ಕಲಬುರಗಿ:ಕಲಬುರಿಯ ಸೂಪರ್​​ ಮಾರ್ಕೆಟ್​ನಲ್ಲಿ ಈತ ಮಾಡಿದ ಕೆಲಸಕ್ಕೆ ಜನರು ಭಯಭೀತರಾಗಿದ್ದಾರೆ. ಕಡೆಗೆ ವಿಧಿಯಿಲ್ಲದೇ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ.
ಕಲಬುರಗಿ ನಗರದ ಅಬ್ದುಲ್ ಜಾಫರ್ ಸಾಬ್ ಎನ್ನುವಾತ ಮಾನಸಿಕ ಅಸ್ವಸ್ಥತೆಯಿಂದನ ಬಳಲುತ್ತಿದ್ದು ಸೂಪರ್​ ಮಾರ್ಕೆಟ್​ನೊಳಗೆ ಈತ ಚಾಕು ಹಿಡಿದು ಜನರೊಗೆ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಭಯಭೀತರಾದ ಜನರು ತಕ್ಷಣ ಪೊಲೀಸರನ್ನು ಕರೆದಿದ್ದಾರೆ.
ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಸೂಪರ್​ ಮಾರ್ಕೆಟ್​ಗೆ ಬಂದು ಈತನಲ್ಲಿ ಚಾಕು ಬಿಸಾಡುವಂತೆ ಸಾಕಷ್ಟು ಬಾರಿ ವಿನಂತಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಾಫರ್​ ಸಾಬ್​ ಕ್ಯಾರೆ ಅನ್ನಲಿಲ್ಲ. ಬದಲಾಗಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ.
ಹೀಗಾಗಿ ವಿಧಿ ಇಲ್ಲದೇ ಪೊಲೀಸರು ಆತ್ಮರಕ್ಷಣೆ ಸಲುವಾಗಿ ಅಬ್ದುಲ್‌ ಜಾಫರ್ ಮೇಲೆ ಫೈರಿಂಗ್ ನಡೆಸಿದ್ದಾರೆ. ಈ ಸಂದರ್ಭ ಪಿಎಸ್ಐ ವಾಹಿದ್ ಕೊತ್ವಾಲ್ ಒಟ್ಟು ಮೂರಿ ಬಾರಿ ಅಬ್ದುಲ್ ಜಾಫರ್ ಕಾಲಿಗೆ ಗುಂಡು ಹಾರಿಸಿದ್ದು ಗಾಯಗೊಂಡ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 11 =
Remember me
