ಅಲ್ಲಮಪ್ರಭು ಕಲ್ಯಾಣವೆಂಬ ಪಟ್ಟಣಕ್ಕೆ ಬಂದುದು ಸರಿಯಷ್ಟೆ. ಕಲ್ಯಾಣವು ಬಸವಣ್ಣನ ಮೂಲಕ ‘ಅವಿಮುಕ್ತಕ್ಷೇತ್ರ’ ಎನಿಸಿತ್ತು. ವಚನಗಳಲ್ಲಿ ಕಲ್ಯಾಣದ ವರ್ಣನೆ ಅಲ್ಲಲ್ಲಿ ಬರುವುದುಂಟು. ಮೊದಲ ಶೂನ್ಯ ಸಂಪಾದನಕಾರ ಶಿವಗಣಪ್ರಸಾದಿ ಮಹಾದೇವಯ್ಯನು ಕಲ್ಯಾಣವನ್ನು ಕುರಿತು ವರ್ಣಿಸಿರುವ ವಿವರಗಳನ್ನು ಗಮನಿಸುವುದು ಅವಶ್ಯ. ಅಲ್ಲಿ ಐತಿಹಾಸಿಕ ವಿವರಗಳೂ ಇರುವಂತೆ; ಸಾಂಕೇತಿಕ ಸಂಗತಿಗಳ ವಿವರಗಳೂ ಇವೆ. ಕಲ್ಯಾಣ ಪಟ್ಟಣದ ದ್ವಾರವಟ್ಟದ ಮುಂದೆ ಚೆನ್ನಬಸವರಾಜ ದೇವರು ಬರೆಸಿ ಹಾಕಿದ ಶಾಸನ ಅಲ್ಲಮಪ್ರಭುಗಳ ಕಣ್ಣಿಗೆ ಬೀಳುತ್ತದೆ. ಆ ಶಾಸನವು ಕಲ್ಯಾಣಪುರದ ಮಹಾತ್ಮೆಯನ್ನು ಹೇಳುತ್ತಿರುತ್ತದೆ. ಪ್ರಭುದೇವರು ಆ ಶಾಸನವನ್ನು ಓದುತ್ತಾರೆ. ಈ ಶಾಸನದಲ್ಲಿರುವ ಎಲ್ಲಾ ವಿವರಗಳನ್ನು ಶಿವಗಣಗಳು ಕೇಳಿ ಕೃತಾರ್ಥರಾಗಬೇಕೆಂದೂ ಮರ್ತ್ಯಲೋಕದ ಮಹಾಗಣಗಳು ಕೇಳಿ ಕೃತಾರ್ಥರಾಗಬೇಕೆಂದೂ ರುದ್ರಲೋಕ ಮತ್ತು ನಾಗಲೋಕದ ಗಣಂಗಳು ಕೇಳಿ ಕೃತಾರ್ಥರಾಗಬೇಕೆಂದೂ ಅಲ್ಲಮಪ್ರಭುಗಳು ಅಪ್ಪಣೆ ಕೊಡಿಸುತ್ತಾರೆ.
ರುದ್ರಲೋಕ ಮತ್ತು ಮರ್ತ್ಯಲೋಕ ಹದಿನಾಲ್ಕು ಭುವನಕ್ಕೆ ಕಳಶಪ್ರಾಯವಾಗಿವೆ. ಆ ಎರಡು ಪುರಗಳು ಕಲ್ಯಾಣವೆಂಬ ಪುರವಾಗಿಯೇ ಅವತರಿಸಿದೆ. ಇಂಥ ಕಲ್ಯಾಣಪುರದಲ್ಲಿ ಸಾತ್ವಿಕರು, ನಿತ್ಯರು, ನಿಜೈಕ್ಯರು, ಮಹಾಜ್ಞಾನಿಗಳು, ಪರಮಶಿವಯೋಗಿಗಳು, ಶಿವಾನುಭವ ಸಂಪನ್ನರು, ಶಿವಪ್ರಸಾದ ಪಾದೋದಕ ಸಂಬಂಧಿಗಳು, ಶಿವಾಚಾರವೇದ್ಯರು, ಶಿವಾಗಮಸಾಧ್ಯರು, ಶಿವಸಮಯಪಕ್ಷರು ಅಲ್ಲದೆ ಬೇರಾರೂ ಅಲ್ಲಿಲ್ಲ. ಪಾಪಿಗಳಾಗಲಿ ಕೋಪಿಗಳಾಗಲಿ ಅಲ್ಲಿಲ್ಲ. ಅಸತ್ಯರು- ಅನಾಚಾರಿಗಳಿಗೆ ಕಲ್ಯಾಣಕ್ಕೆ ಪ್ರವೇಶವೇ ಇಲ್ಲ. ಅಂಥವರು ಒಂದು ಪಕ್ಷ ಅಲ್ಲಿಗೆ ಹೋದರೆ ಕತ್ತಿಯ ಬಾಯಿಗೆ ಹೊಕ್ಕಂತೆಯೇ ಸರಿ!
ಕಲ್ಯಾಣಪುರದ ಒಂದೊಂದು ವಿವರಗಳನ್ನು ಸಂಖ್ಯೆಯ ಮೂಲಕವೇ ಇಲ್ಲಿ ಹೇಳಲಾಗುತ್ತಿದೆ. ಇವು ನಿಜಾತ್ಮಕ ಸಂಖ್ಯೆಗಳೆಂದು ನಾವು ಭಾವಿಸಬೇಕಿಲ್ಲ. ‘ಸಾಂಖ್ಯಯೋಗ’ದಲ್ಲಿ ಪ್ರತಿಯೊಂದು ತಾತ್ವಿಕಾಂಶವನ್ನು ಸಂಖ್ಯೆಯ ಮೂಲಕವೇ ವಿವರಿಸಲಾಗಿದೆ. ಪ್ರಕೃತಿಯ ರಹಸ್ಯವನ್ನು ತಿಳಿಯಲು ‘ಸಂಖ್ಯೆ’ಯನ್ನು ಒಂದು ಮಾನದಂಡವಾಗಿ ತಿಳಿಯುವ ಯತ್ನ ಮಾಡಲಾಗಿದೆ. ಗೀತೆಯಲ್ಲಿ ‘ಸಂಖ್ಯಾವಾನ್ ಪ್ರಭುಃ’ ಎಂಬ ಗೂಢತತ್ತ್ವದ ಮಾತೊಂದು ಬರುತ್ತದೆ. ಆ ಮಾತಿನ ಜಾಡನ್ನು ಹಿಡಿದು ‘ಕಲ್ಯಾಣಪುರ’ದ ಸಂಖ್ಯೆಯ ಸಾಂಕೇತಿಕ ವಿವರಗಳನ್ನು ಗಮನಿಸಬಹುದಾಗಿದೆ. ‘ಕಲ್ಯಾಣ’ ಎಂಬ ಹೆಸರಿನಲ್ಲಿ ಅಂಗ-ಲಿಂಗ, ಶಿವ-ಶಕ್ತಿ, ದೈವ-ಭಕ್ತ-ಇವುಗಳ ಸಂಯುಕ್ತ ಸಮೀಕರಣವುಂಟು. ಹೀಗಾಗಿ, ‘ಕಲ್ಯಾಣಪುರ’ವನ್ನು ಸಾಂಕೇತಿಕ ನಾಮವಾಗಿಯೇ ಕಾಣಬೇಕಾಗುತ್ತದೆ.
ಆ ಮಹಾಕಲ್ಯಾಣದ ವಿಸ್ತೀರ್ಣವಂತೂ ಅಗಮ್ಯ ಮತ್ತು ಅಗೋಚರ. ಇದು ಶರಣರಲ್ಲದವರಿಗೆ ಕಾಣಲಾರದು. ಆ ಕಲ್ಯಾಣಪಟ್ಟಣವು ಹನ್ನೆರಡು ಯೋಜನ ಪ್ರಮಾಣದಗಲವಿದ್ದು, ಮುನ್ನೂರ ಅರುವತ್ತೈದು ಬಾಗಿಲವಾಡಗಳುಂಟು. ಆ ಬಾಗಿಲುಗಳಿಗೆ ಮುನ್ನೂರ ಅರುವತ್ತೈದು ಕದಗಳಿವೆ. ಅಲ್ಲಿ ಇನ್ನೂರ ಇಪ್ಪತ್ತೈದು ಕಲ್ಲುಗೆಲಸದ ದ್ವಾರವಟ್ಟಕ್ಕೆ ನಾನೂರ ವಜ್ರಧಾರೆಯ ಅರುವತ್ತು ಸುವರ್ಣದಿಂದ ಮಾಡಿರುವ ಕದಗಳುಂಟು. ಅವಕ್ಕೆ ನೂರಹದಿನೈದು ಚೋರದಂಡಿಗಳು ಮತ್ತು ಮೊಳೆಯಿಂದ ಮಾಡಿರುವ ಕದಗಳಿವೆ. ಆ ಕಲ್ಯಾಣ ಪಟ್ಟಣಕ್ಕೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣದ ಕೋಟೆಯು ಸುತ್ತುವರಿದಿದೆ. ಆ ಕೋಟೆಯೊಳಗೆ ನಿಯೋಗಿಗಳ, ಮಾಂಡಳಿಕರ, ಸಾಮಂತರ, ರಾಯರಾವುತರ ಲಕ್ಷ ಲಕ್ಷ ಮನೆಗಳುಂಟು. ಹನ್ನೆರಡು ಯೋಜನ ವಿಸ್ತೀರ್ಣದ ಸೂರ್ಯವೀಧಿ ನೂರಿಪ್ಪತ್ತು, ಸೋಮವೀಧಿ ನೂರಾ ಅರುವತ್ತು ಇನ್ನು ಒಳಕೇರಿ- ಹೊರಕೇರಿಗಳಿಗಂತೂ ಲೆಕ್ಕವಿಲ್ಲ. ಈ ವಿವರವನ್ನು ಸಂಖ್ಯಾಶಾಸ್ತ್ರದ ನೆಲೆಯಿಂದ ಸ್ವಲ್ಪ ಬಿಡಿಸಿಕೊಳ್ಳೋಣ.
ಬಾಗಿಲವಾಡಗಳು ಮುನ್ನೂರ ಅರುವತ್ತೈದು ಎಂದು ಉಲ್ಲೇಖಿಸಿದ್ದಾನೆ. ಈ ಸಂಖ್ಯೆಯನ್ನು ಒಟ್ಟು ಕೂಡಿಸಿದಾಗ ಹದಿನಾಲ್ಕರ ಸಂಖ್ಯೆ ಬರುತ್ತದೆ. ಇದು ಚತುರ್ದಶ ಭುವನಗಳಿಗೆ ಸಾಂಕೇತಿಕ ನಾಮ. ಇನ್ನು ದ್ವಾರವಟ್ಟದ ಕಲ್ಲುಗೆಲಸ ಇನ್ನೂರ ಇಪ್ಪತ್ತೈದು ಮತ್ತು ನಾನೂರ ಅರುವತ್ತು ಕದಗಳೆಂದು ಹೇಳಲಾಗಿದೆ. ಇವೆರಡನ್ನು ಬೇರೆ ಬೇರೆಯಾಗಿ ಕೂಡಿಸಿದಾಗ ಒಂಬತ್ತು ಮತ್ತು ಹತ್ತು ಬರುತ್ತದೆ. ಒಂಬತ್ತು ದೇಹದ ನವದ್ವಾರಗಳಿಗೆ ಸಂಕೇತ. ಹಾಗೂ ಹತ್ತು ಇಂದ್ರಿಯ ವಿಜಯದ ಸಂಕೇತ. ನೂರಹದಿನೈದು ಚೋರಗುಂಡಿಗಳುಂಟಷ್ಟೆ. ಇವುಗಳನ್ನು ಕೂಡಿಸಿದಾಗ ಏಳರ ಸಂಖ್ಯೆ ಬರುತ್ತದೆ! ಇದು ಬೆಸಸಂಖ್ಯೆಯೂ ಹೌದು. ಸಪ್ತಪದಾರ್ಥಗಳ ಸಂಖ್ಯೆ ಹಾಗೂ ಏಳುವಾರಗಳ ದೈವಿಕದ ಸಂಖ್ಯೆಯೂ ಹೌದು. ಇನ್ನು ಕಲ್ಯಾಣದ ಸೂರ್ಯಬೀದಿ ಮತ್ತು ಚಂದ್ರಬೀದಿಗಳು ಕ್ರಮವಾಗಿ ಕೂಡಿಸಿದಾಗ ಮೂರು ಮತ್ತು ಏಳರ ಸಂಖ್ಯೆ ಬರುತ್ತದೆ! ಇಲ್ಲಿರುವ ಮೂರು ಬೆಸಸಂಖ್ಯೆ ಹಾಗೂ ತ್ರೈಗುಣ್ಯ, ತ್ರಿವೇದ, ತ್ರಿಮೂರ್ತಿ ಇವು ಸಂಖ್ಯಾಶಾಸ್ತ್ರದ ತತ್ತ್ವವನ್ನು ಸಂಕೇತಿಸುತ್ತವೆ.


ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಕೇಂದ್ರ ಸಚಿವರಿಗೆ ಬೆದರಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
