ಬೆಂಗಳೂರು: ನಾನು ಇಷ್ಟೊಂದು ವೇಗವಾಗಿ ಓಡುತ್ತೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಕಂಬಳ ಓಟದ ಶ್ರೀನಿವಾಸಗೌಡ ತಮ್ಮ ಸಾಧನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಮಾಧ್ಯಮದವರು ಹಾಗೂ ಜನರು ಈಗ ನನ್ನನ್ನು ಕಂಬಳದ ಉಸೇನ್​ ಬೋಲ್ಟ್​ ಎಂದೆ ಕರೆಯುತ್ತಿದ್ದಾರೆ. ಬೋಲ್ಟ್​ ಹೆಸರು ಕೇಳಿದ್ದೇನೆ. ಆದರೆ ಅವರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಯಜಮಾನರು ಕೋಣವನ್ನು ಚೆನ್ನಾಗಿ ಸಾಕಿದ್ದರಿಂದ ನಾನು ವೇಗವಾಗಿ ಓಡಲು ಸಾಧ್ಯವಾಯಿತು ಎಂದು ತಮ್ಮ ಓಟದ ರಹಸ್ಯವನ್ನು ಅವರು ತಿಳಿಸಿದರು.
ನನ್ನ ಸಾಧನೆ ನೋಡಿ ಸರ್ಕಾರ ಗುರುತಿಸಿರುವುದು ಹಾಗೂ ಕರಾವಳಿ ಸಂಸ್ಕೃತಿಯನ್ನು ಇಡೀ ದೇಶ ಕೊಂಡಾಡುವಂತೆ ಮಾಡಿರುವುದು ನನಗೆ ಹೆಮ್ಮೆ ಎನಿಸಿದೆ. ಮಾರ್ಚ್ 10ರವರೆಗೆ ಕಂಬಳ ಓಟ ಇದೆ. ನಂತರ ನಾನು ಒಲಂಪಿಕ್​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ತರಬೇತಿ ಪಡೆಯುತ್ತೇನೆ. 12 ಕಂಬಳ ಓಟದಲ್ಲಿ ಇದುವರೆಗೆ 35 ಪದಕ ಗೆದಿದ್ದೇನೆ ಎಂದರು.
ಶ್ರೀನಿವಾಸಗೌಡರಿಗೆ ತರಬೇತಿ ಅವಶ್ಯಕ: ಕಂಬಳ ಓಟಗಾರ ಶ್ರೀನಿವಾಸಗೌಡ ಅವರ ಸಾಧನೆ ಗಮನಿಸಿದ್ದೇನೆ. ಅವರು ಒಲಂಪಿಕ್ಸ್​ನಲ್ಲಿ ಸ್ಪರ್ಧಿಸಬೇಕಾದರೆ ತರಬೇತಿ ಅಗತ್ಯ. ತರಬೇತಿ ನೀಡಲು ಕೇಂದ್ರ ಸರ್ಕಾರ ಸಿದ್ಧ ಇದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಅಜಯ್​ ಕುಮಾರ್​ ಬೆಹಲ್​ ಹೇಳಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
