ವಾರಾಣಸಿ:ಕಾಶಿಯಲ್ಲಿ ನಿರ್ಲಕ್ಷ್ಯಕ್ಕೊಳಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನ ರಕ್ಷಣೆಗೆ ಕಾಶೀ ಪೀಠ ಸೂಕ್ತ ಕ್ರಮ ಕೈಗೊಂಡಿದೆ.ಇತ್ತೀಚೆಗೆ ಕಾಶಿಯಲ್ಲಿ ಕನ್ನಡ ಶಾಸನ ಒಂದನ್ನು ಬಟ್ಟೆ ತೊಳೆಯುವುದಕ್ಕೆ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದನ್ನು ಗಮನಿಸಿದ ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪೀಠದ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿ ಅದರ ರಕ್ಷಣೆಗೆ ಮುಂದಾಗಿದ್ದರು.
ಕಾಶೀ ನಗರದಿಂದ ಸುಮಾರು15ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಬೃಹತ್ ಸರೋವರದ ಬಳಿ ಕನ್ನಡದ ಶಾಸನವಿದ್ದು,ಕೆಳದಿ ರಾಜ ಶಿವಪ್ಪನಾಯಕರು ಜನರ ಅನುಕೂಲಕ್ಕೆ ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿತ್ತು.
ಸ್ಥಳೀಯರು ಇದರ ಮಹತ್ವ ಅರಿಯದೆ ಶಾಸನವನ್ನು ಸರೋವರದ ಮೇಲೆ ದಾಟುಗಲ್ಲಾಗಿ ಹಾಗೂ ಕೆಲವರು ಬಟ್ಟೆ ತೊಳೆಯಲು ಬಳಸುತ್ತಿದ್ದರು.ಇದನ್ನು ಪರಿಶೀಲಿಸಿದ ಕಾಶೀ ಜಗದ್ಗುರುಗಳು ಕಪಿಲಧಾರ ಗ್ರಾಮ ಪಂಚಾಯಿತಿ ಅಧಿಕಾರಿಯ ಗಮನಕ್ಕೆ ತಂದು ಸ್ವತ:ಕಾಶೀ ಪೀಠದ ಗುರುಕುಲದ ವಿದ್ಯಾರ್ಥಿಗಳೊಂದಿಗೆ ತೆರಳಿ ಶಾಸನವನ್ನು ಸರೋವರದ ಕಟ್ಟೆಯ ಮೇಲೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರ ಪ್ರದರ್ಶನಕ್ಕೆ ಕ್ರಮಕೈಗೊಂಡಿದ್ದಾರೆ.
ಹೊಸದಾಗಿ ಸ್ಥಾಪಿಸಿದ ಶಾಸನ ಶಿಲೆಗೆ ಪುಷ್ಪಮಾಲೆ ಹಾಕಿದ ಕಾಶೀ ಜಗದ್ಗುರುಗಳು ಸರೋವರದ ದಂಡೆಯ ಮೇಲಿರುವ ಪುರಾತನ ವೃಷಭಧ್ವಜೇಶ್ವರ ಮಹಾದೇವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಕನ್ನಡ ಶಾಸನ ರಕ್ಷಣೆ ವಿಷಯದಲ್ಲಿ ಕಾಶೀ ಜಗದ್ಗುರುಗಳ ಕಾರ್ಯ ಇತಿಹಾಸ ಪ್ರಿಯರು ಹಾಗೂ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − 1 =
Remember me
