ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಬಸವ ರಾಷ್ಟ್ರೀಯ ಪುರಸ್ಕಾರ’ಕ್ಕೆ ಮಹಾರಾಷ್ಟ್ರದ ಆನಂದ್ ತೆಲ್ತುಂಬಡೆ (2022-23) ಹಾಗೂ ಧಾರವಾಡದ ಡಾ.ಎನ್.ಜಿ. ಮಹದೇವಪ್ಪ (2023-24), ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ಗೆ ಧಾರವಾಡದ ಜಿನದತ್ತ ದೇಸಾಯಿ (2022-23) ಹಾಗೂ ಗುಜರಾತಿನ ಗಾಂಧಿ ಸೇವಾಶ್ರಮವನ್ನು (2023-24) ಆಯ್ಕೆ ಮಾಡಲಾಗಿದೆ.
‘ಟಿ. ಚೌಡಯ್ಯ ಪ್ರಶಸ್ತಿ’ಗೆ ಮುಂಬೈನ ಕೊಳಲುವಾದಕ ನಿತ್ಯಾನಂದ ಹಳದಿಪುರ (2022-23) ಹಾಗೂ ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು (2023-24), ‘ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ’ಗೆ ಧಾರವಾಡದ ಹಿಂದುಸ್ತಾನಿ ಗಾಯಕ ಪಂ. ಸೋಮನಾಥ್ ಮರಡೂರ (2022-23) ಮತ್ತು ಮೈಸೂರಿನ ಕರ್ನಾಟಕ ಸಂಗೀತ ಕಲಾವಿದೆ ಡಾ.ನಾಗಮಣಿ ಶ್ರೀನಾಥ್ (2023-24) ಭಾಜನರಾಗಿದ್ದಾರೆ.
ಪ್ರಶಸ್ತಿಗಳು ತಲಾ 10 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಲಕ ಒಳಗೊಂಡಿದ್ದು, ಡಾ. ಗೊ.ರು. ಚನ್ನಬಸಪ್ಪ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗ: ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಬೆಂಗಳೂರಿನ ಕೆ.ಮರುಳಸಿದ್ದಪ್ಪ (2020-21), ಬೆಳಗಾವಿಯ ಹಸನ್ ನಯೀಂ ಸುರಕೋಡ (2021-22), ಕೋಲಾರದ ಕೆ.ರಾಮಯ್ಯ (2022-23), ಬಳ್ಳಾರಿಯ ವೀರಸಂಗಯ್ಯ (2023-24). ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020-21), ಮಂಡ್ಯದ ಡಾ. ಆರ್.ಸುನಂದಮ್ಮ (2021-22), ಕಲಬುರಗಿಯ ಮೀನಾಕ್ಷಿ ಬಾಳಿ (2022-23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023-24). ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ.ಲಿಂಗದಹಳ್ಳಿ ಹಾಲಪ್ಪ (2021-22), ಮಂಗಳೂರಿನ ಡಾ. ಬಿ.ಶಿವರಾಮ ಶೆಟ್ಟಿ (2022-23). ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಬಿ.ಟಿ.ಲಲಿತಾ ನಾಯಕ್ ಈ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.
ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ ವಿಭಾಗ:ಪಂಪ ಪ್ರಶಸ್ತಿ: ಶಿವಮೊಗ್ಗದ ನಾ. ಡಿಸೋಜ (2023-24). ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಮಹಾರಾಷ್ಟ್ರದ ಡಾ.ಕೆ.ವಿಶ್ವನಾಥ ಕಾರ್ನಾಡ್ (2022-23) ಹಾಗೂ ಬೆಳಗಾವಿಯ ಚಂದ್ರಕಾಂತ ಪೋಕಳೆ (2023-24). ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್ (2022-23) ಹಾಗೂ ರಾಯಚೂರಿನ ಎಚ್.ಎಸ್.ಮುಕ್ತಾಯಕ್ಕ (2023-24). ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ (2022-23) ಹಾಗೂ ಮಂಗಳೂರಿನ ಸದಾನಂದ ಸುವರ್ಣ (2023-24). ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ (2022-23) ಹಾಗೂ ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023-24). ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಹಂಪಿಯ ಡಾ.ಮೊಗಳ್ಳಿ ಗಣೇಶ್ (2021-22). ಮರಾಠಿ ಲೇಖಕ ಉತ್ತಮ ಕಾಂಬ್ಳೆ (2022-23) ಹಾಗೂ ದಾವಣಗೆರೆಯ ಬಿ.ಟಿ.ಜಾಹ್ನವಿ (2023-24) ಪ್ರಶಸ್ತಿಗಳು ತಲಾ 5 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದ್ದು, ಡಾ. ಬರಗೂರು ರಾಮಚಂದ್ರಪ್ಪ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.
ಕಲಾ ಪ್ರಶಸ್ತಿ ವಿಭಾಗ:ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಮೈಸೂರಿನ ಜಿ.ಎಲ್.ಎನ್.ಸಿಂಹ (2022-23) ಹಾಗೂ ಕಲಬುರಗಿಯ ಬಸವರಾಜ್ ಎಲ್. ಜಾನೆ (2023-24). ಜಾನಪದಶ್ರೀ ಪ್ರಶಸ್ತಿ ವಾದನ: ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022-23) ಹಾಗೂ ಚಿಕ್ಕಮಗಳೂರಿನ ಜಿ.ಪಿ.ಜಗದೀಶ್ (2023-24). ಜಾನದಪಶ್ರೀ ಪ್ರಶಸ್ತಿ ಗಾಯನ: ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022-23) ಹಾಗೂ ಚಿತ್ರದುರ್ಗದ ಹಲಗೆ ದುರ್ಗಮ್ಮ (2023-24) ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಡಾ. ವಿ.ಟಿ.ಕಾಳೆ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.
ಸಂಗೀತ, ನೃತ್ಯ ಪ್ರಶಸ್ತಿ ವಿಭಾಗ:ಶ್ರೀ ನಿಜಗುಣ-ಪುರಂದರ ಪ್ರಶಸ್ತಿ: ಮೈಸೂರಿನ ಎಂ.ಕೆ.ಸರಸ್ವತಿ (2022-23) ಹಾಗೂ ಧಾರವಾಡದ ಅಕ್ಕಮಹಾದೇವಿ ಮಠ (2023-24). ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸೀ (2022-23) ಹಾಗೂ ಮೈಸೂರಿನ ಕೃಷ್ಣಗಿರಿ ರಾಮಚಂದ್ರ (2023-24). ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022-23) ಹಾಗೂ ಬೆಂಗಳೂರಿನ ರೇವತಿ ನರಸಿಂಹನ್ (2023-24). ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ಶಂಕರ್ (2022-23), ಶಿವಮೊಗ್ಗದ ಎನ್. ಬಿ.ಶಿವಲಿಂಗಪ್ಪ (2023-24). ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಡಾ. ನರಸಿಂಹಲು ವಡವಾಟಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜ.31ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ಈ ಹಿಂದೆ ೋಷಣೆ ಮಾಡಲಾಗಿದ್ದ 2018-19, 2020-21, 2021-22 ಹಾಗೂ 2022-23ನೇ ಸಾಲಿನ 31 ಪ್ರಶಸ್ತಿಗಳನ್ನು (ನಾನಾ ಕಾರಣಗಳಿಂದ ವಿತರಣೆ ಆಗಿರಲಿಲ್ಲ) ಪ್ರದಾನ ಮಾಡಲಾಗುವುದು. 2018-19ನೇ ಸಾಲಿನ ಬಿ.ವಿ.ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದ ಶಿವಮೊಗ್ಗದ ಎಸ್. ಮಾಲತಿ ಹಾಗೂ 2021-22ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದ ಬಾಬಣ್ಣ ಕಲ್ಮನಿ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − 2 =
Remember me
