| ವಾದಿರಾಜ ವ್ಯಾಸಮುದ್ರಕಲಬುರಗಿಕಲ್ಯಾಣ ಕರ್ನಾಟಕವಾಗಿ ಬದಲಾದರೂ ಹೈದರಾಬಾದ್ ಕರ್ನಾಟಕ ಜನರ ‘ಕಲ್ಯಾಣ’ ಕನಸು ನನಸಾಗುತ್ತಿಲ್ಲ. ಈ ಭಾಗಕ್ಕೆ ಹತ್ತಾರು ಮಹೋನ್ನತ ಯೋಜನೆಗಳು ಹರಿದುಬಂದರೂ ಬಂದಷ್ಟೇ ವೇಗದಲ್ಲಿ ಕೈ ತಪ್ಪಿ ಇತರ ಭಾಗಕ್ಕೆ ಸ್ಥಳಾಂತರವಾಗುತ್ತಿರುವುದು ನಿರಾಸೆಯ ಕಾಮೋಡ ಕವಿಯುವಂತೆ ಮಾಡಿದೆ. ಹೀಗೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಬೇಕಾದ ಸಂಸದರು, ಶಾಸಕರು ಬಾಯಿಗೆ ಬೀಗ ಹಾಕಿ ಕುಳಿತಿದ್ದಾರೆ. ಮತ್ತೆ ಮತ್ತೆ ಈ ಭಾಗ ನಿರ್ಲಕ್ಷ್ಯ್ಕೆ ಒಳಗಾಗುತ್ತಿದ್ದರಿಂದ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಮತ್ತೆ ಬಲ ಬಂದರೂ ಅಚ್ಚರಿಪಡಬೇಕಿಲ್ಲ ಎಂಬ ಅಭಿಪ್ರಾಯವಿದೆ. ಈ ನಡುವೆ ಬಿಜೆಪಿ ಮೂಲಕವೇ ಹೋರಾಟ ನಡೆಸಿ ಸ್ಥಳೀಯ ಯೋಜನೆಗಳನ್ನು ಮತ್ತೆ ಇಲ್ಲಿಗೆ ತರುವ ಪ್ರಯತ್ನ ನಡೆಸಲು ಲಕ್ಷ್ಮಣ ದಸ್ತಿ ಸಾರಥ್ಯದ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ನೇತೃತ್ವದ ಸರ್ವ ಪಕ್ಷಗಳ ಸಭೆ ತೀರ್ವನಿಸಿದೆ.
ಹೊಸ ಯೋಜನೆಗಳು ಬರುವುದು ಬೇರೆ ಮಾತು. ಕಾರ್ಯಗತವಾಗಬೇಕಿದ್ದ ಮಹತ್ವದ ಯೋಜನೆಗಳೇ ಬೇರೆಡೆ ಸ್ಥಳಾಂತರವಾಗುತ್ತಿವೆ. ಹೀಗಾಗಿ ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿ ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಸರ್ಕಾರ ಮತ್ತು ಜನಪ್ರತಿನಿಧಿಗಳು ತೋರಿಸಿಕೊಟ್ಟಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಒಂದೂವರೆ ವರ್ಷದ ಹಿಂದೆ ಸಿಎಂ ಯಡಿಯೂರಪ್ಪ ಹೈದರಾಬಾದ್ ಪದ ಅಳಿಸಿ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದ್ದಾರೆ. ಹೊಸ ಹೆಸರಿನ ಬಳಿಕವೇ ಒಂದೊಂದು ಯೋಜನೆಗೆ ಎಳ್ಳು-ನೀರು ಬಿಡುತ್ತಿರುವುದು ದುರಾದೃಷ್ಟವೇ ಸರಿ. ಇತ್ತೀಚಿನ ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತಿ ಹಂತದಲ್ಲೂ ಕಡೆಗಣನೆಗೆ ಒಳಗಾಗುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಇನ್ನು ಈ ಭಾಗದ ಎಲ್ಲ ಐದು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಸಂಸದರಿದ್ದಾರೆ. ಇಷ್ಟೆಲ್ಲ ಇದ್ದರೂ ಬರೆ ಎಳೆಯುತ್ತಿರುವುದು ಸಹಿಸಿಕೊಳ್ಳುವಂಥದ್ದಲ್ಲ.
ಅನುದಾನ ಕಟ್ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಸರ್ಕಾರ 1500 ಕೋಟಿ ರೂ. ಇಲ್ಲವೆ 2000 ಕೋಟಿ ರೂ. ನೀಡಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಈ ಮೊತ್ತ 1100 ಕೋಟಿ ರೂ.ಗೆ ಇಳಿದಿದೆ.
ಹೆಸರು ಬದಲಿಸಿದ್ದೇ ಸಾಧನೆ!ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ್ದೇ ರಾಜ್ಯ ಸರ್ಕಾರದ ಸಾಧನೆ. ಈ ಭಾಗ ಸರ್ವ ರೀತಿಯಿಂದ ಅಭಿವೃದ್ಧಿ ಹೊಂದಿ ಸಮಸ್ಯೆಗಳಿಂದ ಮುಕ್ತವಾಗಬೇಕು. ಮುಂದುವರಿದ ಭಾಗಗಳಿಗೆ ಸಮನಾಗಿ ನಿಲ್ಲಬೇಕು. ಆಗಲೇ ಆ ಹೆಸರಿಗೆ ಸಾರ್ಥಕತೆ ಬರುತ್ತದೆ. ಆದರೆ ಅಂಥ ಪ್ರಯತ್ನ ಆಗುತ್ತಿಲ್ಲ.
ಕೈತಪ್ಪಿದ, ಸ್ಥಳಾಂತರಿತ ಯೋಜನೆದಶಕದ ಕನಸಾಗಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಬಂದಿಲ್ಲ ್ಝಲಬುರಗಿಯಲ್ಲಿ ಆಗಬೇಕಾಗಿದ್ದ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ) ಬೇರೆಡೆ ಸ್ಥಳಾಂತರ ್ಝಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಗಬೇಕಿದ್ದ ಸೆಂಟರ್ ಫಾರ್ ಎಕ್ಸ್ ಲೆನ್ಸ್ ಕೇಂದ್ರ ಬೆಂಗಳೂರಿಗೆ ಶಿಫ್ಟ್ ್ಝುರೆತು ಹೋದ ಜವಳಿ ಪಾರ್ಕ್ ್ಝ್ಥಳಾಂತರಗೊಂಡ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆ ವಿಭಾಗೀಯ ಕಚೇರಿ ್ಝನಸಾಗಿರುವ ರಾಷ್ಟ್ರೀಯ ಹೂಡಿಕೆ ಹಾಗೂ ಉತ್ಪಾದನಾ ವಲಯ(ನಿಮ್್ಜ) ್ಝಾಯಚೂರಿಗೆ ಬರದ ಐಐಟಿ ್ಝೊಪ್ಪಳಕ್ಕೆ ಉಡಾನ್ ಯೋಜನೆಯಡಿ ಆಗದ ಏರ್​ಪೋರ್ಟ್ ್ಝೕದರ್​ನಲ್ಲಿ ಘೊಷಿತ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ(ಸಿಪೆಟ್) ಕೇಂದ್ರ ಮತ್ತು ಹೆಲಿಕಾಪ್ಟರ್ ಬಿಡಿ ಭಾಗಗಳ ತಯಾರಿಕೆ ಘಟಕ ್ಝೕದರ್ ಪಶು ವೈದ್ಯಕೀಯ ವಿವಿ ಇಬ್ಭಾಗ ಚರ್ಚೆ ್ಝ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನಕ್ಕೆ ಕತ್ತರಿ ್ಝರ್ತಿಯಾಗದ ಸಾವಿರಾರು ಹುದ್ದೆಗಳು
ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಇರುವುದರಿಂದ ಸೆಂಟರ್ ಫಾರ್ ಎಕ್ಸ್​ಲೆನ್ಸ್ ಸೆಂಟರ್ ಕಲಬುರಗಿಯಲ್ಲೇ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ. ಕೇಂದ್ರ ಸರ್ಕಾರ ಪಕ್ಷಭೇದ ಮರೆತು ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಿರುವ ಸೌಲಭ್ಯ ದೊರಕಿಸಲು ಮುಂದಾಗಬೇಕಿದೆ.| ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆ ಪ್ರತಿಪಕ್ಷ ನಾಯಕ
ಬಿಜೆಪಿ ಸರ್ಕಾರಕ್ಕೆ ನಮ್ಮ ಭಾಗದ ಅಭಿವೃದ್ಧಿ ಬೇಕಿಲ್ಲ. ಹೀಗಾಗಿ ಇಲ್ಲಿಯ ಒಂದೊಂದೇ ಯೋಜನೆಗಳನ್ನು ಅನ್ಯ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ. ಬರಬೇಕಾದ ಯೋಜನೆಗಳಾದರೂ ಬರುವಂತೆ ಮಾಡಿದರೆ ಕಲ್ಯಾಣ ಕರ್ನಾಟಕ ಎಂಬ ಹೆಸರಿಗೆ ಗೌರವ, ಸಾರ್ಥಕತೆ ಬರುತ್ತದೆ.| ಡಾ.ಅಜಯಸಿಂಗ್ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ
ಕಲಬುರಗಿಗೆ ಬರಬೇಕಿದ್ದ ಏಮ್್ಸ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಿದ್ದು ಬೇಸರ ತರಿಸಿದೆ. ನಮ್ಮಲ್ಲಿ ಈ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸೌಲಭ್ಯ, ಭೂಮಿ ಮತ್ತು ದೊಡ್ಡದಾದ ಇಎಸ್​ಐ ಆಸ್ಪತ್ರೆ, ವೈದ್ಯಕೀಯ ಕಾಲೇಜು ಇರುವುದರಿಂದ ಕಲಬುರಗಿಯಲ್ಲಿ ಮಾಡುವುದು ಸೂಕ್ತ.| ಡಾ.ಉಮೇಶ ಜಾಧವ್ಕಲಬುರಗಿ ಸಂಸದ
ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಇರುವುದರಿಂದ ಸೆಂಟರ್ ಫಾರ್ ಎಕ್ಸ್​ಲೆನ್ಸ್ ಸೆಂಟರ್ ಕಲಬುರಗಿಯಲ್ಲೇ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದೇನೆ. ಕೇಂದ್ರ ಸರ್ಕಾರ ಪಕ್ಷಭೇದ ಮರೆತು ಕಲ್ಯಾಣ ಕರ್ನಾಟಕಕ್ಕೆ ಸಿಗಬೇಕಿರುವ ಸೌಲಭ್ಯ ದೊರಕಿಸಲು ಮುಂದಾಗಬೇಕಿದೆ.| ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆ ಪ್ರತಿಪಕ್ಷ ನಾಯಕ
ರಾಜ್ಯ ಸರ್ಕಾರ ಕಾಳಜಿ ವಹಿಸಿ ವಿಶೇಷ ಯೋಜನೆಗಳನ್ನು ಆದ್ಯತೆ ಮೇರೆಗೆ ಕಾರ್ಯರೂಪಕ್ಕೆ ತರಬೇಕು. ಕೇಂದ್ರವೂ ನೆರವಿನಹಸ್ತ ಚಾಚಬೇಕು. ಇಲ್ಲದಿದ್ದರೆ ಹಿಂದುಳಿದ ಭಾಗದ ಸರ್ವಾಂಗೀಣ ಪ್ರಗತಿ ನಿರೀಕ್ಷಿಸಲಾಗದು.| ರಾಜಶೇಖರ ಪಾಟೀಲ್ಹುಮನಾಬಾದ್ ಶಾಸಕ
ನಿದ್ರೆಗೆ ಜಾರಿದ ಸಂಸದರುಕೇಂದ್ರದಿಂದ ಸಂಪೂರ್ಣ ಕಡೆಗಣಿಸಲ್ಪಟ್ಟಿರುವ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರು ನಿದ್ರೆಗೆ ಜಾರಿದ್ದಾರೆ. ಸಂವಿಧಾನದ 371(ಜೆ) ಪ್ರಕಾರ ವಿದರ್ಭ ಸೇರಿ ಬೇರೆ ಬೇರೆ ಪ್ರದೇಶಗಳಿಗೆ ಕೇಂದ್ರದಿಂದ ದೊಡ್ಡ ಪ್ರಮಾಣದ ಅನುದಾನ ಹರಿದುಹೋಗುತ್ತಿದೆ. ಅನೇಕ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಿಂದುಳಿದ ಪ್ರದೇಶವನ್ನು ಎಲ್ಲ ದೃಷ್ಟಿಯಿಂದ ಮೇಲಕ್ಕೇತ್ತುವ ಪ್ರಯತ್ನ ನಿರಂತರ ನಡೆದಿವೆ. ಆದರೆ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಇದ್ಯಾವುದೂ ಸಂಬಂಧ ಇಲ್ಲದಂತಿದೆ. ಸಂಸದರು ಧ್ವನಿ ಎತ್ತುತ್ತಿಲ್ಲ. ಪ್ರಧಾನಿ, ಗೃಹ ಸಚಿವರೆದುರು ಕುಳಿತು ಯೋಜನೆ, ಅನುದಾನ ತರುವ ಪ್ರಯತ್ನ ನಡೆಸುತ್ತಿಲ್ಲ. ಸಂಸತ್ತಿನಲ್ಲಿ ಪ್ರಶ್ನೆ ಎತ್ತುವ ಎದೆಗಾರಿಕೆಯೂ ತೋರಿಸುತ್ತಿಲ್ಲ. ಇನ್ನೂ ಕೆಲ ಜನಪ್ರತಿನಿಧಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡುವ ಮೂಲಕ ಮಾಧ್ಯಮಗಳ ಹೀರೋ ಎನಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
