ಮಂಗಳೂರು:ಕಂಬಳದಲ್ಲಿ ಅಬ್ಬರದ ಓಟದ ಮೂಲಕ ಖ್ಯಾತ ಓಟಗಾರ ಉಸೇನ್ ಬೋಲ್ಟ್‌ನೂ ಮೀರಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿರುವ ಕಂಬಳ ಜಾಕಿ ಶ್ರೀನಿವಾಸ್ ಗೌಡ ಅವರು ಕರಾವಳಿ ಭಾಗದ ಆಭರಣದ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಡೆಲ್​ ಕೂಡ ಆಗಿದ್ದಾರೆ.
ಅಭರಣ ಜ್ಯುವೆಲರ್ಸ್ 30 ವರ್ಷದ ಶ್ರೀನಿವಾಸ ಗೌಡ ಮತ್ತು ಎಮ್ಮೆ ಅಪ್ಪು ಅವರನ್ನು ತಮ್ಮ ಜಾಹೀರಾತುಗಳಿಗೆ ಮಾಡೆಲ್​ ಆಗಿಸಿದ್ದಾರೆ. ಕುತೂಹಲಕರ ವಿಷ ಏನೆಂದರೆ, ಜಾಹೀರಾತು ಹೋರ್ಡಿಂಗ್ ಇತ್ತೀಚೆಗೆ ಬಿಡುಗಡೆಯಾಗುವ ತನಕವೂ, ಶ್ರೀನಿವಾಸ ಗೌಡರಿಗೆ ತಾವೆ ಈಗ ಮಾಡೆಲ್​ ಎ್ನುವ ವಿಚಾರ ತಿಳಿದಿರಲಿಲ್ಲ. ಇದು ಮತ್ತೊಂದು ಫೋಟೋ ಶೂಟ್ ಎಂದು ಅವರು ನಿಷ್ಕಪಟವಾಗಿ ನಂಬಿದ್ದರು.
ಸುಮಾರು ಎರಡು ವರ್ಷಗಳ ಹಿಂದೆ, ಗೌಡ ಅವರನ್ನು ಉಸೇನ್ ಬೋಲ್ಟ್‌ಗೆ ಹೋಲಿಸಿದ್ದ ನಂತರ ಅವರ ಮತ್ತು ಎಮ್ಮೆ ಓಟದ ವೀಡಿಯೊ ವೈರಲ್ ಆದ ನಂತರ ದೇಶಾದ್ಯಂತ ಸಂಚಲನವಾಗಿತ್ತು. ಕಂಬಳದ ಜಾಕಿಯಾಗಿದ್ದ ಶ್ರೀನಿವಾಸ್​ ಗೌಡ ಈಗ ಪೋಸ್ಟರ್ ಬಾಯ್ ಆಗಿ ಬದಲಾಗಿದ್ದಾರೆ.
“ನನಗೆ ತುಂಬಾ ಸಂತೋಷವಾಗಿದೆ. ಆಭರಣ ಜ್ಯುವೆಲ್ಲರ್ಸ್‌ನ ಜಾಹೀರಾತು ಹೋರ್ಡಿಂಗ್ ಇಷ್ಟು ಜನಪ್ರಿಯವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಆರು ತಿಂಗಳ ಹಿಂದೆ ಫೋಟೋಶೂಟ್ ನಡೆದಿತ್ತು. ಅಪ್ಪು ಜೊತೆ ಪೋಸ್ ಕೊಡಲು ಕೇಳಿದ್ದರು. ಜಾಕಿಯೊಬ್ಬರಿಗೆ ಈ ಅವಕಾಶ ಸಿಕ್ಕಿದ್ದು ಬಹುಶಃ ಇದೇ ಮೊದಲು. ಜನಪ್ರಿಯ ಬ್ರ್ಯಾಂಡ್ ಕಂಬಳದ ಜೊತೆಗೆ ತನ್ನ ಆಭರಣಗಳನ್ನು ಜನಪ್ರಿಯಗೊಳಿಸಲು ನಿರ್ಧರಿಸಿದೆ ಎಂದು ನನಗೆ ಸಂತೋಷವಾಗಿದೆ.‘ಎಮ್ಮೆ ಮಾಲೀಕರು ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ. ‘ಈ ಋತುವಿನಲ್ಲಿ ನಡೆದ ಐದು ಕಂಬಳಗಳಲ್ಲಿ ಶ್ರೀನಿವಾಸ್​ ಗೌಡ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದು ವೀರ ಕಂಬಳ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಗೌಡರ ಜೊತೆ ಅಪ್ಪು ಕೂಡ ಸ್ಟಾರ್ ಆಗಿರುವುದು ಖುಷಿ ತಂದಿದೆ’ ಎಂದಿದ್ದಾರೆ.
ಈ ಬೆಳವಣಿಗೆಯು ಜನರ ಕ್ರೀಡೆಯ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಮ ಲಕ್ಷ್ಮಣ ಜೋಡುಕೆರೆ ಕಂಬಳ ಸಂಘಟಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. “ಹೆಚ್ಚು ಕಂಪನಿಗಳು ಈ ಮಾದರಿಯನ್ನು ಅನುಸರಿಸಿದರೆ, ಕಂಬಳ ಮತ್ತು ಕೋಣ ಓಡಿಸುವ ಜಾಕಿಗಳಿಗೆ ದೊಡ್ಡ ಉತ್ತೇಜನವನ್ನು ನೀಡಿದಂತೆ ಆಗುತ್ತದೆ. ಅದರ ಜೊತೆಗೆ ಕಂಬಳ ಸಂಘಟಿಸಲು ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಬೇಕು’ ಎಂದರು.
ಅಭರಣ ಜ್ಯುವೆಲ್ಲರ್ಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ದಿನೇಶ್ ಶೆಟ್ಟಿಗಾರ್ ‘ಈ ಕಲ್ಪನೆಯನ್ನು ಬ್ರ್ಯಾಂಡ್‌ನ ಮಾಲೀಕರಾದ ಸಂಧ್ಯಾ ಸುಭಾಷ್ ಕಾಮತ್ ಮತ್ತು ಅವರ ಮಗ ಸಾತ್ವಿಕ್ ಕಾಮತ್ ಪ್ಲಾನ್​ ಮಾಡಿದ್ದಾರೆ. ಗೌಡರು ಪ್ರಸಿದ್ಧ ಕಂಬಳ ಜಾಕಿಯಾಗಿರುವುದರಿಂದ ಮತ್ತು ಈ ಕ್ರೀಡೆ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾರಣ, ನಾವು ಸ್ಥಳೀಯ ಫ್ಲೇವರ್​ನೊಂದಿಗೆ ಹೋಗಲು ನಿರ್ಧರಿಸಿದ್ದೇವೆ. ನಾವು ಸ್ಥಳೀಯ ಸಾಧಕರಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಇದರ ಜೊತೆಗೆ ಪುರುಷರು ಆಯ್ಕೆಮಾಡಬಹುದಾದ ವಿವಿಧ ಆಭರಣಗಳನ್ನು ಹೈಲೈಟ್ ಮಾಡಿದ್ದೇವೆ, ”ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
