ಬೆಂಗಳೂರು: ಮುಂಬೈನಲ್ಲಿ ಮಕ್ಕಳಿಗಾಗಿ ಇರುವ ಸಂಸ್ಥೆ ‘ಚಿಣ್ಣರ ಬಿಂಬ’ 21 ವರ್ಷ ಪೂರೈಸಿದ ಸಂಭ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಗರಿ ಸಿಕ್ಕಿಸಿಕೊಂಡಿದೆ.ಹೊರನಾಡಿನ ಮಕ್ಕಳಿಗಾಗಿ ಸ್ಥಾಪಿಸಿದ ಈ ಸಂಸ್ಥೆಯ ಕಾರ್ಯ ಅಮೋಘ. 50 ಮಕ್ಕಳಿಂದ ಆರಂಭವಾಗಿ ಏಳು ಸಾವಿರ ಮಕ್ಕಳ ಮತ್ತು ಅವರ ಪಾಲಕರ ಪ್ರೀತಿಯ ಸಂಸ್ಥೆಯಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.ಮರಾಠಿ ನೆಲದಲ್ಲಿ ನಮ್ಮ ಜನರನ್ನು ಒಂದುಗೂಡಿಸುವುದು, ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬೆಳೆಸುವಲ್ಲಿ, ಉಳಿಸುವಲ್ಲಿ ಹೋರಾಡುತ್ತಲೇ ಬಂದಿದೆ. 12 ವರ್ಷಗಳ ಹಿಂದೆ ಆರಂಭವಾದ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ ಚಿಣ್ಣರ ಬಿಂಬದ ಎಲ್ಲಾ ಸದಸ್ಯರು ಕನ್ನಡ ಮಾತನಾಡ ಬಲ್ಲರು, ಹಾಡಬಲ್ಲರು, ನಾಟಕವಾಡಬಲ್ಲರು, ಯಕ್ಷಗಾನ ಪ್ರಸಂಗ ಆಡಿ ತೋರಿಸಬಲ್ಲರು.ಈ ಚಿಣ್ಣರ ಬಿಂಬದ ರೂವಾರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪ್ರಕಾಶ್ ಭಂಡಾರಿಯವರು. ಅವರ ನೇತೃತ್ವದ ತಂಡದ ನಿಸ್ವಾರ್ಥ ಪರಿಶ್ರಮಕ್ಕೆ ಈಗ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 3 =
Remember me
