ಕಲಬುರಗಿ:ಕಿಲ್ಲರ್ ಕರೊನಾಗೆ ಒಂದೇ ದಿನ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದ ಆರ್ ಸಿ ತಾಂಡದ ನಿವಾಸಿಗಳಾಗಿರುವ ಚಾಂದಿಬಾಯಿ ನಾಯಕ್ (74) ಮತ್ತು ಭಜನ್ ನಾಯಕ್(32) ಕರೊನಾಗೆ ಬಲಿಯಾದ ತಾಯಿ-ಮಗ. ಇಬ್ಬರು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಇಹಲೋಕ ತ್ಯಜಿಸಿದ್ದಾರೆ.
ಒಂಬತ್ತು ದಿನಗಳ ಹಿಂದೆ ಚಾಂದಿಬಾಯಿ ಮತ್ತೊಬ್ಬ ಹಿರಿಯ ಪುತ್ರ ಹಾಗೂ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಸಹ ಹೆಮ್ಮಾರಿ‌ ಕೊರೊನಾಗೆ ಬಲಿಯಾಗಿದ್ದರು. ವಾರದಲ್ಲಿ ಒಂದೇ ಕುಟುಂಬದ ತಾಯಿ-ಇಬ್ಬರು ಮಕ್ಕಳು ಸೇರಿ ಮೂರು ಜನರು ಮೃತಪಟ್ಟಿದ್ದಾರೆ.
ಇನ್ನೊರ್ವ ಪುತ್ರ ಮಹೇಶ್ ನಾಯಕ್ ಎಂಬುವವರು ಸಹ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೂವರು ಬಲಿಯಾದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.(ದಿಗ್ವಿಜಯ ನ್ಯೂಸ್​)
ಕ್ಲಬ್​ಹೌಸ್​ಗಿಲ್ಲ ತಡೆಬೇಲಿ: ಕೋಮುದ್ವೇಷ- ರಾಜಕೀಯ ಸಂಘರ್ಷದ ಚರ್ಚೆ ಮುಕ್ತ ಮುಕ್ತ..

ಅಂಗಡಿಯೊಳಗೆ ನುಗ್ಗಿ ಮಾಲೀಕನಿಗೆ ಚಪ್ಪಲಿ ಏಟು ಕೊಟ್ಟ ಮಹಿಳೆಯರು! ಅಷ್ಟಕ್ಕೂ ಕಾರಣವೇನು?

VIDEO | ಬಿಜೆಪಿಯಿಂದ ಟಿಎಂಸಿ ಸೇರಿದವರಿಗೆ ಸ್ಯಾನಿಟೈಸರ್ ಸಿಂಪಡಿಸಿ ‘ಶುದ್ಧೀಕರಣ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fifteen =
Remember me
