|ಮರಿದೇವ ಹೂಗಾರಹಾವೇರಿವಿದೇಶದಲ್ಲಿ ಕನ್ನಡ ಸಂಘಗಳಿವೆ. ಕನ್ನಡ ಭಾಷೆ ಕಟ್ಟುವ ಮನಸ್ಸುಗಳಿವೆ. ಕವಿತೆ, ಕಾದಂಬರಿ, ಕಥೆಗಳ ಹಂದರವಿದೆ. ಕನ್ನಡ ಸಮ್ಮೇಳನ ನಡೆಸುವುದೊಂದೇ ಬಾಕಿ ಇದೆ. ಮುಂದಿನ ವರ್ಷ ದುಬೈನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ವಿದೇಶದ ಉದ್ದಗಲಕ್ಕೂ ಕನ್ನಡ ಕಂಪು ಪಸರಿಸುವ ಬಯಕೆ…
ಪಾಪು-ಚಂಪಾ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದೇಶದಲ್ಲಿ ಕನ್ನಡ ಡಿಂಡಿಮ’ ಗೋಷ್ಠಿಯಲ್ಲಿ ಅನಿವಾಸಿ ಭಾರತೀಯರಿಂದ ವ್ಯಕ್ತವಾದ ಹಿರಿದಾಸೆ…
ವಿದೇಶದಲ್ಲಿ ಕನ್ನಡ ಧ್ವಜ ಹಾರಾಡುತ್ತಿದೆ. ಕನ್ನಡದ ಮನಸ್ಸುಗಳು ಒಂದುಗೂಡಿ ಪ್ರತಿ ವರ್ಷ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕನ್ನಡ ಕಟ್ಟಾಳುಗಳು ನೆಲೆಯೂರಿದ್ದಾರೆ. ಅವರಿಗೆ ಸಮ್ಮೇಳನದ ಅಗತ್ಯವಿದೆ. ಕನ್ನಡದ ಕಂಪು ಹರಡಿಸುವ ಬಯಕೆ ಇದೆ. ಮುಂದಿನ ವರ್ಷ ದುಬೈನಲ್ಲಿ ಕನ್ನಡ ಸಮ್ಮೇಳನ ಆದರೆ, ಇನ್ನಷ್ಟು ಶಕ್ತಿ ಬರಲಿದೆ ಎಂದು ದುಬೈನ ಸವೋರ್ತ್ತಮ ಶೆಟ್ಟಿ ಸದಾಶಯ ವ್ಯಕ್ತಪಡಿಸಿದರು.
ಅಲ್ಲದೆ, ಅನಿವಾಸಿಗಳೆಂದರೆ ಆದಿವಾಸಿಗಳೆಂದು ಭಾವಿಸಬೇಡಿ. ಅಗತ್ಯವಿಲ್ಲದ ಭಾರತೀಯರು (ನಾನ್​ ರಿಕ್ವೆರ್ರ್ಡ್​ ಇಂಡಿಯನ್ಸ್​) ಎಂದು ಪರಿಭಾವಿಸಬೇಡಿ. ರಾಜ್ಯ ಸರ್ಕಾರ ನಮಗಾಗಿ ಒಂದು ಎಂಎಲ್​ಸಿ ಸ್ಥಾನ ಕೊಡಲಿ. ಎನ್​ಆರ್​ಐ ಮಂತ್ರಿ ಸ್ಥಾನ ಕೊಡಿ. ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಪೂರಕವೆಂಬಂತೆ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಂತಾರಾಷ್ಟ್ರೀಯ ಘಟಕಗಳ ಸಲಹಾ ಸಮಿತಿ ಸದಸ್ಯೆ ಡಾ. ಆರತಿ ಕೃಷ್ಣ ಮಾತನಾಡಿ, ವಿದೇಶದಲ್ಲಿರುವ ಕನ್ನಡಿಗರು ಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ಯಂತ್ರಾಂಶ, ತಂತ್ರಾಂಶಗಳಲ್ಲಿ ಮುಂದುವರಿದಿದ್ದಾರೆ. ಸಾಮಾಜಿಕ-ಆರ್ಥಿಕ ಬೆಂಬಲ ನೀಡುತ್ತಿದ್ದಾರೆ. ಲೋಬೊ ಎಂಬುವವರು ಅನಿವಾಸಿ ಭಾರತೀಯರ ನೋವು-ನಲಿವುಗಳ ಕುರಿತು ವರದಿ ಮಂಡಿಸಿದ್ದಾರೆ. ಸರ್ಕಾರ ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾಯೋರ್ನ್ಮುಖವಾಗಬೇಕು. ಇದಕ್ಕೂ ಮೊದಲು ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡುವ ಅಗತ್ಯವಿದೆ ಎಂದರು.
ವಿದೇಶದಲ್ಲಿ ಕನ್ನಡ ಸಂಗಳ ಕಂಪು ಕುರಿತು ಮಾತನಾಡಿದ ರವೀಂದ್ರ ಕುಲಕರ್ಣಿ, ನವಿಕಾ ಹಾಗೂ ಕನಸು ಎಂಬ ಒಕ್ಕೂಟಗಳಿಂದ ಜರ್ಮನಿಯಲ್ಲಿ ಕನ್ನಡ ಕಟ್ಟುತ್ತಿದ್ದೇವೆ. ಬೇರೆ ದೇಶದ ನಿವಾಸಿಗಳಿಗೆ ಕನ್ನಡ ಪಾಠ ಹೇಳುತ್ತಿದ್ದೇವೆ. ಕನ್ನಡ ಪುಸ್ತಕಾಲಯವಿದೆ. ಕನ್ನಡ ಅಕಾಡೆಮಿ ಮೂಲಕ ಕನ್ನಡ ಕಲಿ-ನಲಿ ಶುರು ಮಾಡಿದ್ದೇವೆ. 15 ದೇಶದಲ್ಲಿ 4 ಸಾವಿರ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ವಿಶ್ವದಲ್ಲಿ ಕನ್ನಡ ಭಾಷೆ ಅರಳಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದರು.
ಎಸ್​.ಎಲ್​. ಶ್ರೀನಿವಾಸಮೂರ್ತಿ, ಕನ್ನಡಕ್ಕೆ ವಿದೇಶಿಯರ ಕೊಡುಗೆ ಕುರಿತು ಮಾತನಾಡಿ, ವಿದೇಶಿಗರು ಭಾರತಕ್ಕೆ ಬಂದು ಅದರಲ್ಲೂ ಕರ್ನಾಟಕದಲ್ಲಿ ಉಳಿದು ಕನ್ನಡ ಭಾಷೆ ವಿಸ್ತರಿಸಲು ಅನೇಕ ಕ್ರಮ ಕೈಗೊಂಡರು. ವಾಲ್ಟರ್​ ಈಲಿಯಟ್​, ವಿಲಿಯಂ ಅಲೆನ್​ ರಸೆಲ್​, ಹರ್ಮನ್​ ಮೊಗ್ಲಿಂಗ್​, ಕಿಟಲ್​, ವಿಲಿಯಂ ಕ್ಯಾರಿ ಸೇರಿದಂತೆ ಬಹಳಷ್ಟು ವಿದೇಶಿಗರು ಕನ್ನಡ ಭಾಷೆ ಅಧ್ಯಯನ ಮಾಡಿ ಅದರ ಉಳಿವಿಗೆ ಶ್ರಮಿಸಿದರು ಎಂದು ಇತಿಹಾಸ ಮೆಲುಕು ಹಾಕಿದರು.
ಭಾರತೀಯರು ವಿದೇಶದಲ್ಲಿದ್ದರೂ ಕನ್ನಡದ ನೆಲದೊಂದಿಗೆ ಭಾವನಾತ್ಮಕ ಬೆಸುಗೆ ಹೊಂದಿದ್ದಾರೆ. ಕನ್ನಡ ಸಾಹಿತ್ಯವನ್ನು ವಿದೇಶದಲ್ಲೂ ರಚಿಸುತ್ತಿದ್ದಾರೆ. ಅಮೆರಿಕ ದೇಶವೊಂದರಲ್ಲಿಯೇ 150ಕ್ಕೂ ಹೆಚ್ಚು ಕನ್ನಡ ಲೇಖಕರು ಇದ್ದಾರೆ. ಇದರಲ್ಲಿ 60ಕ್ಕೂ ಹೆಚ್ಚು ಲೇಖಕರ ಪ್ರಕಟಿತ ಕೃತಿಗಳಿವೆ ಎಂದರು. ಇಂಥ ಲೇಖಕರು ಒಟ್ಟುಗೂಡಿ ಕನ್ನಡ ಭಾಷೆಯನ್ನು ವಿದೇಶದಲ್ಲಿಯೂ ಅರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕದ ಜ್ಯೋತಿ ಮಹಾದೇವ ಅವರು ವಿದೇಶದಲ್ಲಿ ಕನ್ನಡ ಸಾಹಿತಿಗಳು’ ಕುರಿತು ವಿವರಿಸಿದರು. ಲಂಡನ್​ನ ಅಶ್ವಿನ್​ಕುಮಾರ, ಪವನ ದೇಸಾಯಿ ಇತರರು ಉಪಸ್ಥಿತರರಿದ್ದರು.
6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು
ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..
ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + 5 =
Remember me
