
ಬೆಂಗಳೂರು:ಬೆಂಗಳೂರು ತುಳು ಕೂಟಕ್ಕೆ 50 ವರ್ಷ ತುಂಬಿದ ಅಂಗವಾಗಿ ಬೆಂಗಳೂರಿನಲ್ಲಿ ಬರುವ ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಅದ್ಧೂರಿಯಾಗಿ ‘ಕಂಬಳ ಕ್ರೀಡೆ’ ನಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳು ಶುರುವಾಗಿದ್ದು, ಕಂಬಳವನ್ನು ಆಯೋಜಿಸಲು ರೂಪುರೇಷ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲು ಒಪ್ಪಿಗೆ ಸಿಕ್ಕಿದೆ. ಅಲ್ಲಿ ಕಂಬಳ ಕೆರೆಯನ್ನು ನಿರ್ಮಿಸಿ ಪಕ್ಕದ ಕೆರೆಯಿಂದ ನೀರು ಹಾಯಿಸಬೇಕಾಗಿದೆ. ಬೆಂಗಳೂರಿನ ನೀರು ಕಂಬಳಕ್ಕೆ ಸೂಕ್ತವೇ ಅಥವಾ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ಹೀಗಾಗಿ, ಬೆಂಗಳೂರು ಮತ್ತು ಪುಣೆ ಪ್ರಯೋಗಾಲಯಕ್ಕೆ ಈ ನೀರನ್ನು ಕಳುಹಿಸಲಾಗಿದೆ. ‘ಕಂಬಳದಲ್ಲಿ ಈ ನೀರನ್ನು ಬಳಸಬಹುದು. ಯಾವುದೇ ಸಮಸ್ಯೆಯಿಲ್ಲ’ ಎಂದು ಬೆಂಗಳೂರಿನ ಪ್ರಯೋಗಾಲಯ ನಮಗೆ ವರದಿ ನೀಡಿದೆ. ಅಲ್ಲದೆ, ಮುಂದಿನ ಎರಡು ದಿನಗಳಲ್ಲಿ ಪುಣೆ ಪ್ರಯೋಗಾಲಯದಲ್ಲಿ ನಡೆದಿರುವ ನೀರಿನ ವರದಿ ಬರಲಿದೆ ಎಂದು ಬೆಂಗಳೂರು ತುಳು ಕೂಟದ ಅಧ್ಯಕ್ಷ ಸುಂದರ್‌ರಾಜ್ ರೈ ವಿಜಯವಾಣಿಗೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮತ್ತೆ ಮುಂದುವರಿಯಲಿದೆ ವಿಶ್ವ ಹಿಂದೂ ಪರಿಷತ್ ಯಾತ್ರೆ; ಮಹಾ ಪಂಚಾಯತ್​ನಲ್ಲಿ ನಿರ್ಧಾರ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಈ ಕ್ರೀಡೆ ನಡೆಯಲಿದೆ. ಗ್ರಾಮೀಣ ಕ್ರೀಡೆಯನ್ನು ಬೆಂಗಳೂರು ಸೇರಿ ದೇಶ-ವಿದೇಶಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಹಿಂದಿ ಚಿತ್ರನಟಿಯರಾದ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ. ರಾಜಕೀಯ ನಾಯಕರು ಸೇರಿ ಎಲ್ಲರನ್ನೂ ಆಹ್ವಾನಿಸಲಾಗುತ್ತದೆ. ಕಂಬಳ ಕ್ರೀಡೆ ಸುಗಮವಾಗಿ ನಡೆಯಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಂದಾಜು 100ಕ್ಕೂ ಅಧಿಕ ಜೋಡಿ ಕೋಣಗಳು ಭಾಗಿಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಮಾತ್ರ ಈ ಕ್ರೀಡೆ ತುಂಬ ಪ್ರಸಿದ್ಧಿಯಾಗಿದೆ. ಇದನ್ನು ವಿಶ್ವಮಟ್ಟದಲ್ಲಿ ವಿಸ್ತರಿಸಲು ನಿರ್ಧರಿಸಲಾಗಿದೆ. ಕಂಬಳದ ಕೋಣಗಳನ್ನು ರೈಲಿನಲ್ಲಿ ಬೆಂಗಳೂರಿಗೆ ಕರೆ ತರುವ ಬಗ್ಗೆ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಇದಕ್ಕೆ ಅವರು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ, ಎಲ್ಲ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ದಿನಾಂಕ ನಿಗದಪಡಿಸಿ ಅದ್ದೂರಿಯಾಗಿ ಕಂಬಳ ಕ್ರೀಡೆ ನಡೆಯಲಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
