ಬೆಂಗಳೂರು:ಆರ್ಥಿಕ ವಹಿವಾಟಿನಲ್ಲಿ ಏರುಪೇರಿನಿಂದಾಗಿ ಕೋ-ಆಪರೇಟಿವ್ ಸೊಸೈಟಿಗಳು ಸಂಕಷ್ಟಕ್ಕೆ ಸಿಲುಕುವುದು, ಪರಿಣಾಮವಾಗಿ ಅದರ ಮುಖ್ಯಸ್ಥರು-ಅಧಿಕಾರಿಗಳೂ ತೊಂದರೆಗೀಡಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಅಂಥದ್ದೇ ಒಂದು ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಾಮಧೇನು ಕ್ರೆಡಿಕ್ ಕೋ-ಆಪರೇಟಿವ್​ ಸೊಸೈಟಿಯ ಮುಖ್ಯಸ್ಥ ರಾಮಕೃಷ್ಣ (55) ಆತ್ಮಹತ್ಯೆ ಮಾಡಿಕೊಂಡವರು. ಇವರು ಸೊಸೈಟಿಯ ಕಚೇರಿಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಸೆ. 26ರಂದು ಈ ಆತ್ಮಹತ್ಯೆ ನಡೆದಿದ್ದು, ಸಾವಿಗೀಡಾದ ಸ್ಥಳದಲ್ಲಿ ಡೆತ್​ನೋಟ್ ಕೂಡ ಪತ್ತೆಯಾಗಿದೆ.
60 ಲಕ್ಷ ರೂ. ನಷ್ಟದಲ್ಲಿರುವುದನ್ನು ಡೆತ್​​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಸೊಸೈಟಿಯಿಂದ‌ ಸಾಕಷ್ಟು ಜನರಿಗೆ ಸಾಲ ನೀಡಿದ್ದರು. ಆದರೆ ಕೆಲವರು ಸೊಸೈಟಿಗೆ ಸರಿಯಾಗಿ ಸಾಲ ಮರು ಪಾವತಿ‌ ಮಾಡಿಲ್ಲ. ಹೀಗಾಗಿ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್​​ನೋಟ್​ನಿಂದ ತಿಳಿದುಬಂದಿದೆ.
ಇದನ್ನೂ ಓದಿ:ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಶರಣಾದ ಗುರುರಾಘವೇಂದ್ರ ಸಹಕಾರ ಬ್ಯಾಂಕ್​​ನ ಮಾಜಿ ಸಿಇಒ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಮೂವರು ವ್ಯಕ್ತಿಗಳನ್ನು ಬೊಮ್ಮನಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದವರ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ. ಹಗರಣ ಆರೋಪ ಎದುರಿಸುತ್ತಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್​ ಮಾಜಿ ಸಿಇಒ ವಾಸುದೇವ ಮಯ್ಯ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿದ್ದೇಕೆ?: ಗೃಹ ಸಚಿವರು ನೀಡಿದ ಸ್ಪಷ್ಟನೆ ಇಲ್ಲಿದೆ..

ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
