ಬೆಂಗಳೂರು:‘ಕನ್ನಡ ಕಟ್ಟುವಿಕೆ ಮತ್ತು ಕಾವ್ಯ ಕಟ್ಟುವಿಕೆ ಎರಡೂ ಸಹ ಒಂದೇ ಎಂಬುದನ್ನು ನಾವು ಮರೆಯಬಾರದು’ ಎಂದು ಕವಿ ಡಾ. ದೊಡ್ಡರಂಗೇಗೌಡ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಬೆಂ.ನಗರ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಕನ್ನಡ ಕಾರ್ಯಕರ್ತರ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿಗೆ ಮುದ, ಹೃದಯಕ್ಕೆ ಹದ ನೀಡುವಂತಹ ಭಾಷೆಯಲ್ಲಿ ಕಾವ್ಯ ರಚನೆಯಾದರೆ ಎಲ್ಲರೂ ಅಭ್ಯಾಸ ಮಾಡುತ್ತಾರೆ ಎಂದರು.
ಪ್ರಸ್ತುತ ಕನ್ನಡದ ವಿಷಯದಲ್ಲಿನ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಇಂತಹ ಕಮ್ಮಟದಲ್ಲಿ ಬಹಳ ಪ್ರಯೋಜನಕಾರಿ. ಕನ್ನಡಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ಸಣ್ಣ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೃಹತ್ತಾಗಿ ಬೆಳೆಯಲಿವೆ. ಈ ಮೂಲಕ ಕಾರ್ಯಕರ್ತರು ಆಗಿಂದಾಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುವ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಇನ್ನು ಕನ್ನಡದ ವಿಷಯದಲ್ಲಿ ಕನ್ನಡಿಗರಲ್ಲಿ ಹೊಸತನ, ಹುಮ್ಮಸ್ಸು ಮತ್ತು ಕಿಚ್ಚನ್ನು ತುಂಬಬೇಕೆಂಬ ಅಭಿಲಾಷೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷ ಪ್ರಕಾಶ್ ಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಮಾತನಾಡಿ, ಕನ್ನಡಕ್ಕೆ ಎದುರಾಗುವ ಕಗ್ಗಂಟುಗಳನ್ನು ಮತ್ತು ಕನ್ನಡ ಉಲ್ಲಂಘನೆ ಮಾಡುವವರನ್ನು ಸರಿಯಾದ ದಾರಿಗೆ ತರಲು ಕಾನೂನಾತ್ಮಕ ಕ್ರಮಗಳು ಅಗತ್ಯ. ಹೊರಗಿನಿಂದ ಬಂದವರಿಗೆ ಕಾನೂನಾತ್ಮಕವಾಗಿಯೇ ಉತ್ತರ ನೀಡುವುದು ಒಳಿತು ಎಂದರು.
ಸರ್ಕಾರವೇ ಅವಕಾಶ ನೀಡಿ ಬೆಳೆಸಿದ ನೂರಾರು ಕಂಪನಿಗಳು ಇಂದು ಸರ್ಕಾರು ಮತ್ತು ಸ್ಥಳೀಯರ ವಿರುದ್ಧವೇ ತಿರುಗಿ ಬೀಳುತ್ತಿವೆ. ಸರ್ಕಾರವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ಇಂತಹ ಸಂಸ್ಥೆಗಳಲ್ಲಿ ಕನ್ನಡ ಪಸರಿಸುವಂತೆ ಮಾಡಲು ಕಾನೂನಿಂದ ಮಾತ್ರವೇ ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಎಲ್.ಎನ್. ಮುಕುಂದರಾಜ್, ಕನ್ನಡ ಪರ ಚಿಂತಕ ಅರುಣ್ ಜಾವಗಲ್, ಚಿತ್ರ ನಿರ್ದೇಶಕ ಕೆ.ಎಂ.ಚೈತನ್ಯ, ಸಂಘದ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಉಪಸ್ಥಿತರಿದ್ದರು.
ಸರ್ಕಾರವೊಂದೇ ಅಲ್ಲ, ಕನ್ನಡ ಕಟ್ಟುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಕನ್ನಡದ ಕೆಲಸವನ್ನು ಸೇವೆ ಎಂದು ಮಾಡಿದಾಗ ಸಾರ್ಥಕವಾಗಲಿದೆ.– ಎಂ. ಪ್ರಕಾಶ್ ಮೂರ್ತಿ, ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twenty =
Remember me
