ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ.ಜಾತಿ, ಪ.ಪಂಗಡ ಉಪಯೋಜನೆಯಡಿ ವಿಭಾಗಾವಾರು ಸಂಘ-ಸಂಸ್ಥೆಗಳ ಪಟ್ಟಿ ಅಂತಿಮಗೊಳಿಸಿ ಮೊದಲ ಕಂತಿನ ಧನಸಹಾಯ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ- ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ಶೇ.31 ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದ ಸಂಘ-ಸಂಸ್ಥೆಗಳಿಗೆ ಶೇ. 33 ಅನುದಾನ ಬಿಡುಗಡೆ ಮಾಡಲಾಗಿದೆ.
ಪರಿಶಿಷ್ಟ ಜಾತಿ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 230 ಸಂಘ-ಸಂಸ್ಥೆಗಳಿಗೆ ಜಿಲ್ಲಾ ಸಮಿತಿ ಶಿಫಾರಸು ಮಾಡಿದ 3.13 ಕೋಟಿಯಲ್ಲಿ 97.10 ಲಕ್ಷ ಮಂಜೂರು ಮಾಡಲಾಗಿದೆ. ಮೈಸೂರು ವಿಭಾಗದಡಿ 60 ಸಂಘ-ಸಂಸ್ಥೆಗಳಿಗೆ 1.35 ಕೋಟಿಯಲ್ಲಿ 41.85 ಲಕ್ಷ, ಕಲಬುರಗಿ ವಿಭಾಗದಡಿ 186 ಸಂಘ-ಸಂಸ್ಥೆಗಳಿಗೆ 3.35 ಕೋಟಿಯಲ್ಲಿ 1.03 ಕೋಟಿ, ಬೆಳಗಾವಿ ವಿಭಾಗದಡಿ 43 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 1.03 ಕೋಟಿಯಲ್ಲಿ 31.93 ಲಕ್ಷ ಮಂಜೂರು ಮಾಡಲಾಗಿದೆ.
ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 42 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 59.50 ಲಕ್ಷದಲ್ಲಿ 19.63 ಲಕ್ಷ, ಮೈಸೂರು ವಿಭಾಗದಡಿ 8 ಸಂಘಸಂಸ್ಥೆಗಳಿಗೆ 24.50 ಲಕ್ಷದಲ್ಲಿ 8.08 ಲಕ್ಷ, ಕಲಬುರಗಿ ವಿಭಾಗದಿಂದ 19 ಸಂಘ-ಸಂಸ್ಥೆಗಳಿಗೆ 43.50 ಲಕ್ಷದಲ್ಲಿ 14.35 ಲಕ್ಷ, ಬೆಳಗಾವಿ ವಿಭಾಗದಿಂದ 28 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 77.50 ಲಕ್ಷದಲ್ಲಿ 25.57 ಲಕ್ಷ ಮಂಜೂರು ಮಾಡಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − 8 =
Remember me
