ಬೆಳಗಾವಿ: ಕರೊನಾ ವೈರಸ್‌ ಸೋಂಕಿನಿಂದ ಸಾರ್ವಜನಿಕರನ್ನು ಕಾಪಾಡುವ ನಿಟ್ಟಿನಲ್ಲಿ ಜೀವವನ್ನೇ ಮುಡುಪಾಗಿಟ್ಟು, ಮನೆಗೂ ಹೋಗದೆ, ತಮ್ಮ ಕುಟುಂಬದ ಜತೆಯೂ ಬೆರೆಯದೆ ಹಗಲಿರುಳು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಅದೆಷ್ಟೋ ಮಂದಿ. ಅವರಲ್ಲಿ ಒಬ್ಬರು ಬೆಳಗಾವಿಯ ಹಲಗಾ ಗ್ರಾಮದ ಸುಗಂಧಾ ಕೊರೆಪ್ಪಗೋಳ.
ನರ್ಸ್‌ ಆಗಿರುವ ಸುಗಂಧಾ ಕೊರೆಪ್ಪಗೋಳ ಅವರಿಗೆ ಮೂರು ವರ್ಷ ಪುಟ್ಟ ಮಗುವಿದೆ. ಕರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿರುವ ಇವರು ಕಳೆದ 15 ದಿನಗಳಿಂದ ಮನೆಗೆ ಹೋಗಿಲ್ಲ. ಅಮ್ಮನನ್ನು ಬಿಟ್ಟೇ ಗೊತ್ತಿಲ್ಲದ ಈ ಕಂದಮ್ಮನಿಗೆ ದಿನವೂ ಅಮ್ಮನದ್ದೇ ನೆನಪು. ಆದರೆ ಸದಾ ಸೋಂಕಿತರ ನಡುವೆಯೇ ಇರುವ ವೈದ್ಯರಾರೂ ಮನೆಗೆ ಹೋಗದೇ ಕ್ವಾರಂಟೈನ್‌ಗೆ ಒಳಗಾಗಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಖಾಸಗಿ ಹೋಟೆಲ್‌ ಒಂದರಲ್ಲಿ ಸುಗಂಧಾ ಅವರೂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅವರಿಗೆ ಮಗುವನ್ನು ನೋಡುವ ಆಸೆ ಇದ್ದರೂ, ಮನೆಗೆ ಹೋಗುವಂತಿಲ್ಲ.
ಅಮ್ಮನನ್ನು ನೋಡಲೇಬೇಕೆಂದು ಹಠ ಮಾಡಿದಾಗ ಆಕೆಯ ತಂದೆ ಸುಗಂಧಾ ಅವರನ್ನು ಕ್ವಾರಂಟೈನ್ ಮಾಡಲಾಗಿದ್ದ ಹೋಟೆಲ್‌ಗೆ ಕರೆದುಕೊಂಡು ಹೋದರು. ದೂರದಲ್ಲಿ ನಿಲ್ಲಿಸಿಯೇ ತಾಯಿಯನ್ನು ತೋರಿಸಿದ್ದರು. ಎಷ್ಟೋ ದಿನಗಳಿಂದ ಅಮ್ಮನನ್ನೇ ನೋಡದಿದ್ದ ಈ ಪುಟಾಣಿ ಅಮ್ಮನನ್ನು ನೋಡುತ್ತಿದ್ದಂತೆಯೇ ಅವರ ಬಳಿ ಹೋಗಬೇಕೆಂದು ಹಠ ಹಿಡಿಯಿತು. ಆದರೆ ಸುಗಂಧಾ ಅವರು ಹತ್ತಿರ ಬರುವಂತಿರಲಿಲ್ಲ. ಮಗು ಅಳತೊಡಗಿತು. ಈ ದೃಶ್ಯ ಅಲ್ಲಿ ನೆರೆದಿದ್ದ ಎಲ್ಲರ ಕಣ್ಣುಗಳನ್ನು ತೇವವಾಗಿಸಿದವು.
ಈ ದೃಶ್ಯ ದಿಗ್ವಿಜಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಸುಗಂಧಾ ಅವರಿಗೆ ಫೋನ್‌ ಕರೆ ಮಾಡಿದ್ದಾರೆ. “ನಿಮ್ಮ ಜತೆ ನಾವಿದ್ದೇವೆ, ಸರ್ಕಾರ ಸದಾ ನಿಮ್ಮ ಬೆಂಬಲಕ್ಕಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಸೇವೆಗೆ ಸರ್ಕಾರ ಗೌರವಕೊಡುತ್ತದೆ’ ಎಂದು ಧೈರ್ಯ ತುಂಬಿದರು.
ಬೆಳಗಾವಿ ಜಿಲ್ಲೆಯಲ್ಲಿ ಏಳು ಮಂದಿ ಕರೊನಾ ಸೋಂಕು ಪೀಡಿತರಿದ್ದಾರೆ. 1044 ಜನರ ಮೇಲೆ ನಿಗಾ ವಹಿಸಲಾಗಿದೆ. ಇನ್ನೂ 33 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. 40ಕ್ಕೂ ಹೆಚ್ಚು ವೈದ್ಯರು, 50ಕ್ಕೂ ಅಧಿಕ ನರ್ಸ್ ಹಾಗೂ ಅನೇಕ ಸಹಾಯಕರು ಸೋಂಕಿತರಿಗಾಗಿ ಕೆಲಸ ಮಾಡುತ್ತಿದ್ದಾರೆ.
ಕರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾದ ವಿದ್ಯಾರ್ಥಿಗಳ ಪಡೆ: 5 ಸಾವಿರ ಜನರಿಂದ ಸ್ವಯಂ ನೋಂದಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
