ಬಳ್ಳಾರಿ:ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಸರ್ಕಾರದ ಶೇ. 40 ಕಮಿಷನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇನ್ನಷ್ಟು ಅಕ್ರಮ ಹೊರಬಿದ್ದಿದೆ. ಈ ಹಿಂದೆ ಗುತ್ತಿಗೆದಾರರ ವಿಷಯದಲ್ಲಿ ಕಮಿಷನ್ ವಿರುದ್ಧ ಕೂಗೆದ್ದಿತ್ತು, ಈಗ ಕಲಾವಿದರೂ ಕಮಿಷನ್​ ವಿರುದ್ಧ ದನಿ ಎತ್ತಿದ್ದಾರೆ. ಪರಿಣಾಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ ಅಧಿಕಾರಿಯಾಗಿರುವ ಸಿದ್ದಲಿಂಗೇಶ್ವರ್ ರಂಗಣ್ಣನವರ್ ಅಮಾನತು ಆದವರು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಮಿಷನ್​ಗಾಗಿ ಕಲಾವಿದರಲ್ಲಿ ಬೇಡಿಕೆ ಇಟ್ಟ ಕುರಿತ ಆಡಿಯೋ ಕ್ಲಿಪ್​ ಬಹಿರಂಗಗೊಂಡು ವೈರಲ್ ಆದ ಹಿನ್ನೆಲೆಯಲ್ಲಿ ಅಧಿಕಾರಿ ಅಮಾನತುಗೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಕ್ಕೆ ಕಲಾವಿದರಿಂದ ಕಮಿಷನ್​ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮವೊಂದಕ್ಕೆ ಹತ್ತು ಸಾವಿರ ರೂ. ಕೊಟ್ಟರೆ ಹೆಚ್ಚು ಹೆಚ್ಚು ಕಾರ್ಯಕ್ರಮ ಕೊಡುವ ವಿಚಾರವೂ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಕೆಲವೊಮ್ಮೆ ಕಾರ್ಯಕ್ರಮ ಮಾಡದಿದ್ದರೂ ಹಣ ಖಾತೆಗೆ ಹಾಕಿ, ಬಳಿಕ ಫಲಾನುಭವಿಗಳಿಂದ ನಗದು ರೂಪದಲ್ಲಿ ಕಮಿಷನ್ ಪಡೆಯುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ತಮ್ಮ ಕಮಿಷನ್ ಧಂದೆಗಾಗಿ ಸಿದ್ದಲಿಂಗೇಶ್​ ಇಲಾಖೆಯ ಡಿ ಗ್ರೂಪ್​ನ ಮಹಿಳಾ ಸಿಬ್ಬಂದಿಯ ಮೊಬೈಲ್​ಫೋನ್​ಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಜಂಟಿ ನಿರ್ದೇಶಕರಿಗೆ ಕೊಡಬೇಕು ಎಂದು ಕಮಿಷನ್ ವಸೂಲಿ ಮಾಡಲಾಗುತ್ತಿದ್ದು, ನಗದು ರೂಪದಲ್ಲೇ ಕಮಿಷನ್ ಕೊಡಬೇಕು ಎಂದು ಕೂಡ ತಾಕೀತು ಮಾಡುತ್ತಿರುವುದು ಆಡಿಯೋದಲ್ಲಿದೆ. ಈ ಆಡಿಯೋ ಕ್ಲಿಪ್ ವೈರಲ್ ಆಗಿದ್ದಲ್ಲದೆ, ಕಲಾವಿದರೂ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
50% ಆಫರ್​: ಸಂಚಾರ ಪೊಲೀಸರು ಮೊದಲ ದಿನ ಸಂಗ್ರಹಿಸಿದ ದಂಡ ಎಷ್ಟು?
ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
