ಕಲಬುರಗಿ:ಮದುವೆಯ ವಿಚಾರದಲ್ಲಿ ಮನೆಯಲ್ಲಿ ನಡೆದ ಗಲಾಟೆಯಿಂದ ಅಣ್ಣ ಮತ್ತು ತಂಗಿ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ  ಕಲಬುರಗಿಯಲ್ಲಿ ನಡೆದಿದೆ.
ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು. ​​ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಅಣ್ಣ, ತಂಗಿ ಇಬ್ಬರೂ ಮೃತಪಟ್ಟಿದ್ದಾರೆ.
ನಡೆದಿದ್ದೇನು?:ನಂದಿನಿ ಸಣ್ಣ-ಪುಟ್ಟ ವಿಚಾರಕ್ಕೂ ಹಠ ಮಾಡುತ್ತಿದ್ದಳು. ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದ. ಇಷ್ಟಕ್ಕೇ ನೊಂದಿಕೊಂಡ ನಂದಿನಿ ಮನೆ ಬಳಿಯಿದ್ದ ಬಾವಿಗೆ ಹಾರಿದ್ದಾಳೆ. ತಂಗಿ ಬಾವಿಗೆ ಜಿಗಿದಿದ್ದು ತಿಳಿಯುತ್ತಿದ್ದಂತೆ ತಂಗಿ ಕಾಪಾಡಲು ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.
ಬಾವಿಯ ದಡದಲ್ಲಿ ನಂದಿನಿ ತಲೆಗೆ ಹೂವಿನ ಗೊಂಚಲು ಮುಡಿದುಕೊಂಡದ್ದು ನೀರಿನಲ್ಲಿ ತೇಲುತ್ತಿರುವುದು ಗಮನಿಸಿದ ಹೆತ್ತವರು ಅನುಮಾನಗೊಂಡು ಕಾರ್ಯಾಚರಣೆ ನಡೆಸಿದ ನಂತರ ಬಾವಿಯಲ್ಲಿ ಅಣ್ಣ ತಂಗಿಯ ಶವ ಪತ್ತೆಯಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕಿಚ್ಚ ಇಲ್ಲದಿದ್ರೆ ಬಿಗ್‌‌ಬಾಸ್‌ ಇಲ್ಲ..ಆದ್ರೆ ಇನ್ಮುಂದಿನ ಸೀಸನ್‌ಗಳಲ್ಲಿ ಸುದೀಪ್‌ ಸಾರಥ್ಯ ಇರಲ್ಲ?

ಎಂಗೇಜ್ ಆದ ‘ದಿ ವಿಲನ್’ ನಟಿ ಆಮಿ ಜಾಕ್ಸನ್; 4 ವರ್ಷದ ಮಗನಿರುವ ನಟಿಗೆ ಇದು 2ನೇ ಪ್ರೀತಿ..

ಡ್ರೋನ್‌ ಪ್ರತಾಪ್‌ ಬಿಗ್​ಬಾಸ್​ ಕಪ್​ ಗೆದ್ದಿಲ್ಲ; ಅರ್ಧ ಗಡ್ಡ, ಮೀಸೆ ತೆಗೆದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
