
ರಾಮನಗರ: ರಾಜ್ಯದಲ್ಲಿ ನಿಚ್ಜಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕನಕಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಲಿದೆ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 141 ಸ್ಥಾನಗಳಲ್ಲಿ ಜಯಭೇರಿ ಭಾರಿಸಲಿದೆ ಎಂದರು. ರಾಜ್ಯದಲ್ಲಿ ಆಡಳಿತ ವಿರೋಧಿ ಸರ್ಕಾರ ಇತ್ತು, ಬಿಜೆಪಿಯವರ ಗಿಮಿಕ್ಇ ಲ್ಲಿ ನಡೆಯುವುದಿಲ್ಲ. ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಅಭಿವೃದ್ಧಿ ಪರವಾದ ಸರ್ಕಾರ ನಡೆಯಲಿದೆ. ರಾಜ್ಯದಲ್ಲಿ ಮೇ.13 ರಿಂದ ಕಾಂಗ್ರೆಸ್ ಆಡಳಿತ ಖಚಿತ ಎಂದರು.
ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದರೆ, ಆಪರೇಷನ್ ಹಸ್ತ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗವೇ ದೊಡ್ಡದು ನಮಗೆ ಜನರು ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ ಎಂಬ ವಿಶ್ವಾಸ ಇದೆ ಎಂದಷ್ಟೇ ಉತ್ತರಿಸಿದರು.
ಮತದಾರರಿಗೆ ಕೃತಜ್ಞತೆ:ಶಾಸಕ ಡಿ.ಕೆ.ಶಿವಕುಮಾರ್ ಕನಕಪುರ ತಾಲೂಕಿನ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಕ್ಷೇತ್ರದ ಜನತೆ ನೀಡಿರುವ ಶಕ್ತಿ ಇದು ನನಗಲ್ಲ ರಾಜ್ಯಕ್ಕೆ ನೀಡಿದಂತಹ ಶಕ್ತಿಯಾಗಿದೆ. ಇಲ್ಲಿ ಶಿವಕುಮಾರ್ ಅಭ್ಯರ್ಥಿ ನೆಪಕಷ್ಟೆ ಆದರೆ ಪ್ರತಿಯೊಂದು ಮನೆಯ ಮತದಾರನು ತಾನೇ ಅಭ್ಯರ್ಥಿಯಂತೆ ಕೆಲಸ ನಿರ್ವಹಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವಲ್ಲದೆ ಬಿಜೆಪಿ, ಜೆಡಿಎಸ್ ನ ಕಾರ್ಯಕರ್ತರು ನನಗೆ ನನಗೆ ಆರ್ಶೀವಾದ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕನಕಪುರ ರಾಜ್ಯಕ್ಕೆ ಮಾದರಿಯಲ್ಲದೆ ರಾಷ್ಟ್ರಕ್ಕೂ ಮಾದರಿಯಾಗಿದೆ. ಮುಂದೆ ಇಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸಗುಮವಾಗಿ ಆಗಲಿದೆ ಎಂದರು.ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಚಂದ್ರಶೇಖರ್, ತಿಮ್ಮಪ್ಪ, ಎಂ.ಡಿ.ಅಮ್ಜದ್, ಹರೀಷ್, ಪರಮೇಶ್ ವಾಸುಹೊಟೆಲ್ ಮಾಲೀಕರು ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 16 =
Remember me
