ಕಲಬುರಗಿ:ಯುವಕ-ಯುವತಿ ಪ್ರೀತಿಸಿ ಮನೆ ಬಿಟ್ಟು ತೆರಳಿದ್ದಕ್ಕೆ ಪೊಲೀಸರು ಯುವಕನ ಪಾಲಕರನ್ನು ಠಾಣೆ ಎಳೆತಂದು ಥಳಿಸಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಮೂಲದ ಕಸ್ತೂರಿ ಹಾಗೂ ವಿಜಯಪುರ ಮೂಲದ ಅಯ್ಯಪ್ಪ ಸ್ವಾಮಿ ಬೆಳಗಾವಿಯ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಸಹಪಾಠಿಗಳಾಗಿದ್ದರಿಂದ ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕರವಾಗಿತ್ತು. ಪ್ರೀತಿಯ ಅಲೆಯಲ್ಲಿ ತೇಲಾಡುತ್ತಿದ್ದ ಪ್ರೇಮಿಗಳು ಕಳೆದ ಮಂಗಳವಾರ ಮನೆ‌ಬಿಟ್ಟು ತೆರಳಿದ್ದರು. ಇದರ ಬೆನ್ನಲ್ಲೇ ಕಸ್ತೂರಿ ಪೋಷಕರು ಕಲಬುರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಬಳ್ಳಾರಿ ಇತಿಹಾಸ ಅರಿಯದೆ ಜಿಲ್ಲೆ ವಿಭಜನೆ; ಮುಖ್ಯಮಂತ್ರಿ ವಿರುದ್ಧ ವಾಟಾಳ್ ನಾಗರಾಜ ಆಕ್ರೋಶ
ದೂರಿನ ಅನ್ವಯ ವಿಚಾರಣೆಗೆಂದು ಯುವಕನ ತಂದೆ ತುಕಾರಾಮ್ ಮತ್ತು ತಾಯಿ ಸುಜಾತರನ್ನು ಕರೆತಂದು ಹಿಗ್ಗಾಮುಗ್ಗಾ ಥಳಿಸಿರುವ ಆರೋಪ ಕಲಬುರಗಿಯ ಮಹಿಳಾ ಪೊಲೀಸ್ ಠಾಣೆಯ ವಿರುದ್ಧ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಿಂದ ಪಾಲಕರನ್ನು ಕರೆಯಿಸಿ ಇನ್ಸ್​ಪೆಕ್ಟರ್​ ಸಂಗಮೇಶ್ ಪಾಟೀಲ್​ ಮತ್ತು ಸಿಬ್ಬಂದಿ ನೆಹರು ಸಿಂಗ್ ಹಲ್ಲೆ ಮಾಡಿದ್ದಾರೆನ್ನಲಾಗಿದೆ.
ಇಷ್ಟೇ ಅಲ್ಲದೆ, ಕುಡಿಯಲು ನೀರು ಕೇಳಿದರೆ ನಿನ್ನ ಹೆಂಡತಿಯ ಮೂತ್ರ ಕುಡಿಯುವಂತೆ ನಿಂದಿಸಿದ್ದಾರೆ. ಯುವಕನ ತಾಯಿಗೂ ಅಮಾನವೀಯವಾಗಿ ಥಳಿಸಿರುವ ಆರೋಪವಿದ್ದು, ಗಾಯಗೊಂಡ ಪಾಲಕರನ್ನು ಕಲಬುರಗಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ರಾಜ್ಯದಲ್ಲಿ ಮತ್ತೆ 2 ದಿನ ಭಾರಿ ಮಳೆ: ಅಪ್ಪಳಿಸಲಿದೆ ನಿವಾರ್​ ಚಂಡಮಾರುತ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 − six =
Remember me
