ವಿಜಯನಗರ:ಎರಡು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ರಥದಿಂದ ಕಳಶ ಕಳಚಿ ಬಿದ್ದಿರುವುದು, ಭಕ್ತರಲ್ಲಿ ಆತಂಕ ಮೂಡಿಸಿದ್ದು, ಅವರನ್ನು ಚಿಂತೆಗೀಡು ಮಾಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ದೇವಸ್ಥಾನವೊಂದರಲ್ಲಿ ಈ ವಿದ್ಯಮಾನ ನಡೆದಿದೆ.
ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಕರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆದಿರಲಿಲ್ಲ. ಆದರೆ ಈ ಸಲ ಕರೊನಾ ಗಣನೀಯವಾಗಿ ಜನಜೀವನ ಸಹಜಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ರಥೋತ್ಸವ ನಡೆಸಲಾಗಿದೆ. ಈ ಬಾರಿ ಹೊಸದಾಗಿ ತೇರು ನಿರ್ಮಾಣ ಮಾಡಿ, ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ರಥೋತ್ಸವ ನಡೆಸಲಾಗಿದೆ.
ಆದರೆ ಹೀಗೆ ನಡೆದ ರಥೋತ್ಸವದಲ್ಲಿ ತೇರು ಸುಮಾರು 50 ಮೀಟರ್ ದೂರದಷ್ಟು ಚಲಿಸುವಷ್ಟರಲ್ಲಿ ರಥದ ಕಳಶ ಕಳಚಿಕೊಂಡು ಬಿದ್ದಿದೆ. ಆ ಕಳಶವನ್ನು ಮತ್ತೆ ಕಟ್ಟಿದರೂ ಅದು ನಿಂತಿಲ್ಲ. ಪರಿಣಾಮವಾಗಿ ದೇವಳದ ಭಕ್ತರು ಕಳಶ ಕಳಚಿಕೊಂಡಿರುವುದು ಅಪಶಕುನವಾ ಎಂಬ ಆತಂಕಕ್ಕೆ ಒಳಗಾಗಿದ್ದು, ಚಿಂತೆಗೀಡಾಗಿದ್ದಾರೆ.
ಪಬ್​ ಜಿ ಗೀಳು ತಂದಿಟ್ಟ ಫಜೀತಿ; ಬಾಂಬ್​ ಇದೆ ಎಂದು ಕರೆ ಮಾಡಿದ್ದ ಬಾಲಕ!

ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ

ಒಂದೊಪ್ಪತ್ತಲ್ಲೇ ಭಾರಿ ವಿರೋಧಕ್ಕೆ ಮಣಿದ ಶ್ರೀಲಂಕಾ ಸರ್ಕಾರ; ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
