರ ಇದೆ.
ಜಾತಿ ಲೆಕ್ಕಾಚಾರ…:ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 17.91 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಸುಮಾರು 5.5 ಲಕ್ಷ ಲಿಂಗಾಯತ ಸಮಾಜದವರಿದ್ದಾರೆ. ಎಸ್​ಸಿ, ಎಸ್​ಟಿ ಸುಮಾರು 4 ಲಕ್ಷ, ಅಲ್ಪಸಂಖ್ಯಾಂತ 3.5 ಲಕ್ಷ ಹಾಗೂ 1.80 ಲಕ್ಷ ಕುರುಬರು ಸೇರಿ 3 ಲಕ್ಷ ಜನ ಹಿಂದುಳಿದ ವರ್ಗ ಹಾಗೂ ಇತರ ಮತದಾರರಿದ್ದಾರೆ.
1. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯ, ಪಕ್ಷದ ನಾಲ್ವರು ಶಾಸಕರ ಬಲ
2. ಹಿಂದುತ್ವ ಬೇರೂರಿರುವ ಕ್ಷೇತ್ರವು ಬಿಜೆಪಿಯ ಗಟ್ಟಿ ನೆಲ
3. ಲಿಂಗಾಯತರನ್ನು ಕಡೆಗಣಿಸಿದ್ದಾರೆಂದು ಸ್ವಾಮೀಜಿ ಹೇಳುತ್ತಿರುವುದು
4. ಗ್ಯಾರಂಟಿ, ಅಹಿಂದ ಮತ ಕಾಂಗ್ರೆಸ್​ನತ್ತ ವಾಲುವ ಸಾಧ್ಯತೆ
1. ಅಹಿಂದ ಮತಗಳು ಕೈಹಿಡಿಯುವ ನಿರೀಕ್ಷೆ
2. ಗ್ಯಾರಂಟಿ ಯೋಜನೆ ಯಿಂದ ಲಾಭ
3. ಹೊಸ ಮುಖ, ಕುರುಬ ಸಮಾಜಕ್ಕೆ ಮಣೆ ಹಾಕಿರುವುದು
4. ಕ್ಷೇತ್ರದ ಜನರಿಗೆ ಚಿರಪರಿಚಿತರಲ್ಲ
5. ಕಾರ್ಯಕರ್ತ ಬಳಗದಲ್ಲಿ ವರ್ಚಸ್ಸು ಹೊಂದಿಲ್ಲ
ಪ್ರಧಾನಿ ಮೋದಿ ಒಂದು ದಶಕದಲ್ಲಿ ಹಲವಾರು ಅಭಿವೃದ್ಧಿ ಮಾಡಿ ದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಯನ್ನಾಗಿಸಲು ಹಾಗೂ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ಇದೆ.
| ಪ್ರಲ್ಹಾದ ಜೋಶಿ ಬಿಜೆಪಿ ಅಭ್ಯರ್ಥಿ
ಈಗಾಗಲೆ ಕ್ಷೇತ್ರಾದ್ಯಂತ ಪ್ರಚಾರ ಆರಂಭಿಸಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ.
| ವಿನೋದ ಅಸೂಟಿ ಕಾಂಗ್ರೆಸ್ ಅಭ್ಯರ್ಥಿ
ಬೆಳಗಾವಿ: ಅಕ್ರಮ ಗೋ ಸಾಗಾಟ ಮಾಡ್ತಿದ್ದ ಲಾರಿ ಚಾಲಕ, ಕ್ಲೀನರ್​ ಮೇಲೆ ಹಿಂದೂ ಕಾರ್ಯಕರ್ತರಿಂದ ಹಲ್ಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
